ಆಧುನಿಕತೆಯ ಭ್ರಮಾಲೋಕದಲ್ಲಿ ಮರೆಗೆ ಸರಿಯುತ್ತಿರುವ ಆಕಾಶವಾಣಿಯ ಮಹತ್ವ* ಗೆಎನ್.ಇ.ಎಸ್ ಕುಲಸಚಿವ ಹರಿಯಪ್ಪ ವಿಷಾದ*

Social Program Education

Posted on 12-09-2025 |

Share: Facebook | X | Whatsapp | Instagram


ಆಧುನಿಕತೆಯ ಭ್ರಮಾಲೋಕದಲ್ಲಿ ಮರೆಗೆ ಸರಿಯುತ್ತಿರುವ ಆಕಾಶವಾಣಿಯ ಮಹತ್ವ* ಗೆಎನ್.ಇ.ಎಸ್ ಕುಲಸಚಿವ ಹರಿಯಪ್ಪ ವಿಷಾದ*

*ಆಧುನಿಕತೆಯ ಭ್ರಮಾಲೋಕದಲ್ಲಿ ಮರೆಗೆ ಸರಿಯುತ್ತಿರುವ ಆಕಾಶವಾಣಿಯ ಮಹತ್ವ* ಎನ್.ಇ.ಎಸ್ ಕುಲಸಚಿವ ಹರಿಯಪ್ಪ ವಿಷಾದ*

ಒಂದು ಕಾಲಘಟ್ಟದಲ್ಲಿ ಆಕಾಶವಾಣಿ ನಮ್ಮ ಬದುಕಿನ ಜೀವನಾಡಿಯಾಗಿತ್ತು. ಆಕಾಶವಾಣಿಯಲ್ಲಿ ಸುಪ್ರಭಾತ ಕೇಳದೆ ನಮ್ಮ ದಿನದ ಆರಂಭವೇ ಆಗುತ್ತಿರಲಿಲ್ಲ. ವಿಶ್ವಾಸಾರ್ಹ ಸುದ್ದಿಪ್ರಸಾರ ಮತ್ತು ಸಭ್ಯ ಮನರಂಜನೆಯ ಮಾಧ್ಯಮವಾಗಿ ಆಕಾಶವಾಣಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಆದರೆ ಭ್ರಮಾಲೋಕ ಸೃಷ್ಟಿಸುವ  ಟಿ.ವಿ ಮಾಧ್ಯಮಗಳಿಂದಾಗಿ ಆಕಾಶವಾಣಿ ಮರೆಗೆ ಸರಿಯುತ್ತಿದೆ. ಆಕಾಶವಾಣಿ ಯನ್ನು ಮುನ್ನಲೆಗೆ ತರುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಾಗಿದೆ. ನಿತ್ಯ ಆಕಾಶವಾಣಿ ಬಿತ್ತರಿಸುವ ಕಾರ್ಯಕ್ರಮಗಳನ್ನು ಕೇಳುವುದರ ಮೂಲಕ ಇದನ್ನು ಸಾಧಿಸಬಹುದು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಕುಲಸಚಿವರಾದ ಎನ್.ಕೆ ಹರಿಯಪ್ಪ ಅವರು ಅಭಿಪ್ರಾಯಪಟ್ಟರು. ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಆಕಾಶವಾಣಿ ಭದ್ರಾವತಿ ಕೇಂದ್ರದ ವಿದ್ಯಾರ್ಥಿಗಳಿಗೆ ಮೀಸಲಾದ ಜನಪ್ರಿಯ ಕಾರ್ಯಕ್ರಮವಾದ ಕ್ಯಾಂಪಸ್ ಕಟ್ಟೆ ನೇರಪ್ರಸಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

 ಪ್ರತಿಯೊಬ್ಬ ವಿದ್ಯಾರ್ಥಿಯು ಆಕಾಶವಾಣಿಯನ್ನ ಕೇಳಿ, ನಮ್ಮಲ್ಲಿರುವ ಪ್ರತಿಭೆಯನ್ನು ಹಾಗೂ ಮುಖ್ಯ ವಿಚಾರಗಳನ್ನು ಸಮಾಜಕ್ಕೆ ತಿಳಿಸಬೇಕೆಂದು ಕಾರ್ಯಕ್ರಮದ ಉದ್ಘೋಷಕರಾದ ಡಾ. ಬಸವರಾಜ ಗುಬ್ಬಿ ಸಲಹೆಯಿತ್ತರು.

ಪ್ರಾಂಶುಪಾಲ ಡಾ.ಬಿ.ಎಸ್ ಶಿವಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಘೋಷಕರಾದ ಡಾ.ಗಣೇಶ ಆರ್ ಕೆಂಚನಾಲ ಮತ್ತು ಶ್ರೀಮತಿ ಮೀನಾ ಎನ್, ವಿಭಾಗದ ಮುಖ್ಯಸ್ಥರಾದ ವಿನುತಾ ಪಿ ಶಣೈ, ಉಪನ್ಯಾಸಕರಾದ ವೆಂಕಟೇಶ್ ಸೊರಬ, ಅಭಿಷೇಕ್, ಆಕಾಶ್, ಸುಜಾತ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಕು.ಸೀಮಾ ಪ್ರಕಾಶ್ ಪ್ರಾರ್ಥನೆ ಮಾಡಿದರು. ಕು.ಜೆಸ್ಸಿಕಾ ಸ್ವಾಗತಿಸಿದರು. ಕು.ವಿದ್ಯಾ ವಂದನಾರ್ಪಣೆ ಮಾಡಿದರು. ಕು.ಪಲ್ಲವಿ ನಿರೂಪಿಸಿದರು.

Search