Posted on 08-09-2025 |
Share: Facebook | X | Whatsapp | Instagram
ಗ್ರಹಣಗಳು ಮನುಷ್ಯರ ಮೇಲೆ ಯಾವ ಪ್ರಭಾವ ಬೀರುವುದಿಲ್ಲ . ಶೇಖರ್ ಗೌಳೇರ್
ಶಿವಮೊಗ್ಗ ಸೆ.7 ಗ್ರಹಣಗಳು ಮನುಷ್ಯರ ಮೇಲೆ ಯಾವ ಪ್ರಭಾವ ಬೀರುವುದಿಲ್ಲ.ಸಾವಿರಾರು ವರ್ಷಗಳಿಂದ ಇಂತಹ ಗ್ರಹಣಗಳು ಬರುತ್ತಾ ಹೋಗುತ್ತಾ ಇರುತ್ತದೆ ಎಂದು ಭೂಗೋಳ ವಿಜ್ಞಾನಿ ಶೇಖರ್ ಗೌಳೇರ್ ಹೇಳಿದರು.ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ 241ನೇ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ದಲ್ಲಿ ಮಾತನಾಡುತ್ತಿದ್ದರು.
ಗ್ರಹಣ ನೋಡಿದರೆ ಮನುಷ್ಯರು ಕುರುಡರಾಗುತ್ತಾರೆ ಎಂಬ ನಂಬಿಕೆ ಇದೆ.ಆದರೆ ಸೂರ್ಯ ಗ್ರಹಣವನ್ನು ಬರಿ ಕಣ್ಣಿನಿಂದ ನೋಡಲು ಹೋಗಬಾರದು ಕಪ್ಪು ಕನ್ನಡಕ ಅಥವಾ ಕಪ್ಪು ಪೇಪರ್ ಅಡ್ಡ ಇಟ್ಟು ನೋಡಬೇಕು.ಆಕಾಶಕಾಯಗಳು ಸೂರ್ಯನ ಸುತ್ತ ಸುತ್ತುತ್ತಲೇ ಇರುತ್ತದೆ.ಹಾಗೇ ಸುತ್ತುವಾಗ ಒಂದು ಗ್ರಹದ ನೆರಳು ಮತ್ತೊಂದು ಗ್ರಹದ ಮೇಲೆ ಬಿದ್ದಾಗ, ಅಥವಾ ಅಡ್ಡ ಬಂದಾಗ ಗ್ರಹಣ ಹಿಡಿಯುತ್ತದೆ.ನಾವು ಚಂದ್ರನ ಮೇಲೆ ಇದ್ದರೆ ಭೂಮಿ ಗ್ರಹಣ ಆಗುತ್ತದೆ.ನಮಗೆ ಸೂರ್ಯ ಮತ್ತು ಚಂದ್ರ ಹತ್ತಿರ ನೀಡಿರುವುದರಿಂದ ಗ್ರಹಣ ಗೊತ್ತಾಗುತ್ತದೆ. ಬೇರೆ ಗ್ರಹ ದೂರವಿರುವುದರಿಂದ ನಮಗೆ ಗ್ರಹಣ ಗೊತ್ತಾಗುವುದಿಲ್ಲ.ಒಟ್ಟು ವರ್ಷಕ್ಕೆ ಏಳು ಗ್ರಹಣ ಆಗುತ್ತದೆ ಸೂರ್ಯ 3 ಚಂದ್ರ 4.
ಕ್ರಿ.ಪೂ. 2137 ಅ.22 ರಂದು ಚುಂಗ್ ಕಾಂಗ್ ಎಂಬ ಚೀನಾದ ರಾಜನಿಗೆ ಗ್ರಹಣ ಹಿಡಿಯುವುದು ಗೊತ್ತಾಗುತ್ತದೆ.ಆತನ ಮಂತ್ರಿಗಳು ಈ ವಿಷಯ ತಿಳಿಸಿದರು.ಭಾರತದಲ್ಲಿ ಗುಪ್ತರ ಕಾಲದಲ್ಲಿ ವಿಜ್ಞಾನಿಗಳು ಆರ್ಯಭಟ ಮತ್ತು ವರಾಹಮಿಹಿರ ಸಂಶೋಧನೆ ಮಾಡಿ ಗ್ರಹಣದ ಬಗ್ಗೆ ತಿಳಿಸಿದರು.ಸೂರ್ಯಗ್ರಹಣವಾದಾಗ ಅದನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸುಲಭವಾಗುತ್ತದೆ.ಕೆಲವೊಮ್ಮೆ ಒಂದು ತಿಂಗಳಲ್ಲಿ 2ಬಾರಿ ಚಂದ್ರಗ್ರಹಣ ಆಗಿದ್ದು ಗೊತ್ತಾಗಿದೆ ಅದನ್ನು ಸೂಪರ್ ಮೂನ್ ಮತ್ತು ಬ್ಲ್ಯೂ ಮೂನ್ ಎಂದು ಕರೆಯುತ್ತಾರೆ.ಹಿಂದಿನ ಜ್ಯೋತಿಷ್ಯರು ಲೆಕ್ಕಾಚಾರ ಮಾಡಿ ಸತ್ಯ ಹೇಳುತ್ತಿದ್ದರು.ಇಂದು ಲೆಕ್ಕಾಚಾರ ಮಾಡದೆ ಸುಳ್ಳು ಹೇಳುತ್ತಾರೆ.ಯಾವ ಆಹಾರ ಕಲುಷಿತ ವಾಗುವುದಿಲ್ಲ.ಗರ್ಬಿಣಿ ಸ್ತ್ರೀಯರು ಮನೆಯಿಂದ ಹೊರಗೆ ಬಂದರು ಯಾವ ತೊಂದರೆಯೂ ಆಗುವುದಿಲ್ಲ ಎಂದರು.
ಇಂದು 6.35ಕ್ಕೆ ಗ್ರಹಣ ಕಾಣಿಸಿಲ್ಲ ಆದರೆ 9-57ರಿಂದ 11-10 ರವರೆಗೆ ಗ್ರಹಣ ಸ್ಪಷ್ಟವಾಗಿ ಕಂಡಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ್ ಮಾತನಾಡಿ ಮಾಧ್ಯಮಗಳು ಇಂದು ಮೌಡ್ಯತೆ ಹೆಚ್ಚು ಮಾಡುತ್ತಿದೆ.ಕುವೆಂಪುರವರು ಹೇಳಿದಂತೆ ನಾವು ಗುಡಿ ಚರ್ಚು ಮಸೀದಿ ಗಳನ್ನ ಬಿಟ್ಟು ಹೊರ ಬರಬೇಕು. 20 ವರ್ಷಗಳಿಂದ ಸಾಹಿತ್ಯ ಹುಣ್ಣಿಮೆಯಲ್ಲಿ ನಾವು ಇದನ್ನೇ ಹೇಳುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕಥಾ ವಾಚನವನ್ನು ಸೂರ್ಯ ಪ್ರಕಾಶ್, ಕವಿತಾ ವಾಚನವನ್ನು ಡಾ..ಕೆ.ಜಿ.ವೆಂಕಟೇಶ್,ನವೀನ್ ಕುಮಾರ್,ಡಿ.ಗಣೇಶ್ ,ಸಂತೋಷ್ ಗದ್ದಿ, ಸತೀಶ್, ಶ್ರೀಮತಿ ಭಾರತಿ ಬಾಯಿ, ಶ್ರೀಮತಿ ಅನಿತಾ ಸೂರ್ಯ ಶ್ರೀಮತಿ ಶೋಭಾ ಶ್ರೀಮತಿ ನಳಿನಾ ವಾಚಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಕೆ.ಎಸ್.ಮಂಜಪ್ಪ ನಿರ್ವಹಿಸಿದರು.ಸ್ವಾಗತವನ್ನು ಸ್ವಾಮಿ, ವಂದನಾರ್ಪಣೆಯನ್ನು ಶಿವಪ್ಪ ಗೌಡರು ಮಾಡಿದರು.
ವೇದಿಕೆಯಲ್ಲಿ ತಾಲ್ಲೂಕು ಕ.ಸಾ.ಪ.ಅಧ್ಯಕ್ಷೆ ಮಹಾದೇವಿ, ಭಾರತಿ ರಾಮಕೃಷ್ಣ,ಕೆ.ಎಸ್.ಮಂಜಪ್ಪ, ಕೃಷ್ಣಮೂರ್ತಿ ಹಿಳ್ಳೋಡಿ, ಶ್ರೀಮತಿ ನಳಿನಾಕ್ಷಿ,ಶ್ರೀ ನವೀನ್ ಕುಮಾರ್, ಉಪಸ್ಥಿತರಿದ್ದರು.