Posted on 08-07-2025 |
Share: Facebook | X | Whatsapp | Instagram
ಮೂಢನಂಬಿಕೆಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿ
ಶಿವಮೊಗ್ಗ ಜುಲೈ 8 ಇಲ್ಲಿಗೆ ಸಮೀಪದ ಹೊಳೆ ಹೊನ್ನೂರಿನ ಜಂಬರಗಟ್ಟೆ ಗ್ರಾಮದಲ್ಲಿ ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯನ್ನು ತಿಳಿಸಿ ಕೊಲೆ ಮಾಡಲಾಗಿದೆ.
ಜಂಬದಗಟ್ಟೆ ಗ್ರಾಮದ ಗೀತಮ್ಮ ಎಂಬ 45 ವರ್ಷದ ಮಹಿಳೆ ಗೆ ಹುಷಾರ್ ನದಪಯುಕ್ತ ಅವಳ ಪುತ್ರ 20 ವರ್ಷದ ಸಂಜಯ್ ಎಂಬಾತನು ಅದೇ ಗ್ರಾಮದ ಆಶಾ ಎಂಬುವಳ ಬಳಿಗೆ ಕರೆದು ಹೋಗಿದ್ದಾನೆ, ಆಶಾ ಮತ್ತು ಆಕೆಯ ಗಂಡ ಸಂತೋಷ್ ಕುಮಾರ್ ಗೀತಮ್ಮನಿಗೆ ದೆವ್ವ ಹಿಡಿದಿದೆ ಅವಳ ದೇಹದಲ್ಲಿ ಆತ್ಮ ಹೊಕ್ಕಿದೆ ಅದನ್ನು ಹೊರ ತೆಗೆಯಬೇಕು ಎಂದು ಯೋಚಿಸಿ ರಾತ್ರಿ 9:30 ರಿಂದ 1 ಗಂಟೆಯವರೆಗೆ ಕೋಲಿನಿಂದ ಆಕೆಗೆ ಹೊಡೆದಿದ್ದಾರೆ ಮತ್ತು ಆಕಯ್ಯ ತಲೆ ಮೇಲೆ ಕಲ್ಲು ಹೊರೆಸಿ ಮರದ ಟೊಂಗೆಯಿಂದ ಬಾರಿಸಿದ್ದಾರೆ ಆಕೆ ಕುಸಿದು ಬಿದ್ದಾಗ ಅವಳನ್ನು ಮನೆಗೆ ಕಳಿಸಿದ್ದಾರೆ.
ತೀರಾ ಅಸ್ವಸ್ಥಳಾದ ಆಕೆಯನ್ನು ಹೊಲೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ತೀರಿಕೊಂಡಿದ್ದಾಳೆಂದು ಗೊತ್ತಾಗಿದೆ.
ಪೊಲೀಸರು ಈ ದೆವ್ವ ಬಿಡಿಸುವ ಸಂತೋಷ್ ಕುಮಾರ್ ಮತ್ತು ಆಶಾರವರಿಗೆ ಕೇಸು ದಾಖಲು ಮಾಡಿಕೊಂಡು ದೆವ್ವ ಬಿಡಿಸುತ್ತಿದ್ದಾರೆ.