Posted on 24-10-2025 |
Share: Facebook | X | Whatsapp | Instagram
ಶಿವಮೊಗ್ಗ ಸೆ 24. ನಗರದ ಬಸವ ಕೇಂದ್ರದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 2025ರ ಒಂದು ತಿಂಗಳಿನ ಚಿಂತನ ಕಾರ್ತಿಕ ಉದ್ಘಾಟನೆ ಆಯಿತು.
ಈ ಚಿಂತನೆಗಳು ಇದೇ 24ರ ಅಕ್ಟೋಬರ್ 2025 ರಿಂದ ನವೆಂಬರ್ 23, 2025 ರವರೆಗೆ ನಡೆಯುತ್ತದೆ. ಸುಮಾರು 30ಜನ ವಿವಿಧ ಚಿಂತಕರು ಅಲ್ಲಮ ಪ್ರಭುವಿನ ವಚನಗಳ ಸಾಲಿನ ಆಧಾರದ ಮೇಲೆ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕುಮಾರಿ ತನ್ಮಯಿ ಪ್ರಾರ್ಥನೆ ಮಾಡಿದರು,ಪ್ರಾಸ್ತಾವಿಕವಾಗಿ ಶರಣ ಜಿ.ಬೆನಕಪ್ಪ ಮಾತನಾಡಿ ಇಂತಹ ಕಾರ್ಯಕ್ರಮಕ್ಕೆ ಧನ ಸಹಾಯವನ್ನು ಕೊಟ್ಟು ಸಹಕರಿಸಿದ ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಶಿವಮೊಗ್ಗ ಕ್ಕೆ ಧನ್ಯವಾದಗಳನ್ನು ಅರ್ಪಿಸಿ 2007ರಿಂದ ಈ ಚಿಂತನ ಕಾರ್ಯಕ್ರಮ ಪ್ರಾರಂಭ ವಾಗಿ 19ವರ್ಷದಿಂದ ನಡೆದುಕೊಂಡು ಬರುತ್ತಿದೆ.ಇಂತಹ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ.ಸಾಸ್ವೇಹಳ್ಳಿ ಸತೀಶ್ ಮಾತನಾಡಿ ಅಲ್ಲಮ ಪ್ರಭುಗಳ ಪ್ರೇರಣೆಯಿಂದ ಅನೇಕ ವ್ಯಕ್ತಿಗಳು ಚಿತ್ರ ಸಾಹಿತ್ಯ ಮತ್ತು ಚಿತ್ರ ಗೀತೆಗಳನ್ನು ರಚಿಸಿದ್ದಾರೆ.ತಾವು ಪ್ರಶಸ್ತಿಗಾಗಿ ಯಾವುದೇ ಕೆಲಸವನ್ನು ಮಾಡಿಲ್ಲ ಆದರೆ ಅನೇಕ ಪ್ರಶಸ್ತಿಗಳು ನನಗೆ ಬಂದಿದೆ, ಅದರಲ್ಲೂ ಈಸೂರಿನ ಕತೆಯ ನಾಟಕಕ್ಕೆ ಬಹುಮಾನ ಬಂದಿರುವುದು ಸಂತೋಷವಾಗಿದೆ.
ಆಶೀರ್ವಚನ ನೀಡಿದ ಡಾ.ಬಸವ ಮರುಳ ಸಿದ್ದ ಸ್ವಾಮಿಗಳು ಮಾತನಾಡಿ, ಈ ಹಿಂದೆ ನಾವು ಸಮಾಜ ಕಟ್ಟಿದ ಮಹಾನ್ ವ್ಯಕ್ತಿಗಳ, ಮಹಾತ್ಮರಾದ ಸ್ವಾಮೀಜಿಗಳ ಬಗ್ಗೆ ಚಿಂತನ ಕಾರ್ತಿಕ ನಡೆಸಿದ್ದೆವು.ಈ ವರ್ಷ ಅಲ್ಲಮನ ವಚನದ ಸಾಲುಗಳನ್ನು ಇಟ್ಟುಕೊಂಡು ಜನರೊಂದಿಗೆ ಮುಖಾಮುಖಿ ನಡೆಸಲು ತೀರ್ಮಾನಿಸಿ ಈ ಕಾರ್ಯಕ್ರಮ ನಡೆಸಿದ್ದೇವೆ.ಸೋಮರಾಜ ಕವಿ ಅಲ್ಲಮಪ್ರಭುಗಳ ಬಗ್ಗೆ ಮಾತನಾಡಿ ಶೈವರು ಶಿವನೆಂದು, ವೈಷ್ಣವರು ವಿಷ್ಣುವೆಂದು
ಬ್ರಾಹ್ಮಣರು ಬ್ರಹ್ಮನೆಂದು ಜೈನರು ಜಿನನೆಂದು ಹೀಗೆ ಎಲ್ಲರೂ ತಮ್ಮವನೆಂದು ಭಾವಿಸಿ ಪೂಜಿಸಲು ಸರ್ವಮುಖಗಳಿಂದ ಅವರ ಪೂಜೆಯನ್ನು ಒಲಿದು ಸ್ವೀಕರಿಸಿ ಸದಾ ವಿಲಾಸಯುಕ್ತನಾಗಿ ಮೆರೆಯುವ ಅಲ್ಲಮನು ನನ್ನ ಹೃದಯ ಕಮಲದಲ್ಲಿ ಅಗಲದಂತಿರಲಿ ಎಂದಿದ್ದಾರೆ.ಇಂತಹ ಪ್ರಭುದೇವರ ಬಗ್ಗೆ ಚಾಮರಸ ಪ್ರಭುಲಿಂಗಲೀಲೆ ಎಂಬ ಕೃತಿಯನ್ನು ಬರೆದಿದ್ದು ಆ ಕಾಲದಲ್ಲಿ ಇದು ಹಲವು ಭಾಷೆಗಳಲ್ಲಿ ಪ್ರಕಟವಾಯಿತು ಎಂದರು.ಒಟ್ಟಿನಲ್ಲಿ ಚಿಂತನ ಕಾರ್ಯಕ್ರಮದ ಮುಖಾಂತರ ನಮ್ಮ ಅರಿವಿನ ವಿಸ್ತಾರ ಹೆಚ್ಚಿಸಿ ಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮೂರು ಜನ ವಿದ್ಯುತ್ ಇಲಾಖೆಯ ಸೇವಾರ್ಥಿಗಳನ್ನ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆ ಇತ್ತು.