ಭಾರತದೇಶ ಇಸಂ ನಲ್ಲಿ ಮುಳುಗಿದೆ. ಕೆ.ದಯಾನಂದ್

Culture Literature

Posted on 20-07-2025 |

Share: Facebook | X | Whatsapp | Instagram


ಭಾರತದೇಶ ಇಸಂ ನಲ್ಲಿ ಮುಳುಗಿದೆ.   ಕೆ.ದಯಾನಂದ್

ಭಾರತದೇಶ ಇಸಂ ನಲ್ಲಿ ಮುಳುಗಿದೆ.-ಕೆ.ದಯಾನಂದ್


ಶಿವಮೊಗ್ಗ  ಜುಲೈ 19  ಭಾರತ ಸಂಪೂರ್ಣವಾಗಿ ಇಸಂ ನಲ್ಲಿ ಮುಳುಗಿದೆ.ಅದು ಬದಲಾಗದಿದ್ದರೆ ದೇಶ ಬದಲಾಗುವುದಿಲ್ಲ 

ಎಂದು  ಕೆ ದಯಾನಂದ್ ಹೇಳಿದರು.ಅವರು ಬಹುಮುಖಿ ಯು 55ನೇ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಈ ಇಸಂ ಇದ್ದರೆ ಜನ ಗ್ರಹಿಸುವ ಶಕ್ತಿ ಕಳೆದುಕೊಳ್ಳುತ್ತಾರೆ.

ಯುವ ಜನಾಂಗ ಸೀಡ್ ಲೆಸ್ ಆಗಿದೆ.ಇಂದು ಹೊಸದನ್ನು ಏನನ್ನು ಕಂಡುಹಿಡಿಯದೆ ಹಳೆಯ ತಮ್ಮದೇ ಸಿದ್ದಾಂತಕ್ಕೆ ಜೋತು ಬೀಳುತ್ತಾರೆ.

ನಮ್ಮ ಬದುಕು ನಾಲ್ಕು ಚಕ್ರದ ಕಾರು ಇದ್ದಂತೆ ಅದರಲ್ಲಿ ವೃತ್ತಿ ಮತ್ತು ಪ್ರವೃತ್ತಿ ಯ ಎಲ್ಲ ಚಕ್ರಗಳು ಇರುತ್ತವೆ.ಆದರೆ ಒಂದು ಚಕ್ರ ಹಾಳಾದರು ಕಾರು ಮುಂದೆ ಚಲಿಸುವುದಿಲ್ಲ.ನಮ್ಮ ವೃತ್ತಿ ಬದುಕು ಚೆನ್ನಾಗಿರಬೇಕಾದರೆ ಪ್ರವೃತ್ತಿ ಯ ಬದುಕು ಚೆನ್ನಾಗಿರಬೇಕು.

ವೃತ್ತಿ ಬದುಕಿಗೆ ವೇತನ ಬರುತ್ತದೆ ಅದು ಕೇವಲ ಕರ್ತವ್ಯ ಆದರೆ ಅದನ್ನು ಮೀರಿ ಸಾಮಾಜಿಕ ಸೇವೆ ಮಾಡಿದರೆ ಅದು ಸೇವೆ ಆಗುತ್ತದೆ.ಅದು ನಮ್ಮ ವ್ಯಕ್ತಿತ್ವ ಬೆಳೆಸುತ್ತದೆ.ಯಾವ ಪ್ರವೃತ್ತಿ ಯಿಂದ ಸಮಾಜಕ್ಕೆ ಅನುಕೂಲ ಆಗುತ್ತದೆಯೊ ಅದು ಉತ್ತಮ ಸಾಮಾಜಿಕ ಪ್ರವೃತ್ತಿ..

ಇಂದು ಸಮಾಜಕ್ಕೆ  ಕಾನೂನು ಭಯವಿಲ್ಲ ವೈಯಕ್ತಿಕ ಪ್ರತಿಷ್ಠೆ ಗಾಗಿ ಯುದ್ದವಾಗುತ್ತಿದೆ. ಮನುಷ್ಯರಿಗೆ ಪ್ರಪಂಚವೇ ಗಡಿಯಾಗಿದೆ ಕನ್ನಡಿಗರು ಇಂದು ವಿಶ್ವದಾದ್ಯಂತ ಹಂಚಿ ಹೋಗಿದ್ದಾರೆ. 

ನಮಗೆ ಇಂದು ದೈಹಿಕ ಮತ್ತು ಮಾನಸಿಕ ಸಮಸ್ಯೆ ಹೆಚ್ಚಾಗಿದೆ ಕೌಟುಂಬಿಕ ಸಮಸ್ಯೆ ಹೆಚ್ಚಾಗಿದ್ದು ಇಂದು ಯುವಕರು ಬಹುಬೇಗ ವಿಚ್ಚೇದನ ಹೊಂದುತ್ತಾರೆ.ಹಳ್ಳಿಗಳ ಬದುಕು ದುಸ್ತರವಾಗಿದೆ.ಶ್ರಮಪಡದೆ ಹಣ ಪಡೆಯುವ ಮಾರ್ಗವನ್ನು ಯುವಕರು ಯೋಚಿಸುತ್ತಾರೆ. ಇಂದು ರಾಜಕೀಯ ವ್ಯಕ್ತಿಗಳಿಗಿಂತ ಅಧಿಕಾರಿಗಳು ಹೆಚ್ಚು  ಹಾಳಾಗಿದ್ದಾರೆ.ಎಂದರು. ಆದರೆ

ಅವರು ಬದಲಾಗಲೇ ಬೇಕಾಗಿದೆ. ಹಾಗಾಗಿ ನಾನು ನನ್ನ ಬದುಕಿನ ಕತೆಯನ್ನು ಯುವಕರಿಗೆ ಆಗಾಗ ಭಾಷಣದಲ್ಲಿ ಹೇಳುತ್ತಿದ್ದೆ. ಮುಂದೆ ಅದನ್ನೆ ಹಾದಿಗಲ್ಲು ಎಂಬ ಆತ್ಮಕತೆ ಬರೆದೆ.ಈಗಾಗಲೇ ಅದು 13 ಮುದ್ರಣ ಕಂಡಿದೆ. 2,500ಪುಸ್ತಕಗಳನ್ನು ಉಚಿತವಾಗಿ 

ಹಾಸ್ಟೆಲ್ ಗಳಿಗೆ ನೀಡಲಾಗಿದೆ. ಇದರ ಉದ್ದೇಶ ಬಡ ಹುಡುಗರು ಓದಿ ಎಷ್ಟೇ ಕಷ್ಟವಿದ್ದರು ಕೂಡ ಪ್ರಯತ್ನ ಶ್ರಮ ಹಾಕಿದರೆ ಯಾರು ಬೇಕಾದರೂ ಕಮೀಷನರ್ ಆಗಬಹುದು ಎಂದರು.

ಬಹುಮುಖಿಯ ಡಾ.ನಾಗಭೂಷಣ್ ರವರು ಕಾರ್ಯಕ್ರಮದ ಸಂಪೂರ್ಣ ನಿರೂಪಣೆ ಮಾಡಿದರು.

Search