Posted on 12-09-2025 |
Share: Facebook | X | Whatsapp | Instagram
*ಅವಸರದಲ್ಲಿ ಹೂಡಿಕೆ, ಅಪಾಯಕ್ಕೆ ಆಹ್ವಾನ*
*-ಎಚ್.ಸಿ.ಶಿವಕುಮಾರ್*
ಶಿವಮೊಗ್ಗ : ಷೇರು ಮಾರುಕಟ್ಟೆಯ ಅರಿವಿಲ್ಲದೆ ಅವಸರದಲ್ಲಿ ಹೂಡಿಕೆ ಮಾಡಲು ಮುಂದಾದರೆ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ . ಆದ್ದರಿಂದ ಮೊದಲು ಶೇರು ಮಾರುಕಟ್ಟೆಯ ಕುರಿತು ತಿಳಿದುಕೊಳ್ಳುವುದು ಅತೀ ಅವಶ್ಯಕ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕರಾದ ಶ್ರೀ ಹೆಚ್.ಸಿ. ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು . ಅವರು ಇಂದು ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ತರಬೇತಿ ಮತ್ತು ಉದ್ಯೋಗ ಘಟಕದ ವತಿಯಿಂದ ಹಮ್ಮಿಕೊಂಡಿದ್ದ\'ಬಂಡವಾಳ ಹೂಡಿಕೆ ಮತ್ರು ವ್ಯವಹಾರದ ಕಾರ್ಯತಂತ್ರಗಳು\' ಕುರಿತ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಶಿವಪ್ರಸಾದ್ ಬಿ.ಎಸ್ ಅವರು ಮಾತನಾಡಿ ಹೂಡಿಕೆ ಜ್ಞಾನವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಹರ್ಷ ಸಿ. ಮಠದ್ ಅವರು ಷೇರು ಮಾರುಕಟ್ಟೆಯ ಮೂಲಭೂತ ಅಂಶಗಳು, ಹೂಡಿಕೆ ವಿಧಾನಗಳು ಹಾಗೂ ಅಪಾಯ ನಿಯಂತ್ರಣ ತಂತ್ರಗಳ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಅರುಣ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು.ಸಾಕ್ಷಿ ಆರಂಭ ಗೀತೆ ಹಾಡಿದರು. ಕು.ಪಲ್ಲವಿ ಸ್ವಾಗತಿಸಿದರು.
ಕು.ಸಿರಿಗೌರಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕು.ಸ್ನೇಹ ನಿರೂಪಿಸಿದರು