Posted on 01-09-2025 |
Share: Facebook | X | Whatsapp | Instagram
ಹಾಲುಮತ ಮಹಾಸಭಾ ವತಿಯಿಂದ ಕುರುಬ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಕುರುಬ ಸಮುದಾಯದ 2024 2025ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಶೇ. 90% ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಂದು ಕಾರ್ಯಾಧ್ಯಕ್ಷರಾದ ಗಣೇಶ್ ಬಿಳಿಗಿ ತಿಳಿಸಿದ್ದಾರೆ.
2024-2025ಸಾಲಿನಲ್ಲಿ ಶೇ. 90% ಮೇಲ್ಪಟ್ಟ ವಿದ್ಯಾರ್ಥಿಗಳು ತಮ್ಮ ನಕಲು ಅಂಕಪಟ್ಟಿ ಮತ್ತು ಜಾತಿ ಪ್ರಮಾಣ ಪತ್ರ(ಶಾಲಾ ವರ್ಗಾವಣೆ ಪತ್ರ) ಒಂದು ಭಾವಚಿತ್ರವನ್ನು ಈ ವಿಳಾಸಕ್ಕೆ (ಗಣೇಶ್ ಗ್ರಾಫಿಕ್ಸ್ & ಪ್ರಿಂಟರ್ಸ್, ಕೆಂಚಪ್ಪ ಕಾಂಪ್ಲೆಕ್ಸ್, ದುರ್ಗಿಗುಡಿ ಮುಖ್ಯ ರಸ್ತೆ, ಶಿವಮೊಗ್ಗ.) ಖುದ್ದಾಗಿ ಅಥವಾ ಅಂಚೆ ಮೂಲಕ ಸೆಪ್ಟೆಂಬರ್ 15, 2025 ರೊಳಗೆ ತಲುಪಿಸಬೇಕು. ನಂತರ ಬಂದ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ 9986404127, 9845553091, 9845315968, 9945539129. ಸಂಪರ್ಕಿಸಿ