Posted on 27-07-2025 |
Share: Facebook | X | Whatsapp | Instagram
ದಲಿತ ಹೋರಾಟದ ಸಾಹಿತ್ಯದಲ್ಲಿ ಆಂದ್ರ ಪ್ರಸಿದ್ದವಾಗಿದೆ ಡಾ.ಕುಂಸಿ ಉಮೇಶ್
ಶಿವಮೊಗ್ಗ ಜುಲೈ 24 ದಲಿತ ಹೋರಾಟದ ಸಾಹಿತ್ಯ ದಿಲ್ಲಿ ಆಂದ್ರ ಪ್ರಸಿದ್ದವಾಗಿದೆ ಎಂದು ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ.ಕುಂಸಿ ಉಮೇಶ್ ಹೇಳಿದರು ಅವರು ಬಹುಮುಖಿ ಯ 56ನೇ ಕಾರ್ಯಕ್ರಮದಲ್ಲಿ ತೆಲುಗು ಹೋರಾಟ ಸಾಹಿತ್ಯದ ವಿಷಯವಾಗಿ ಮಾತನಾಡುತ್ತಿದ್ದರು.
ತೆಲುಗಿನ ಅನೇಕ ಪದ್ಯಗಳನ್ನು ಕನ್ನಡದಲ್ಲಿ ಅನೇಕ ಕವಿಗಳು ಅನುವಾದಿಸಿದ್ದಾರೆ.ಇವರಲ್ಲಿ ಅನೇಕರು ತಮ್ಮ ಎದೆಗೆ ಆದ ಗಾಯಗಳನ್ನು ಕವನದ ಮೂಲಕ ಹೊರ ಹಾಕಿದ್ದಾರೆ.ಆಂದ್ರ ಪ್ರದೇಶ ಇನ್ನೂ ಕೂಡ ಜಾತಿವ್ಯವಸ್ಥೆಯ ಕ್ರೂರತೆಯಿಂದ ಹೊರಬಂದಿಲ್ಲ.ಭೂ ಮಾಲೀಕರು ತಮ್ಮ ದಬ್ಬಾಳಿಕೆ ನಿಲ್ಲಿಸಿಲ್ಲ ಪೋಲೀಸ್ ವ್ಯವಸ್ಥೆ ಭೂಮಾಲೀಕರ ಪರವಾಗಿಯೇ ಕೆಲಸಮಾಡುತ್ತಿದೆ.ತೆಲುಗು ಚಿತ್ರಗಳಲ್ಲಿ ತೋರಿಸುವ ಹಿಂಸೆ ವಾಸ್ತವ ದಿಂದ ದೂರವಿಲ್ಲ.
ತೆಲುಗಿನ ಗದ್ದರ್ ಹಾಡುಗಳು ಇಂದು ಸಾಕಷ್ಟು ಜನಪ್ರಿಯ ಆಗಿದೆ.ಒಂದು ಗೀತೆ ಹೇಳಿದರೆ 5ಲಕ್ಷ ಪಡೆಯುವ ತೆಲುಗು ಗಾಯಕಿಯರು ಅಲ್ಲಿದ್ದಾರೆ.ತೆಲುಗಿನ ಕವನಗಳು ಕಚ್ಚಾಕವನಗಳಾಗಿವೆ.ಅಲ್ಲಿನ ಕವನಗಳು ಆಮಣ್ಣಿನ ವಾಸನೆಯಿಂದ,ಬೇರಿನಿಂದ ಬೇರ್ಪಟ್ಟಿಲ್ಲ.ಇಂದಿಗೂ ಆಂಧ್ರದಲ್ಲಿ ಸಾವಿರಾರು ಎಕರೆ ಭೂಮಿಯ ಒಡೆಯರು ಇದ್ದಾರೆ.ಅಲ್ಲಿ ಪ್ರತಿ ಉದ್ಯೋಗದವರಿಗೂ ಜಾತಿ ಇದೆ.
ಆಯಾ ಧರ್ಮದ ಗುರುಗಳು ಮುಲ್ಲಾಗಳು ಪಾದ್ರಿಗಳು ಹೇಳಿದರೆ ಜನ ಕೇಳುತ್ತಾರೆ ವಿನ ತೆಲುಗಿನಲ್ಲಿ ಕಾನೂನು ಮಾತನ್ನು ರಾಜಕಾರಣಿಗಳ ಮಾತನ್ನು ಯಾರೂ ಕೇಳುವುದಿಲ್ಲ.
ಖೈರ್ಲಾಂಜೆ ಊರಿನಲ್ಲಿ ಭೂಮಾಲೀಕರು ದಲಿತ ಜಾತೀಯ ತಾಯಿ ಮತ್ತು ಮಗಳನ್ನು ಪರಸ್ಪರರ ಎದುರಿಗೆ ಅತ್ಯಾಚಾರ ಮಾಡುತ್ತಾರೆ.ಕೊನೆಗೆ ಅವರ ಗರ್ಭಕೋಶಕ್ಕೆ ಹಾರೆ ಕೋಲು ಹಾಕಿ ಅದು ನೆಲದಲ್ಲಿ ಹೂತು ಕೊಳ್ಳುವಂತೆ ಮಾಡುತ್ತಾರೆ.15 ದಿನವಾದರು ಇವರ ಬಗ್ಗೆ ಯಾವುದೇ ಪತ್ರಿಕೆ ಯಲ್ಲಿ ಬರದಂತೆ ನೋಡಿಕೊಳ್ಳುತ್ತಾರೆ.ಆದರೆ ಯಾವುದೇ ದೂರು ದಾಖಲಾಗಿಲ್ಲ.
ಕರ್ನಾಟಕದಲ್ಲಿ 2024 ರಲ್ಲಿ 1ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆಗಿರುವುದು ವರದಿಯಾಗಿದೆ.ಆದರೆ ಆಂಧ್ರದಲ್ಲಿ ಅದರ ಹತ್ತುಪಟ್ಟು ಆದರೂ ವರದಿಯಾಗಿರುವುದು ಕಡಿಮೆ.ಆದರೂ ಸಾವಿರಾರು ಹಾಡುಗಾರರು ತಮ್ಮ ಜಾನಪದ ಗೀತೆಯಲ್ಲಿ ವೇದನೆ ಯಿಂದ ಹೇಳಿಕೊಂಡಿದ್ದಾರೆ.ಅಂಬೇಡ್ಕರ್ ಬಗ್ಗೆ ಕರ್ನಾಟಕ ದಲ್ಲಿ ಇದ್ದಷ್ಟು ಜನಪ್ರಿಯತೆ ಆಂಧ್ರದಲ್ಲಿ ಇಲ್ಲ ಎಂದರು.
ಚಂಬಲ್ ಕಣಿವೆಯ ಪೂಲನ್ ದೇವಿ 13 ವರ್ಷದವಳಿದ್ದಾಗ 11ಜನ ಏಕ ಕಾಲದಲ್ಲಿ ಅವಳ ಮೇಲೆ ಅತ್ಯಾಚಾರ ಮಾಡಿದರು.ಆದರೆ ಗಟ್ಟಿ ಮನಸ್ಸು ಹೊಂದಿದ ಆಕೆ ಡಕಾಯಿತೆ ಆಗಿ ಅವರೆಲ್ಲರನ್ನೂ ಕೊಂದು ಸರ್ಕಾರಕ್ಕೆ ಶರಣಾಗಿ ಮುಂದೆ ಲೋಕಸಭಾ ಸದಸ್ಯೆ ಆಗಿದ್ದಳು.
ಇತ್ತೀಚೆಗೆ ತೆಲುಗಿನ ಕವಯತ್ರಿಯರು ಬರೆಯುತ್ತಲೇ ಅಲ್ಲಲ್ಲಿ ಸರ್ಕಾರಿ ಉದ್ಯೋಗ ಮಾಡುತ್ತಾ ತಮ್ಮ ಕಾವ್ಯವನ್ನು ಬರೆದು ಲೇಖನಿಯನ್ನು ಖಡ್ಗ ಮಾಡಿಕೊಂಡಿದ್ದಾರೆ. ಒಂದು ಕವನದಲ್ಲಿ ಅವರು ಸ್ವಾಮಿಗಳ ಚಪ್ಪಲಿಗೆ ನೀವು ಪೂಜಿಸುತ್ತೀರಿ ಚಪ್ಪಲಿ ತಯಾರಿಸುವ ಮನುಷ್ಯನ ಹೊರಗಿಟ್ಟೀದ್ದೀರಿ.ಶಿಲೆಯ ಒಳಗಿಟ್ಟು ಶಿಲ್ಪಿಯ ಹೊರ ಹಾಕಿದ್ದೀರಿ ಎಂದು ನಾಗರಿಕರನ್ನು ಪ್ರಶ್ನಿಸುತ್ತಿದ್ದಾರೆ.
ಒಟ್ಟಿನಲ್ಲಿ ದಲಿತರ ಕಾವ್ಯಗಳು ಇಂದು ಆಂಧ್ರದಲ್ಲಿ ಹೊಸ ಚಳುವಳಿ ಎಬ್ಬಿಸಿದೆ ಎಂದು ಹೇಳಿ ಜಿ.ಆರ್.ಕುರುಮೆ ಚಳ್ಳಪಳ್ಳಿ ಸ್ವರೂಪರಾಣಿ ಕೊಲಕಲೂರಿ ಇನಾಕ್ ಯಂದಲೂರು ಸುಧಾಕರ್ ಇವರ ಕವಿತೆಗಳನ್ನು ವಿಮರ್ಶೆ ಮಾಡಿದರು.
ಕಾಂತೇಶ್ ಕದರಮಂಡಲಗಿ ಯವರು ವಂದಿಸಿದರು.ಡಾ.ಕೆ.ಜಿ.ವೆಂಕಟೇಶ್ .ಶ್ರೀ ಪುಟ್ಟಯ್ಯ ನವರು ಉಮೇಶ್ ರವರಿಗೆ ಅಭಿನಂದಿಸಿದರು, ಡಾ.ಹೆಚ್.ಎಸ್.ನಾಗಭೂಷಣ್ ಸರ್ವರನ್ನು ಸ್ವಾಗತಿಸಿದರು.