Posted on 07-07-2025 |
Share: Facebook | X | Whatsapp | Instagram
ಭಾರತ ದೇಶ ಕಂಡ ಶ್ರೇಷ್ಠ ಪ್ರಧಾನಿ ಜವಾಹರಲಾಲ್ ನೆಹರು -ಮಣಿ ಶಂಕರ್ ಅಯ್ಯರ್
ಮೈಸೂರು ಜುಲೈ 7. ಸ್ವತಂತ್ರ ಭಾರತದ 75 ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಧಾನಿ ಎಂದರೆ ಜವಾಹರಲಾಲ್ ನೆಹರು ಹಾಗೂ ದೇಶದ ಅತ್ಯಂತ ಕೆಟ್ಟ ಪ್ರಧಾನಿ ಎಂದರೆ ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಹೇಳಿದರು.
ಈ ಹಿಂದೆ ಪ್ರಧಾನಿ ಮೋದಿಯವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದ ಮಣಿ ಶಂಕರಯ್ಯರ್ ರವರು ಮೈಸೂರಿನ ಲಿಟರರಿ ಫಾರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ಸ್ ಕ್ಲಬ್ ಆಯೋಜಿಸಿದ್ದ ಮೈಸೂರು ಸಾಹಿತ್ಯ ಸಂಭ್ರಮದ ಭಾನುವಾರದ ಘೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ದೇಶ ಕಂಡ ಶ್ರೇಷ್ಠ ಪ್ರಧಾನ ಮಂತ್ರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಜವಾಹರಲಾಲ್ ನೆಹರು ನಂತರ ರಾಜೀವ್ ಗಾಂದಿ ಲಾಲ್ ಬಹದ್ದೂರ್ ಶಾಸ್ತ್ರಿ ನರಸಿಂಹರಾವ್ ವಾಜಪೇಯಿ ಐ.ಕೆ. ಗುಜ್ರಾಲ್ ಅವರಿಗೆ ಸ್ಥಾನವನ್ನು ನೀಡಿದರು.
ತುರ್ತು ಪರಿಸ್ಥಿತಿ ತಂದ ಕಾರಣ ಇಂದಿರಾಗಾಂಧಿಯವರನ್ನು ಕ್ಷಮಿಸಲು ಸಾಧ್ಯವಿಲ್ಲ ನರಸಿಂಹರಾವ್ ಶ್ರೇಷ್ಠ ಆರ್ಥಿಕ ತಜ್ಞರಾದರು ಬಾಬರಿ ಮಸೀದಿ ಧ್ವಂಸ ಮಾಡಲು ಸಹಕಾರ ನೀಡಿದರು. ಮನಮೋಹನ್ ಸಿಂಗ್ ಬೇರೆಯವರ ಮೇಲೆ ಅವಲಂಬಿತರಾಗಿ ಅಧಿಕಾರ ನಡೆಸಿದರು.
ಮೋದಿಯವರಿಗೆ ದೇಶದ ಮೂರನೇ ಒಂದು ಭಾಗದಷ್ಟು ಜನ ಮಾತ್ರ ಮತ ನೀಡಿದ್ದಾರೆ ಅಂದರೆ ಹಿಂದುಗಳ ಅರ್ಧದಷ್ಟು ಜನರು ಅವರಿಗೆ ಮತ ಹಾಕಿಲ್ಲ. ಭಾರತ ದೇಶ ಬಹುತ್ವ ಹೊಂದಿದ ದೇಶ ಇದು ಯಾವತ್ತೂ ಕೂಡ ಒಂದು ಧರ್ಮ ಒಂದು ಭಾಷೆ ಒಂದು ದೇಶ ಆಗಿರಲಿಲ್ಲ. ಇಲ್ಲಿನ ಜನ ಅನೇಕ ಭಾಷೆ ಅನೇಕ ಧರ್ಮ ಮತ್ತು ಸಂಸ್ಕೃತಿಯನ್ನು ಹೊಂದಿದ್ದಾರೆ ಕೋಮುವಾದ ಮಾಡುವವರು ಎಂದಿಗೂ ಭಾರತದಲ್ಲಿ ಉಳಿಯಲಾರರು. ದೇಶವನ್ನು ಅರಾಜಕತೆಯತ್ತ ಮೋದಿ ಕೊಂಡೊಯ್ಯುತಿದ್ದಾರೆ ಅತ್ಯಂತ ಕೆಟ್ಟ ಪ್ರಧಾನಿಯಾಗಿರುವ ದೇಶದ ಭವಿಷ್ಯವನ್ನೇ ಹಾಳು ಮಾಡುವ ಹುನ್ನಾರ ಇವರಲ್ಲಿದೆ ಇವರೇ ಮುಂದುವರೆದರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮೈಸೂರಿನ ಬಗ್ಗೆ ಹೇಳುತ್ತಾ ಕಳದ 700 ವರ್ಷಗಳಿಂದ ಹಿಂದೂ ಮುಸ್ಲಿಮರು ಐಕ್ಯತೆಯಿಂದ ಇಲ್ಲಿ ಬದುಕಿದ್ದಾರೆ ಮೈಸೂರು ಸಂಸ್ಥಾನದ ಒಡೆಯರು ಹೈದರಾಲಿ ಟಿಪ್ಪು ಸುಲ್ತಾನ್ ಅವರು ರಾಜ್ಯಕ್ಕೆ ಅತ್ಯುತ್ತಮವಾದ ಕೊಡುಗೆಯನ್ನು ನೀಡಿದ್ದಾರೆ ಈ ದೇಶದಲ್ಲಿ 20 ಕೋಟಿಯಷ್ಟು ಮುಸ್ಲಿಮರು ಆದಿವಾಸಿಗಳು ಕ್ರೈಸ್ತರು ಸಿಕ್ಕರು ಇದ್ದಾರೆ ಈ ದೇಶ ಹಿಂದೂಗಳ ದೇಶ ಮಾತ್ರವಲ್ಲ ಅದು ಎಲ್ಲರಿಗೂ ಸೇರಿದ ದೇಶ ಎಂದರು.