*ಡಾ.ಸರ್ಜಾಶಂಕರ ಹರಳಿಮಠ ಅವರಿಗೆ 'ಕನಕ ಸಾಹಿತ್ಯ ಪ್ರಶಸ್ತಿ*

Culture Literature

Posted on 23-10-2025 |

Share: Facebook | X | Whatsapp | Instagram


*ಡಾ.ಸರ್ಜಾಶಂಕರ ಹರಳಿಮಠ ಅವರಿಗೆ 'ಕನಕ ಸಾಹಿತ್ಯ ಪ್ರಶಸ್ತಿ*

*ಡಾ.ಸರ್ಜಾಶಂಕರ ಹರಳಿಮಠ ಅವರಿಗೆ \'ಕನಕ ಸಾಹಿತ್ಯ ಪ್ರಶಸ್ತಿ*


ಮೈಸೂರಿನ ಸನ್ವಿತಿ ಪ್ರಕಾಶನ ಸಂಸ್ಥೆಯು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸಾಹಿತಿ ಡಾ.ಸರ್ಜಾಶಂಕರ ಹರಳಿಮಠ ಅವರನ್ನು ರಾಜ್ಯಮಟ್ಟದ \'ಕನಕ ಸಾಹಿತ್ಯ ಪ್ರಶಸ್ತಿ\'ಗೆ ಆಯ್ಕೆ ಮಾಡಿದೆ.

ಈ ಲೇಖಕರ \"ಬೆಚ್ಚಿ ಬೀಳಿಸಿದ ಬೆಂಗಳೂರು\" ಅಂಕಣಪ್ರಬಂಧ ಕೃತಿಯು ಅಪಾರ ಜನಮನ್ನಣೆ ಗಳಿಸಿದ್ದು,ಎರಡು ಆವೃತ್ತಿಗಳನ್ನು ಕಂಡಿದೆ. ಪ್ರತಿಷ್ಠಿತ \'ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ\" ಸೇರಿದಂತೆ ರಾಜ್ಯಮಟ್ಟದ ವಿವಿಧ ಕಥಾಸ್ಪರ್ಧೆಗಳಲ್ಲಿ ಇವರ ಕಥೆಗಳು ಬಹುಮಾನ ಗಳಿಸಿದ್ದು,\"ಬಾರಯ್ಯ ಬೆಳದಿಂಗಳೇ\' ಕಥಾಸಂಕಲನ ಪ್ರಕಟವಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡ \"ಕನ್ನಡತನ\" ಸಂಶೋಧನಾ ಕೃತಿ ಕನ್ನಡದ ವಿವೇಕವನ್ನು ಹೊಸಬಗೆಯಲ್ಲಿ ಕಂಡಿರಿಸಿದೆ ಎಂಬ ಅಭಿಪ್ರಾಯ ವಿಮರ್ಶಕರಿಂದ ವ್ಯಕ್ತವಾಗಿದೆ. \'ಅಂತರಾಳ\'\', \'ಜೀವದನಿ\', \'ಸುಡುಹಗಲ ಸೊಲ್ಲು\' ಸರ್ಜಾಶಂಕರ ಅವರ ಇತರ ಕೃತಿಗಳಾಗಿವೆ. ಈ ಲೇಖಕರು \'ಪ್ರಜಾವಾಣಿಯಲ್ಲಿ\' ಬರೆದ \'ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು\' ಲೇಖನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ದೊರೆತಿದೆ. ಈ ಲೇಖಕರ ಸಮಗ್ರ ಸಾಹಿತ್ಯವನ್ನು ಪರಿಗಣಿಸಿ \"ಕನಕ ಸಾಹಿತ್ಯ ಪ್ರಶಸ್ತಿ\" ಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

 ಸರ್ಜಾಶಂಕರ ಹರಳಿಮಠ ಅವರು ಪ್ರಸ್ತುತ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Search
Recent News