ಓದುವ ಹವ್ಯಾಸವೇ ನಾಗರಿಕನ ನಿಜವಾದ ಗುರುತು*- ಎ.ಎನ್ ರಾಮಚಂದ್ರ*

Social Program Education

Posted on 15-09-2025 |

Share: Facebook | X | Whatsapp | Instagram


ಓದುವ ಹವ್ಯಾಸವೇ ನಾಗರಿಕನ ನಿಜವಾದ ಗುರುತು*- ಎ.ಎನ್ ರಾಮಚಂದ್ರ*

*ಓದುವ ಹವ್ಯಾಸವೇ ನಾಗರಿಕನ ನಿಜವಾದ ಗುರುತು*- ಎ.ಎನ್ ರಾಮಚಂದ್ರ*

ಪುಸ್ತಕ ಓದುವ ಹವ್ಯಾಸವೇ  ನಾಗರಿಕನ ನಿಜವಾದ ಗುರುತು. ಪುಸ್ತಕಗಳು ಮನುಷ್ಯನ ನಿಜವಾದ ಸ್ನೇಹಿತ. ಅವು ವ್ಯಕ್ತಿಯನ್ನು ಜ್ಞಾನಿಯಾಗಿಸುವಷ್ಟೇ ಅಲ್ಲದೆ, ಉತ್ತಮ ನಾಗರಿಕನನ್ನಾಗಿ ರೂಪಿಸುತ್ತವೆ. ಪುಸ್ತಕವನ್ನು ಕೊಂಡುಕೊಂಡರಷ್ಟೇ ಸಾಲದು. ಯಾವುದೇ ಒಂದು ಪುಸ್ತಕವನ್ನು  ‘ನನ್ನ ಮೆಚ್ಚಿನ ಪುಸ್ತಕ’ ಎಂದು ಹೇಳುವ ಮೊದಲು ಅನೇಕ ಪುಸ್ತಕಗಳ ಅಧ್ಯಯನ ಮಾಡಿ, ಅದರ ತಾತ್ಪರ್ಯವನ್ನು ಗ್ರಹಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ರಾಷ್ಟ್ರೀಯ ಶಿಕ್ಷಣಸಮಿತಿಯ ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಶ್ರೀ ಎ.ಎನ್ ರಾಮಚಂದ್ರ ಅವರು ಅಭಿಪ್ರಾಯಪಟ್ಟರು.

ಅವರು ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ  ಕಾರ್ಪೊರೇಟ್ ಟಾಕೀಸ್ – ಚಿತ್ರಪರ್ವ 2025-26 ಸ್ಪರ್ಧಾ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜೆ.ಎನ್.ಎನ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ಡಾ. ವಿಜಯಕುಮಾರ್ ವೈ ಅವರು, “ಚಿತ್ರಮಂದಿರದ ಮೂಲಕವೂ ನಿರ್ವಹಣಾ ತತ್ವಗಳನ್ನು ಕಲಿಯಬಹುದು. ಜೊತೆಗೆ ಇಂದಿನ ತಾಂತ್ರಿಕ ಯುಗದಲ್ಲಿ ತಾಂತ್ರಿಕ ಜ್ಞಾನ ಹಾಗೂ ಉತ್ತಮ ಸಂವಹನ ಕೌಶಲ ರೂಢಿಸಿಕೊಳ್ಳುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅತಿಮುಖ್ಯ,” ಎಂದು ನುಡಿದರು.

 ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವಪ್ರಸಾದ್ ಬಿ.ಎಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಕು.ಶ್ರಾವ್ಯ ಪಾರ್ಥಿಸಿದರು. ಕು. ಮೇಘನಾ   ಸ್ವಾಗತಿಸಿದರು. ಕು.ವರ್ಷಿಣಿ ವಂದಿಸಿದರು. ಕು.ಸಹನಾ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ  ಸ್ಪರ್ಧಾತ್ಮಕ ಚಟುವಟಿಕೆಗಳು ಜರುಗಿದವು.

Search