ಲಿಂಗಾಯತ ಧರ್ಮ ಎಂದರೆ ಮಾನವ ಧರ್ಮ . ಪ್ರಸನ್ನ ಡಿ ಸಾಗರ್

Religious Religious

Posted on 26-10-2025 |

Share: Facebook | X | Whatsapp | Instagram


ಲಿಂಗಾಯತ ಧರ್ಮ ಎಂದರೆ ಮಾನವ ಧರ್ಮ .  ಪ್ರಸನ್ನ ಡಿ ಸಾಗರ್

ಲಿಂಗಾಯತ ಧರ್ಮ ಎಂದರೆ ಮಾನವ ಧರ್ಮ .

ಪ್ರಸನ್ನ ಡಿ ಸಾಗರ್ 


ಶಿವಮೊಗ್ಗ ಅ 26 ಲಿಂಗಾಯತ ಧರ್ಮ ಎಂದರೆ ಮಾನವ ಧರ್ಮ ಎಂದು ರಂಗಾಯಣ ನಿರ್ದೇಶಕರಾದ ಪ್ರಸನ್ನ ಡಿ.ಸಾಗರ ರವರು ಹೇಳಿದರು.ಅವರು ರವೀಂದ್ರ ನಗರದ ಪತ್ರಕರ್ತ ಹಾಲಸ್ವಾಮಿ ಯವರ ಬಸವ ಸದನ ಮನೆಯಲ್ಲಿ ನಡೆದ ಚಿಂತನ ಕಾರ್ತಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

ತಮ್ಮ ತಂದೆ ಮರಾಠಿ ,ತಾಯಿ ಲಿಂಗಾಯತ, ಹೆಂಡತಿ ಮತ್ತೊಂದು ಜಾತಿಯಾಗಿ ನಿಜವಾದ ಜಾತ್ಯತೀತ ಮಾನವ ಧರ್ಮ ತಮ್ಮ ಮನೆಯಲ್ಲಿ ಇದ್ದುದರಿಂದ ತಮಗೆ ಜಾತಿಯ ಸೋಂಕು ತಗಲಲಿಲ್ಲ.ಅಪ್ಪ ಜನಿವಾರ ಅಮ್ಮ ಶಿವದಾರ ಆಗಿದ್ದರು ತಮಗೆ ಯಾವುದೇ ಧರ್ಮದ ಹಂಗು ಇರಲಿಲ್ಲ ಅನೇಕ ಕಡೆ ಬಸವಣ್ಣನವರ ಜಯಂತಿ ಎಂದರೆ ಎತ್ತುಗಳ ಜಯಂತಿ ಮಾಡುತ್ತಾರೆ ಉತ್ತರ ಕರ್ನಾಟಕದ ಕಡೆ ಕಲ್ಯಾಣದ ಮಾದರಸ ಮಾದಲಾಂಬಿಕೆ ಮಗ ಬಸವಣ್ಣನವರನ್ನು ಪೂಜಿಸುತ್ತಾರೆ.ಈಗ ಜನರಿಗೆ ಲಿಂಗಾಯತ ಧರ್ಮ ವೀರಶೈವ ಧರ್ಮ ಎಂದರೆ ಏನೆಂದು ಅರ್ಥವಾಗಿದೆ.ಎಂದರು 

ಚೇತನ್ ತಾರಾನಾಥ್ ಕಡೇ ಕೊಪ್ಪ, ಸಾಮಾಜಿಕ ಹೋರಾಟಗಾರರು ಮತ್ತು ನಿರ್ಭಯ ಸಂಘದ ಸ್ಥಾಪಕರು ಮಾತನಾಡಿ ಬಸವ ಕೇಂದ್ರದ ಸ್ವಾಮೀಜಿಗಳ ಸಹಕಾರದ ಮುಖಾಂತರ ಸಾಮಾಜಿಕ ಕಾರ್ಯಕ್ರಮ ಕೈ ಗೊಂಡು

ಬೀಜದ ಉಂಡೆ ಗಳನ್ನ ತಯಾರಿಸಿ ಎಲ್ಲಾಕಡೆ ಹರಡಲಾಯಿತು.ಹಾಳಾಗಿರುವ ಬಸ್ಟಾಂಡ್ ಶಾಲೆಯ ಗೋಡೆ ಸ್ವಚ್ಚ ಮಾಡುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು.ಕೆಲವು ಶಾಲೆಗಳಿಗೆ ಕ್ಲಾಸ್ ರೂಂ ಕಟ್ಟಿಸಿಕೊಟ್ಟು ಆಯಾ ಶಾಲೆಗಳು ಪ್ರಗತಿ ಹೊಂದಲು ಸಹಾಯ ಮಾಡಲಾಯಿತು.ಅನೇಕ ಹಳ್ಳಿಗಳನ್ನು ಸ್ವಚ್ಚ ಮಾಡಲಾಯಿತು ಎಂದರು.

ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕರಾದ ಅ.ಮ.ಶಿವಮೂರ್ತಿ ಉಪಸ್ಥಿತರಿದ್ದರು.

     ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮಿಗಳು ಮಾತನಾಡಿ ಶಿವದಾರ ಜನಿವಾರ ಗಳಲ್ಲಿ ಜನಿವಾರ ಹಳೆಯದು ಆದರೆ ಶಿವದಾರ ಎನ್ನುವುದು ಇರಲಿಲ್ಲ ಎದೆಯ ಮೇಲೆ ಲಿಂಗ ಕಟ್ಟಿಕೊಳ್ಳುವ ಲಿಂಗಾಯತರು ಬ್ರಾಹ್ಮಣರುಗಳಿಗಿಂತ ತಾವೇನೂ ಕಡಿಮೆ ಇಲ್ಲ ಎಂದು ತೋರಿಸಲು ಉದ್ದನೆಯ ದಾರ ಬಳಸಿ ಲಿಂಗ ಕಟ್ಟಿಕೊಂಡರು, ಕೆಲವು ವರ್ಷಗಳ ನಂತರ ಪುನಃ ಕೆಲವರು ಎದೆಯ ಮೇಲೆ ಲಿಂಗ ಧರಿಸಲು ಪ್ರಾರಂಭಿಸಿದರು.ಬಸವಣ್ಣ ಪ್ರಾರಂಭದಲ್ಲಿ ಜನಿವಾರವನ್ನು ಧರಿಸಿ ಕೊನೆಗೆ ಜನಿವಾರ ಧರಿಸುವ ಜನರು ಅನ್ಯಾಯ ಕಂಡು ಅದನ್ನು ಹರಿದು ಬಿಸುಟರು. ಲಿಂಗಾಯತರಲ್ಲಿ ದಾಸೋಹ ಬಹಳ ಮುಖ್ಯವಾದುದು.ದಾಸೋಹ ಎಂದರೆ ಕೇವಲ ಊಟ ಹಾಕುವುದು ಮಾತ್ರವಲ್ಲ ಊಟ ಹಾಕಬೇಕೆಂಬ ಭಾವನೆಯೇ ದಾಸೋಹ.ಶರಣ ಉರಿಲಿಂಗ ಪೆದ್ದಿಯ ಹೆಂಡತಿ ಕಾಳವ್ವೆ ಸತ್ಯ ಮತ್ತು ಶುದ್ಧವಾಗಿ ಮಾಡುವ ಕೆಲಸವೇ ಕಾಯಕ ಎಂದಿದ್ದಾರೆ.ಸಕಲ ಜೀವ ರಾಶಿಗಳಿಗೂ ಲೇಸನ್ನೇ ಬಯಸಬೇಕು.ಎನ್ನುವುದೇ ಶರಣರ ನೀತಿಯಾಗಿದೆ ತನು ಮನ ಭಾವ ಮೂರು ಶುದ್ಧವಾಗಿರಬೇಕು.ವಿಚಾರ ಎನ್ನುವುದು ಒಂದು ಮಾತಿನೊಳಗೆ ಇರುತ್ತದೆ.ಇದ್ದಹಾಗೇ ಇರಲ್ಲ ಎಂಬ ಮಾತಿನಲ್ಲಿ ನೂರಾರು ಅರ್ಥವಿದೆ ಎಂದರು.

ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ಶ್ರೀಮತಿ ಶೀಲಾ ಸುರೇಶ್ ಮಾಡಿದರು.

Search
Recent News