Posted on 19-07-2025 |
Share: Facebook | X | Whatsapp | Instagram
ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ಜಿಲ್ಲಾಧಿಕಾರಿಗೆ ಮನವಿ
ಶಿವಮೊಗ್ಗ ಜುಲೈ 19. ಇಲ್ಲಿನ ಬಗರ್ ಹುಕುಂ ಸಕ್ರಮೀಕರಣ ಸಮಿತಿ ವತಿಯಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಸುಮಾರು 30 40 ವರ್ಷಗಳಿಂದ ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ರೈತರು 1990-1991, 1998-99 ರವರೆಗೆ ಫಾರಂ ನಂಬರ್ 50 ,53 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಈಗಾಗಲೇ ಬಗರ್ ಹುಕುಂ ಸಮಿತಿ ರಚನೆಯಾಗಿದ್ದು ಉಪ ವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ ಅನುಮತಿಯನ್ನು ಪಡೆದಿದ್ದು ಈ ಅನುಮತಿ ಪತ್ರ ಗ್ರಾಮ ಲೆಕ್ಕಾಧಿಕಾರಿಗಳ ವರದಿಗೆ ಹೋದ ನಂತರ ವರದಿ ನೀಡದೆ ಜಿಲ್ಲಾಧಿಕಾರಿ ಗಳಾದ ತಮ್ಮಮೇಲೆ ನೆಪ ಒಡ್ಡಿ ನಿರಾಕರಿಸುತ್ತಿದ್ದಾರೆ .
ಸರ್ಕಾರದ ಸುತ್ತೊಲೆಯಂತೆ ಫಾರಂ-57ರಡಿಯ ಲ್ಲಿ ಅರ್ಜಿ ಸಲ್ಲಿಸಿದ್ದ ರೈತರಿಗೆ ಮಾತ್ರ 10 ಕಿ. ಮೀ ನಗರ ವ್ಯಾಪ್ತಿ ಇರುವುದರಿಂದ ವರದಿ ನೀಡಬಾರದೆಂದು ಸರ್ಕಾರದ ಆದೇಶವಿದೆ. ಈ ಆದೇಶವು 50,53ಅರ್ಜಿಗೆ ಅನ್ವಯಿಸುವುದಿಲ್ಲ. ಹಾಗೂ ಸರ್ವೇ ಇಲಾಖೆ ಯವರು ನೀಡಿದ ವರದಿಯು ಅವೈಜ್ಞಾನಿಕವಾಗಿದ್ದು, ವರದಿಯನ್ನು ಪುನರ್ ಪರಿಶೀಲಿಸಿ ಹಾಗೂ 50, 53 ಅರ್ಜಿಯನ್ನು ಪರಿಗಣಿಸಿ ರೈತರಿಗೆ ಸಾಗುವಳಿ ನೀಡುವಂತೆ ದಯಮಾಡಿ ಸೂಕ್ತ ಅಧಿಕಾರಿಗಳಿಗೆ ಆದೇಶ ನೀಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಎಂದು ಮನವಿ ಮಾಡಿಕೊಂಡಿದ್ದಾರೆ .ಈ ಸಂದರ್ಭದಲ್ಲಿ
ಎಸ್ ಗಿರೀಶ್ ಸದಸ್ಯರು ಬಗರ್ ಹುಕುಂ ಸಮಿತಿ ಶಿವಮೊಗ್ಗ. ಕಲಗೋಡು ರತ್ನಾಕರ್ ನಾಗೇಂದ್ರಪ್ಪ ಫಾರಂ, ಸೋಗಾನೆ ಕೃಷ್ಣಪ್ಪ, ಪ್ರವೀಣ್, ಮಧು ಸೂಧನ್, ವೇಲು ಕಲ್ಲಾಪುರ ಮಂಜಣ್ಣ, ವೆಂಕಟೇಶ್, ಕಟೀಕೆರೆ ಹುಚ್ಚಪ್ಪ, ಮಂಜುನಾಥ್, ಸಂಜಯ್, ಮಂಜನಾಯ್ಕ್ ಕಲ್ಲಾಪುರ, ಹರೀಶ್ ನಾಯ್ಕ ನಿದಿಗೆ ಕುಮಾರ್ ಹಲವಾರು ಮುಖಂಡರು ಉಪಸ್ಥಿತರಿದ್ದರು.