ದೇಹದ ಮೇಲಿನ ಮೋಹ ಮರೆತು ವಚನ ಸಾಹಿತ್ಯ ಬೆಳೆಸಿದವರು ಡಾ.ಫ.ಗು.ಹಳಕಟ್ಟಿ. ಡಾ ಬಸವ ಮರುಳಸಿದ್ದ ಸ್ವಾಮಿಗಳು.

Culture Literature

Posted on 02-07-2025 |

Share: Facebook | X | Whatsapp | Instagram


ದೇಹದ ಮೇಲಿನ ಮೋಹ ಮರೆತು ವಚನ ಸಾಹಿತ್ಯ ಬೆಳೆಸಿದವರು ಡಾ.ಫ.ಗು.ಹಳಕಟ್ಟಿ. ಡಾ ಬಸವ ಮರುಳಸಿದ್ದ ಸ್ವಾಮಿಗಳು.

ದೇಹದ ಮೇಲಿನ ಮೋಹ ಮರೆತು ವಚನ ಸಾಹಿತ್ಯ ಬೆಳೆಸಿದವರು ಡಾ.ಫ.ಗು.ಹಳಕಟ್ಟಿ. ಡಾ. ಬಸವ ಮರಳುಸಿದ್ದ ಸ್ವಾಮಿಗಳು.

ಶಿವಮೊಗ್ಗ ಜುಲೈ 2. ದೇಹದ ಮೇಲಿನ ಮೋಹ ಮರೆತು ವಚನ ಸಾಹಿತ್ಯ ಬೆಳೆಸಿದವರು ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು,ಎಂದು ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮಿಗಳು ಹೇಳಿದರು.ಅವರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ವತಿಯಿಂದ ನಡೆದ ಡಾ.ಫ.ಗು.ಹಳಕಟ್ಟಿರವರ ಜನ್ಮದಿನ ಮತ್ತು ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆ ಯಲ್ಲಿ ಮಾತನಾಡುತ್ತಿದ್ದರು.

ಬಣಜಿಗ ಸಮುದಾಯದ ಮೂಲಪುರುಷ ಗುಜರಾತಿನ  ಆದಯ್ಯನವರಂತೆ ಹಳಕಟ್ಟಿ ಕೆಲಸ ಮಾಡಿದರು.ತನ್ನ ಮಗ ತೀರಿಕೊಂಡ ಮೇಲೆ ಸಂಪೂರ್ಣ ವಚನ ಸಂಗ್ರಹ ಮಾಡುವುದರಲ್ಲಿ ತೊಡಗಿ ಒಂದು ಸಾವಿರಕ್ಕೂ ಹೆಚ್ಚು ವಚನ ಸಂಗ್ರಹ ಮಾಡಿದರು.ಅದಕ್ಕೂ ಮೊದಲು ಕೇವಲ 50 ಕ್ಕಿಂತ ಕಡಿಮೆ ವಚನಗಳಿದ್ದವು.ತಾವು ಸಂಗ್ರಹಿಸಿದ ವಚನಗಳನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲು ತಮ್ಮ ಸ್ವಂತ ಮನೆ ಮಾರಿ ಮುದ್ರಣಾಲಯ ಸ್ಥಾಪನೆ ಮಾಡಿ ವಚನ ಸಾಹಿತ್ಯ ಸಂಗ್ರಹ ಮಾಡಿದರು.ಆಲೂರು ವೆಂಕಟರಾಯರ ಜೊತೆ ಬಾಂಬೆಯಲ್ಲಿ ಲಾ ಶಿಕ್ಷಣ ಪಡೆದ ಇವರು ಮುಂದೆ ಶಿವಾನುಭವ ಎಂಬ ಮಾಸಿಕ ಪತ್ರಿಕೆ ಹೊರಡಿಸಿದರು.ಜೊತೆಗೆ ಕನ್ನಡಿಗರಿಗಾಗಿ ನವ ಕರ್ನಾಟಕ ಎಂಬ ವಾರಪತ್ರಿಕೆ ಸ್ಥಾಪಿಸಿ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದರು.ಬಿಜಾಪುರದ ನಗರಸಭೆ ಅಧ್ಯಕ್ಷ ರಾಗಿ ಇಡೀ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ವಿಶ್ವ ವಿದ್ಯಾಲಯ ಕಟ್ಟಿ ಮುಂದೆ ಡಾಕ್ಟರೇಟ್ ಪಡೆದರು. ಮುಂಬೈ ಸರ್ಕಾರದಿಂದ ರಾವ್ ಬಹದ್ದೂರ್ ಪ್ರಶಸ್ತಿ ಪಡೆದರು.ಹಾಗೇ ವಚನಗಳನ್ನು ಸಂಗ್ರಹಿಸಿ ಇವರು ಜನ ಸಾಮಾನ್ಯರಿಂದ ವಚನ ಪಿತಾಮಹ ವಚನ ಗುಮ್ಮಟ ಎಂಬ ಬಿರುದು ಪಡೆದರು.ಇಂದು ಇಪ್ಪತ್ತು ಸಾವಿರಕ್ಕೂ ಹೆಚ್ಚು ವಚನ ಸಂಗ್ರಹವಿದೆ.ಕರ್ನಾಟಕ ಸರ್ಕಾರ ಕೂಡ ವಚನ ಸಾಹಿತ್ಯಕ್ಕೆ ಆದ್ಯತೆ ನೀಡಿ ಕಡಿಮೆ ಬೆಲೆಯಲ್ಲಿ ಪುಸ್ತಕ ಮುದ್ರಿಸಿ ಜನರಿಗೆ ನೀಡಿದೆ. ಹಾಗಾಗಿ ಫ.ಗು.ಹಳಕಟ್ಟಿಯವರು ಶ್ರೀ ಗಂಧದ ಮರವಿದ್ದಂತೆ ಅವರು ತೀರಿಕೊಂಡರು ಕೂಡ ಅವರು ಮಾಡಿದ ಕೆಲಸ ನಾಡಿನಾದ್ಯಂತ ಕೆಂಪು ಬೀರುತ್ತಲೇ ಇದೆ ಎಂದರು.ಕಾರ್ಯಕ್ರಮದಲ್ಲಿ ಕುಮಾರಿ ತನ್ಮಯ ಪ್ರಾರ್ಥನೆ ಮಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗದ ಸಹಾಯಕ ನಿರ್ದೇಶಕ ಉಮೇಶ್ ಸ್ವಾಗತಿಸಿದರು.ವೇದಿಕೆಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಚಂದ್ರಭೂಪಾಲ್ ಹೊಸನಗರದ ಅಭಿನವ ಚನ್ನಬಸವ ಸ್ವಾಮೀಜಿ ಯವರು ಉಪಸ್ಥಿತರಿದ್ದು ಮಾತನಾಡಿದರು. ನೃಪತುಂಗ ನಿರೂಪಣೆ ಮಾಡಿದರು

Search