ಎನ್.ಇ.ಎಸ್ ಐ.ಎ.ಎಸ್ ಕಾಲೇಜಿನಲ್ಲಿ “ಒಂದು ರಾಷ್ಟ್ರ – ಒಂದು ಚುನಾವಣೆ” ಕುರಿತು ವಿಶೇಷ ಕಾರ್ಯಕ್ರಮ

Social Program Education

Posted on 17-10-2025 |

Share: Facebook | X | Whatsapp | Instagram


ಎನ್.ಇ.ಎಸ್ ಐ.ಎ.ಎಸ್ ಕಾಲೇಜಿನಲ್ಲಿ “ಒಂದು ರಾಷ್ಟ್ರ – ಒಂದು ಚುನಾವಣೆ” ಕುರಿತು ವಿಶೇಷ ಕಾರ್ಯಕ್ರಮ

ಎನ್.ಇ.ಎಸ್ ಐ.ಎ.ಎಸ್ ಕಾಲೇಜಿನಲ್ಲಿ “ಒಂದು ರಾಷ್ಟ್ರ – ಒಂದು ಚುನಾವಣೆ” ಕುರಿತು ವಿಶೇಷ ಕಾರ್ಯಕ್ರಮ

 ನಗರದ ಎನ್‌.ಇ.ಎಸ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ 1 ಮತ್ತು ಘಟಕ 2ರ ವತಿಯಿಂದ “ಒಂದು ರಾಷ್ಟ್ರ – ಒಂದು ಚುನಾವಣೆ” ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಶ್ರೀ ಟಿ.ಆರ್. ಅಶ್ವತ ನಾರಾಯಣ ಶ್ರೇಷ್ಠಿ, ನಿರ್ದೇಶಕರು, ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ), ಶಿವಮೊಗ್ಗ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯುವಜನರ ಪಾತ್ರವನ್ನು ಉಲ್ಲೇಖಿಸಿ — “ರಾಜಕೀಯ ಜಾಗೃತಿಯು ಜನತಂತ್ರದ ಜೀವನಾಡಿ; ಒಂದೇ ವೇಳೆಯ ಚುನಾವಣೆಯು ಯುವಜನತೆಗೆ ಬದಲಾವಣೆಯ ದೃಷ್ಟಿಕೋನ ನೀಡುತ್ತದೆ” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಮಾಜಿ ವಿಧಾನಪರಿಷತ್ ಸದಸ್ಯರು, ಕರ್ನಾಟಕ ವಿಧಾನಪರಿಷತ್ – ದಕ್ಷಿಣ ಪಶ್ಚಿಮ ಶಿಕ್ಷಕರ ಕ್ಷೇತ್ರ, ಅವರು “ಒಂದು ರಾಷ್ಟ್ರ – ಒಂದು ಚುನಾವಣೆಯ ಪರಿಕಲ್ಪನೆ ಕೇವಲ ಆಡಳಿತ ಸುಧಾರಣೆಗಾಗಿ ಮಾತ್ರವಲ್ಲ, ಇದು ರಾಷ್ಟ್ರದ ಏಕತೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಪೂರಕವಾದ ಕ್ರಮ” ಎಂದು ವಿವರಿಸಿದರು. ಚುನಾವಣೆಗಳ ಅವಿರತ ಚಕ್ರದಿಂದ ಉಂಟಾಗುವ ಸಮಯ ಮತ್ತು ಸಂಪನ್ಮೂಲ ವ್ಯಯವನ್ನು ತಡೆಯುವಲ್ಲಿ ಈ ಕ್ರಮ ಬಹುಮುಖ್ಯ ಪಾತ್ರವಹಿಸುತ್ತದೆ ಎಂದೂ ಅವರು ಹೇಳಿದರು.

ವಿದ್ಯಾರ್ಥಿ ಮುಖಂಡರಾದ ಶ್ರೀ ಬಿ ಎಸ್ ರವಿಕಿರಣ್ ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದರು. 

ಕಾರ್ಯಕ್ರಮದ ಘನಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವಪ್ರಸಾದ್ ಬಿ.ಎಸ್. ವಹಿಸಿದ್ದರು. ಅವರು ಮಾತನಾಡಿ, “ಇಂತಹ ವಿಷಯಾಧಾರಿತ ಚರ್ಚೆಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ, ಚಿಂತನೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತವೆ” ಎಂದು ಹೇಳಿದರು.

 ಕಾರ್ಯಕ್ರಮದ ಉಸ್ತುವಾರಿಯನ್ನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಒಂದು ಮತ್ತು ಎರಡರ ಕಾರ್ಯಕ್ರಮಾಧಿಕಾರಿಗಳಾ ಶ್ರೀ ಚಂದನ್ ಯು.ಎ , ಶ್ರೀ ಗುರುರಾಜ್ ಎನ್ ವಹಿಸಿದ್ದರು. ಕಾರ್ಯಕ್ರಮ ಬೋಧಕ ಬೋಧಕೇತರ ಸಿಬ್ಬಂದಿ ಸಿಬ್ಬಂದಿ ವರ್ಗದ ಸಹಕಾರ ಮತ್ತು ವಿದ್ಯಾರ್ಥಿಗಳ ಉಪಸ್ಥಿತಿಯೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು.

Search
Recent News