ಸತ್ಯ - ಅಹಿಂಸೆ ಪ್ರಬಲ ಅಸ್ತ್ರಗಳು

Culture Literature

Posted on 02-10-2025 |

Share: Facebook | X | Whatsapp | Instagram


ಸತ್ಯ - ಅಹಿಂಸೆ ಪ್ರಬಲ ಅಸ್ತ್ರಗಳು

ಸತ್ಯ - ಅಹಿಂಸೆ ಪ್ರಬಲ ಅಸ್ತ್ರಗಳು 

ಶಿವಮೊಗ್ಗ : ಭಾರತ ದೇಶಕ್ಕೆ ಸ್ವಾತಂತ್ರ್ಯ ವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ ಸತ್ಯ ಮತ್ತು ಅಹಿಂಸೆಗಳಾಗಿವೆ ಎಂದು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಅವಿನಾಶ್ ಅಭಿಪ್ರಾಯಪಟ್ಟರು.

 ಇಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಆಧುನಿಕ ಭಾರತದ ನಿರ್ಮಾಣದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರ ಕೊಡುಗೆ ಗಣನೀಯವಾದದ್ದು. ಗಾಂಧಿ ತೀರಿಕೊಂಡು ಇಷ್ಟು ವರ್ಷಗಳ ನಂತರವೂ ಅವರ ಚಿಂತನೆಗಳು ನಮಗೆ ಮಾರ್ಗದರ್ಶಕವಾಗಿವೆ. ದೇಶವನ್ನು ಮುನ್ನಡೆಸುವಲ್ಲಿ ಇವರ ಚಿಂತನೆಗಳನ್ನು ಸಹಕಾರಿಯಾಗಿವೆ ಎಂದರು.

ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ. ಕುಂದನ್ ಬಸವರಾಜ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತು ಮಾತನಾಡಿದರು.  ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಪ್ರಕಾಶ್ ಮರ್ಗನಳ್ಳಿ, ಪರಶುರಾಮ್, ಡಾ. ಮಮತಾ ಎಸ್.ಎಂ., ಡಾ. ಶಶಿರಾಜ್, ಬಾಲಸ್ವಾಮಿ, ಡಾ. ಲವ ಜಿ.ಆರ್. ಮುಂತಾದವರು ಉಪಸ್ಥಿತರಿದ್ದರು.

Search