Posted on 09-07-2025 |
Share: Facebook | X | Whatsapp | Instagram
ಕರ್ನಾಟಕದಲ್ಲಿ ದ್ವಿಭಾಷಾ ಶಿಕ್ಷಣ ಜಾರಿಗೆ ಬರಲಿ
ಕರ್ನಾಟಕ ರಾಜ್ಯ ಸರ್ಕಾರವು ಕನ್ನಡದ ಉಳುವಿಗಾಗಿ ದ್ವಿಭಾಷಾ ಶಿಕ್ಷಣ ನೀತಿ ತಕ್ಷಣ ಜಾರಿಗೆ ತರಲಿ ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಭಾಷೆ ಇಲ್ಲದ ರಾಜ್ಯ ವಾಗುತ್ತದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಹಣ ಮಾಡುವುದಾಗಿದೆ ಹಾಗಾಗಿ ಅವರು ಕನ್ನಡ ಮಾಧ್ಯಮ ಎಂದು ತೆಗೆದುಕೊಂಡು ಇಂಗ್ಲಿಷ್ ಹೇಳಿ ಕೊಡುತ್ತಿದ್ದಾರೆ.ಇದರಿಂದ ಗ್ರಾಮೀಣ ಜನ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ.ಸರ್ಕಾರಿ ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರ ಮಕ್ಕಳು ಕೂಡ ಖಾಸಗಿ ಇಂಗ್ಲೀಷ್ ಶಾಲೆಗಳಲ್ಲಿ ಓದುತ್ತಿದ್ದಾರೆ.
ಕನ್ನಡ ಶಾಲೆಗಳನ್ನು ಉಳಿಸುವ ಉದ್ದೇಶ ದಿಂದ ಸರ್ಕಾರ 1ನೇ ತರಗತಿಯಿಂದ ಇಂಗ್ಲಿಷ್ ಕಲಿಕೆ ಶುರುಮಾಡಿದೆ.
ನಮ್ಮಲ್ಲಿ ತ್ರಿಭಾಷಾ ಪದ್ದತಿ ಇರುವುದರಿಂದ ಮಕ್ಕಳು 3ವಿಷಯವನ್ನು ಭಾಷೆಯಾಗಿ ಹತ್ತನೇ ತರಗತಿಯ ವರೆಗೆ ಕಲಿಯ ಬೇಕಾಗುತ್ತದೆ.
ಕನ್ನಡ ಭಾಷೆಯ ಒಟ್ಟು ಅಂಕ 125 ಆಗಿರುವುದರಿಂದ ವಿದ್ಯಾರ್ಥಿಗಳು ಮುಂದಿನ ಓದಿಗಾಗಿ ಅಂದರೆ ಮೆಡಿಕಲ್ ಇಂಜಿನಿಯರಿಂಗ್ ಕಾಲೇಜು ಸೇರುವುದಕ್ಕಾಗಿ ಹೆಚ್ಚು ಅಂಕ ಗಳಿಸಲು ಸಂಸ್ಕೃತ ಹಿಂದಿ ಮತ್ತು ಇಂಗ್ಲೀಷ್ ಅಥವಾ ಹಿಂದಿ ಇಂಗ್ಲಿಷ್ ಮತ್ತು ಉರ್ದು ತೆಗೆದು ಕೊಳ್ಳುತ್ತಿದ್ದಾರೆ.ಸಹಜವಾಗಿ ಕನ್ನಡ ಕಣ್ಮರೆಯಾಗುತ್ತದೆ.
ಹಾಗೆಂದು ಕನ್ನಡದ ಅಂಕ 125ರಿಂದ 100ಕ್ಕೆ ಇಳಿಸಿದರೆ ಸರ್ಕಾರವೇ ಕನ್ನಡದ ಕತ್ತು ಹಿಸುಕಿದಂತಾಗುತ್ತದೆ. 1ನೇ ತರಗತಿಯಿಂದ ಇಂಗ್ಲಿಷ್ ಕಲಿಸದಿದ್ದರೆ ವಿದ್ಯಾರ್ಥಿಗಳ ಸಂಖ್ಯೆ ಕೂಡ ಕಡಿಮೆ ಆಗುತ್ತದೆ.
ಕೇರಳ ತಮಿಳುನಾಡು ರಾಜ್ಯ ಗಳಲ್ಲಿ ಹಿಂದಿ ಕೈಬಿಡಲಾಗಿದೆ.ಕರ್ನಾಟಕದಲ್ಲಿ ಹಿಂದಿ ಇದೆ.ಹಾಗೆಂದು ಹಿಂದಿ ಕಲಿತು ಅದರಿಂದ ಉದ್ಯೋಗ ಸಂಪಾದಿಸಿದ ಕನ್ನಡಿಗರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.ಬದಲಾಗಿ ಹಿಂದಿ ಕಲಿಯದಿದ್ದರು ಹಿಂದಿ ಭಾಷೆಯ ರಾಜ್ಯಗಳಲ್ಲಿ ಶೇ 10ರಷ್ಟು ಕೇರಳಿಗರು ತಮಿಳರು ಉದ್ಯೋಗ ಸಂಪಾದಿಸಿದ್ದಾರೆ.
ಕನ್ನಡಿಗರ ಈ ಸಮಸ್ಯೆಗೆ ಸದ್ಯಕ್ಕೆ ನಮ್ಮ ಮುಂದೆ ಇರುವ ಪರಿಹಾರದ ಮಾರ್ಗ ಎಂದರೆ ದ್ವಿಭಾಷಾ ಪದ್ದತಿ.
ಕನ್ನಡ ಮತ್ತು ಇಂಗ್ಲಿಷ್ ,ಕನ್ನಡ ಮತ್ತು ಹಿಂದಿ, ಕನ್ನಡ ಮತ್ತು ಸಂಸ್ಕೃತ, ಕನ್ನಡ ಮತ್ತು ಉರ್ದು ಯಾವುದು ಬೇಕಾದರೂ ಕನ್ನಡದ ಜನ ತೆಗೆದುಕೊಂಡು ಓದಲಿ.