ಜಾನಪದ ಸೊಗಡು ಪ್ರದೇಶವಾರು ಭಿನ್ನ - ಡಾ. ಗಿರಿಧರ್

Culture Village culture

Posted on 12-07-2025 |

Share: Facebook | X | Whatsapp | Instagram


ಜಾನಪದ ಸೊಗಡು ಪ್ರದೇಶವಾರು ಭಿನ್ನ - ಡಾ. ಗಿರಿಧರ್

ಜಾನಪದ ಸೊಗಡು ಪ್ರದೇಶವಾರು ಭಿನ್ನ 


 ಶಿವಮೊಗ್ಗ: ಕನ್ನಡ ಭಾಷೆ ಯಲ್ಲಿನ ಜಾನಪದ ಸೊಗಡು ಪ್ರದೇಶವಾರು ಭಿನ್ನ ಭಿನ್ನ ವಾಗಿದೆ  ಎಂದು ಕನ್ನಡ ಜಾನಪದ ಪರಿಷತ್ ನ ಶಿವಮೊಗ್ಗ ಜಿಲ್ಲಾ ಘಟಕದ ಖಜಾಂಜಿ ಡಾ. ಗಿರಿಧರ್   ತಿಳಿಸಿದರು.

           ಕನ್ನಡ ಜಾನಪದ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ\' ಸರ್ವೋದಯ ಪಿ. ಯು  ಕಾಲೇಜಿನಲ್ಲಿ  ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಜಾನಪದ ಅರಿವು   ಕಾರ್ಯಕ್ರಮದಲ್ಲಿ  ಮಾತನಾಡಿ,

   ಜಾನಪದ ಸಾಹಿತ್ಯದಲ್ಲಿ ಬದುಕಿನ ಮೌಲ್ಯ ಗಳಿವೆ ಎಂದರು. 

      ಕನ್ನಡ ಜಾನಪದ ಪರಿಷತ್ ನ ಪ್ರಧಾನ ಕಾರ್ಯದರ್ಶಿ  ಡಾ. ಡಿ. ಬಿ. ಶಿವರುದ್ರಪ್ಪ  ಮಾತನಾಡಿ, \'ಜಾನಪದದ ಅರಿವು ಮುಖ್ಯವಾಗಿ ವಿದ್ಯಾರ್ಥಿಗಳನ್ನು ತಲುಪಬೇಕಿದೆ.  ಈ ಹಿನ್ನೆಲೆಯಲ್ಲಿ ಈ ಬಗೆಯ ಕಾರ್ಯಕ್ರಮ ಅತ್ಯಂತ ಅಗತ್ಯ ವಾಗಿದ್ದು, ಇದರ ಚಲಾವಣೆಯಿಂದ ದೇಸಿಜ್ಞಾನವು ಮರುಹುಟ್ಟು ಪಡೆಯುತ್ತದೆ ಎಂದರು.

     ಕಾರ್ಯಕ್ರಮ ದ ಮುಖ್ಯ ಉಪನ್ಯಾಸವನ್ನು ಕನ್ನಡ ಜಾನಪದ ಪರಿಷತ್ ನ  ತಾಲೂಕು ಘಟಕ ಶಿಕಾರಿಪುರ ಅಧ್ಯಕ್ಷ ಡಾ.  ರಾಜೇಂದ್ರ ತಗಡ್ಲಿ,,\'ಜನಪದ-ಜಾನಪದ ದ ವ್ಯತ್ಯಾಸ, ಅದರ ಹುಟ್ಟು-ಬೆಳವಣಿಗೆ, ಪ್ರಾಮುಖ್ಯತೆ ಯನ್ನು ಹೇಳಿ, ಜಾನಪದ ಗೀತೆಗಳನ್ನು ಹಾಡಿ, ವ್ಯಾಖ್ಯಾನ ಮಾಡಿದರು.

ಕನ್ನಡ ಜಾನಪದ ತಾಲೂಕು ಘಟಕದ  ಹರ್ಷರವರು, ಜಾನಪದ ದ ಮೂಲ ಹಾಡುಗಳನ್ನು ಪರಿಚಯಿಸಿ, ಹಾಡಿ ಮನರಂಜಿಸಿದರು.

ತಾಲೂಕು ಘಟಕ ದ  ತಿಮ್ಮೆಶಪ್ಪ  ಜಾನಪದ ಕುರಿತ ಸ್ವರಚಿತಾ ಕವಿತೆಯನ್ನು ವಾಚನ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ  ಸರ್ವೋದಯ ಪಿ ಯು ಕಾಲೇಜಿನ ಕನ್ನಡ ಉಪನ್ಯಾಸಕ  ಮಂಜುನಾಥ  ಗೊರಟ್ಟಿ,\'ಜಾನಪದ ಹಾಡುಗಳಲ್ಲಿ ಕೌಟುಂಬಿಕ ಸಂಬಂಧಗಳನ್ನು ಕಟ್ಟುವಲ್ಲಿ ಪ್ರಮುಖ ವಾಗಿವೆ\'ಎಂದರು.

   ಕಾರ್ಯಕ್ರಮದಲ್ಲಿ ಪ್ರೊ. ಕುಮಾರ ಸ್ವಾಮಿ, ಮಂಜಪ್ಪ, ಹಿರಿಯ ವಿದ್ಯಾರ್ಥಿಗಳಾದ ರಂಜಿತಾ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Search