ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ಎಸ್ಎಸ್ ಘಟಕಗಳ ವತಿಯಿಂದ ಶ್ರಮದಾನ

Social Program Education

Posted on 18-10-2025 |

Share: Facebook | X | Whatsapp | Instagram

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ಎಸ್ಎಸ್ ಘಟಕಗಳ ವತಿಯಿಂದ  ಶ್ರಮದಾನ

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ಎಸ್ಎಸ್ ಘಟಕಗಳ ವತಿಯಿಂದ  ಶ್ರಮದಾನ 

ಶಿವಮೊಗ್ಗ : ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ಎಸ್ಎಸ್ ಘಟಕಗಳ ವತಿಯಿಂದ ಶುಕ್ರವಾರ ಶ್ರಮದಾನವನ್ನು ಹಮ್ಮಿಕೊಳ್ಳಲಾಗಿತ್ತು. 

ಬಿಎಚ್ ರಸ್ತೆಯಿಂದ ಕಾಲೇಜಿನವರೆಗಿನ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಕಸಕಡ್ಡಿಗಳನ್ನು ಎತ್ತಿ ಸ್ವಚ್ಛ ಮಾಡಲಾಯಿತು. ಕಾಲೇಜಿನ ಆವರಣವನ್ನು ಎರಡು ತಂಡಗಳು ಸ್ವಚ್ಛಗೊಳಿಸಿದವು. ಸುಮಾರು 72 ಸ್ವಯಂ ಸೇವಕರು ಶ್ರಮದಾನದಲ್ಲಿ  ಪಾಲ್ಗೊಂಡಿದ್ದರು. ಸ್ವಯಂ ಸೇವಕರೇ ತಯಾರಿಸಿದ ಉಪಹಾರವನ್ನು ಕೊನೆಯಲ್ಲಿ ವಿತರಿಸಲಾಯಿತು. ಪ್ರಾಂಶುಪಾಲರಾದ ಡಾ. ಟಿ. ಅವಿನಾಶ್, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಪ್ರಕಾಶ್ ಮರ್ಗನಳ್ಳಿ, ಶ್ರೀಯುತ ಪರಶುರಾಮ್  ಉಪಸ್ಥಿತರಿದ್ದರು.

Search
Recent News