Posted on 25-10-2025 |
Share: Facebook | X | Whatsapp | Instagram
ಶಿವಮೊಗ್ಗ ಅ.24 ಸಾಹಿತ್ಯದ ಓದು ಬದುಕಿಗೆ ಸಂತೋಷ ನೀಡುತ್ತದೆ ಎಂದು ಡಾ.ಎಂ.ಕೆ.ವೀಣಾರವರು ಹೇಳಿದರು
ಅವರು ಬಹುಮುಖಿಯ 61ನೇ ಕಾರ್ಯಕ್ರಮದಲ್ಲಿ ಅಮೆರಿಕದ ಕವಿ ರಾಬರ್ಟ್ ಪ್ರಾಸ್ಟ್ ಬರೆದ ಮೆಂಡಿಂಗ್ ವಾಲ್ ಕವನದ ಬಗ್ಗೆ ಮಾತನಾಡುತ್ತಿದ್ದರು.ಪ್ರಾಸ್ಟ್ ರವರು ಹಲವು ಕವನ ಸಂಕಲನ ಪ್ರಕಟಿಸಿದ್ದಾರೆ.
ಈ ಕವನದಲ್ಲಿ ಒಬ್ಬ ವ್ಯಕ್ತಿ ತನ್ನ ಮತ್ತು ಪಕ್ಕದ ಮನೆಯವರು ಮಧ್ಯೆ ಹಾಕುವ ಒಂದು ಗೋಡೆ ಬಗ್ಗೆ ಮಾತನಾಡುತ್ತಾನೆ.ಈ ಕವನದಲ್ಲಿ ಮನುಷ್ಯನ ಗೊಂದಲಗಳ ಬಗ್ಗೆ .ಬದುಕಿನ ದಾರಿ ಬಗ್ಗೆ ತಿಳಿಸುತ್ತಾನೆ, ಸಾರ್ವತ್ರಿಕ ವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಚರ್ಚೆ ಮಾಡಿ ಕೊನೆಗೆ ಓದುಗರಿಗೆ ಇದನ್ನು ಚರ್ಚೆಗೆ ಬಿಡುವ ಈತನ ಶೈಲಿ ಆಕರ್ಷಕವಾದದ್ದು.ಇಲ್ಲಿ ಕವಿ
ಎರಡು ಮನೆಗಳ ಮದ್ಯೆ ಕಲ್ಲಿನ ಗೋಡೆ ಬೇಕೋ ಬೇಡವೋ ಎಂದು ಚಿಂತೆ ಮಾಡುತ್ತಲೇ ಚರ್ಚೆ ದ್ವಂದ್ವಕ್ಕೆ ತೊಡಗುತ್ತಾನೆ,ಇಲ್ಲಿ ಗೋಡೆ ಸಾಂಕೇತಿಕವಾಗಿ ಬರುತ್ತದೆ.ಇಬ್ಬರ ನಡುವೆ ಮಧುರ ಸಂಬಂಧ ಉಳಿಯಬೇಕಾದರೆ ಬೇಲಿ ಅಗತ್ಯ ಎನ್ನುತ್ತಾನೆ.ಮನುಷ್ಯ ಮನುಷ್ಯರ ನಡುವಿನ ಸಂಬಂಧ ಬೆಳೆಯಲು ಬೇಲಿ ಬೇಡ ಅಂದು ಕೊಂಡರು ಕಟ್ಟುವ ಕೆಲಸವನ್ನು ಮುಂದುವರೆಸುತ್ತಾನೆ.ಮನುಷ್ಯ ಸಂಬಂಧಗಳು ಒಂದು ರೀತಿಯ ಆಟವಿದ್ದಂತೆ ಯಾವುದೋ ಅತಿಮಾನುಷ ಶಕ್ತಿ ಮನುಷ್ಯರ ನಡುವೆ ಸಂಬಂಧಗಳನ್ನು ಕಟ್ಟುವುದು ಕೆಡಹುವುದು ಮಾಡುತ್ತಿದೆ ಎಂದು ಅಂದು ಕೊಳ್ಳುತ್ತಾನೆ.
ಬೇಲಿ ಅಡಚಣೆ ಎಂದುಕೊಂಡರೆ ಬೇಲಿ ಬೇಡ, ಆದರೆ ನಮ್ಮ ನಡುವೆ ಕೆಲವು ಕಾನೂನುಗಳು ಅಗತ್ಯ ಒಟ್ಟಿನಲ್ಲಿ ಈ ಕವನ ಬದುಕಿನ ದ್ವಂದ್ವ ತಿಳಿಸುತ್ತದೆ ಮತ್ತು ನಿಜವಾದ ಆಸ್ತಿಯ ಮಾಲೀಕ ತಾನು ಅಂದು ಕೊಂಡರು ಕೂಡ ಪ್ರಕೃತಿ ಎಲ್ಲಾ ಬಗೆಯ ಜೀವ ಜಂತು ಗಳಿಗೆ ಸೇರಿದ್ದು ಎಂದು ಮತ್ತೆ ನೆನಪಿಸಿ ಕೊಳ್ಳುತ್ತಾನೆ.ಈ ಮೂಲಕ ಪ್ರಕೃತಿ ಮನುಷ್ಯರ ಅಹಂಕಾರಕ್ಕೆ ಪೆಟ್ಟು ನೀಡುತ್ತದೆ,ಒಟ್ಟಿನಲ್ಲಿ ಈ ಕವನ ಓದುಗರಿಗೂ ಕೂಡ ದ್ವಂದ್ವ ಚಿಂತನೆ ಹೆಚ್ಚಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಹುಮುಖಿಯ ಡಾ.ಕೆ.ಜಿ.ವೆಂಕಟೇಶ್, ಸ್ವಾಗತಿಸಿ,Alhamdulillah ಡಾ.ನಾಗಭೂಷಣ ಮಾಡಿದರು. ಟಿ ಎಸ್ ಹೂವಯ್ಯ ಗೌಡರ ಶುಭ ಹಾರೈಸಿದರು.