Posted on 20-07-2025 |
Share: Facebook | X | Whatsapp | Instagram
ಅತ್ತೆಗೊಂದು ಕಾಲ ಸೊಸೆ ಗೊಂದು ಕಾಲ ಧ್ವನಿ ಸುರುಳಿ ಬಿಡುಗಡೆ
ಶಿವಮೊಗ್ಗ ಜುಲೈ 20 ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬ ಕಡದಕಟ್ಟೆ ತಿಮ್ಮಪ್ಪ ನವರ ಧ್ವನಿ ಸುರುಳಿ ಬಿಡುಗಡೆ ಯನ್ನು ಕಸಾಪ ಜಿಲ್ಲಾ ಸಮಿತಿ ಅಧ್ಯಕ್ಷ ಡಿ.ಮಂಜುನಾಥ್ ಬಿಡುಗಡೆ ಮಾಡಿದರು.
ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಅವರು ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಎಲ್ಲಾ ಕಡೆ ಕಾರ್ಯಕ್ರಮ ನಡೆಯುತ್ತದೆ. ಆದರೆ ನಮ್ಮ ಶಿವಮೊಗ್ಗ ಆಶಾಡ ಮಾಸದಲ್ಲೂ ಕೂಡ ಕಾರ್ಯಕ್ರಮ ಮಾಡುವುದಕ್ಕೆ ಪ್ರಶಾಂತವಾದ ವಾತಾವರಣವನ್ನು ಹೊಂದಿದೆ ಹಾಗೂ ಸಾಹಿತ್ಯ ಪರಿಷತ್ತಿನ ನಮ್ಮದೇ ಕಟ್ಟಡದಲ್ಲಿ ಅತ್ಯಂತ ಉತ್ತಮವಾದ ಕಾರ್ಯಕ್ರಮವನ್ನು ಮಾಡಬಹುದು. ಅಲ್ಲದೆ ಈಗಿನ ವಿದ್ಯಾರ್ಥಿಗಳು ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ ಅಥವಾ ಸಾಹಿತ್ಯವನ್ನು ಅಭ್ಯಾಸ ಮಾಡುವಾಗ ಅವರಿಗೆ ಬೇಕಾದ ಪುಸ್ತಕಗಳು ಪರಿಕರಗಳು ನಮ್ಮಲ್ಲೇ ದೊರೆಯುತ್ತದೆ. ಈಗಾಗಲೇ ನಾವು ಒಂದು ಗ್ರಂಥಾಲಯ ವನ್ನು ಕೂಡ ಪ್ರಾರಂಭಿಸಿದ್ದೇವೆ. ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.ಮತ್ತು ಮಕ್ಕಳಿಗೆ ಸಾಹಿತ್ಯ ಜ್ಞಾನ ವಿಸ್ತರಿಸಿಕೊಳ್ಳಲು ತಂದೆ ತಾಯಿಗಳು ಕೂಡ ಪರಿಷತ್ತಿನ ಕಟ್ಟಡಕ್ಕೆ ಮಕ್ಕಳನ್ನು ಕರೆದುಕೊಂಡು ಬರುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ವೃಂದಗಾನ ಸ್ಪರ್ಧೆಗೆ ನಗರದ ವಿವಿಧ 9 ಫ್ರೌಡ ಶಾಲೆಗಳಾದ ರಾಮಕೃಷ್ಣ, ಅನನ್ಯ ,ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆ, ಆದಿಚುಂಚನಗಿರಿ, ವಿನೋಬನಗರ ಸರ್ಕಾರಿ ಪ್ರೌಢಶಾಲೆ, ಚಾಲುಕ್ಯ ನಗರ ಪಬ್ಲಿಕ್ ಸ್ಕೂಲ್ ಮತ್ತು ಸನ್ ಸಿಟಿ ಸ್ಕೂಲ್, ಕಸ್ತೂರಬಾ ಪ್ರೌಢಶಾಲೆ ಗಳ ಮಕ್ಕಳು ಆಗಮಿಸಿದ್ದರು.
ಕಾರ್ಯಕ್ರಮದ ಮುಖ್ಯ ಆತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಅನನ್ಯ ಶಾಲೆಯ ಮುಖ್ಯಸ್ಥರಾದ ಗಿರೀಶ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾದೇವಿ, ಸಂಗೀತಗಾರ ಶಶಿರೇಖಾ ಹಾಗೂ ಚಾಲುಕ್ಯ ನಗರ ಪ್ರೌಢಶಾಲೆಯ ಮುಖ್ಯಸ್ಥರಾದ ಬಸಪ್ಪ ಎನ್ ಭಾಗವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಸ್ವಾಮಿಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು.