Posted on 28-06-2025 |
Share: Facebook | X | Whatsapp | Instagram
ಭಾರತ ದೇಶದ ನಂಜು ಎಂದರೆ ಜಾತಿವಾದ ಡಾ.ಕುಂಸಿ ಉಮೇಶ್
ಶಿವಮೊಗ್ಗ ಜೂನ್ 28. ಭಾರತ ದೇಶದ ನಂಜು ಎಂದರೆ ಜಾತಿವಾದ ಅದನ್ನು ವಿರೋಧಿಸುವ ಕೆಲಸವನ್ನು ಲೇಖಕ ರಾಜೇಂದ್ರ ರವರು ಮಾಡಿದ್ದಾರೆ. ಎಂದು ಡಾ.ಕುಂಸಿ ಉಮೇಶ್ ಹೇಳಿದರು.ಅವರು ಬಹುಮುಖಿ 54ನೇ ಕಾರ್ಯಕ್ರಮ ಡಾ.ಟಿ.ರಾಜೇಂದ್ರ ರವರ ಮಗಪುಸ್ತಕ ಬಿಡುಗಡೆ ಯಲ್ಲಿ ಮಾತನಾಡುತ್ತಿದ್ದರು.
ಕನ್ನಡ ಸಾಹಿತ್ಯ ಶತಮಾನಗಳಿಂದ ವೈದಿಕ ವಿರೋಧಿ ಯಾಗಿತ್ತು.ಅದನ್ನೇ ರಾಜೇಂದ್ರ ರವರು ತಮ್ಮ ವಿಮರ್ಶೆ ಕೃತಿಯಲ್ಲಿ ಮುಂದುವರೆಸಿದ್ದಾರೆ.ಇದನ್ನು ಇನ್ನು ತೀಕ್ಷ್ಣವಾಗಿ ಬರೆಯಬಹುದಿತ್ತು.ಆದರೆ ಅಪೂರ್ಣ ವಿರಾಮ ಹೆಸರಿನ ಮೂಲಕ ಇದನ್ನು ಸರಿದೂಗಿಸಿದ್ದಾರೆ.ಪಂಪ ಕರ್ಣನ ಬಗ್ಗೆ ಎತ್ತಿರುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಕೊಡಲಾಗುತ್ತಿಲ್ಲ.ಜಿ.ಎಸ್.ಎಸ್. ಅಡಿಗರು ಬೇಂದ್ರೆ ಇವರ ಬಗ್ಗೆ ಇನ್ನೂ ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕಾಗಿತ್ತು.ಆದರೆ ಪುರಾಣವನ್ನು ಅನೇಕ ಬಾರಿ ಪ್ರಶ್ನೆ ಮಾಡಿದ್ದಾರೆ.ಕರ್ಣ ಪಂಪ ಬಸವಣ್ಣ ಕನಕದಾಸ ಎತ್ತಿದ ಪ್ರಶ್ನೆ ಪುನಃ ಎತ್ತಿ ಹಿರಿಯ ಕವಿಗಳ ದಾರಿಯಲ್ಲಿ ಸಾಗಿದ್ದಾರೆ.ಎಂದರು.
ಪತ್ರಕರ್ತ ಡಾ.ರಾಘವೇಂದ್ರ ಕೆ.ತೊಗರ್ಸಿ ಮಾತನಾಡಿ ರಾಜೇಂದ್ರ ರವರ ಬರವಣಿಗೆಯಲ್ಲಿ ಅಂಬೇಡ್ಕರ್ ಪ್ರಭಾವವಿದೆ.ಇಂದು ಪುಸ್ತಕದ ವಿಮರ್ಶೆ ಮಾಡುವವರು ಲೇಖನವನ್ನು ಬರೆಯುವಾಗ ಕೃತಿಯನ್ನು ಹೊಗಳಲೇ ಬೇಕೆಂಬ ಅಲಿಖಿತ ನಿಯಮವನ್ನು ಹೇರಿದೆ.ಇದು ತಪ್ಪು.ಆದರೆ ರಾಜೇಂದ್ರ ಇಂತಹ ತಪ್ಪನ್ನು ಮಾಡಿಲ್ಲ ರಾಜೇಂದ್ರ ರವರು ಪುರುಷನಿಗಿಲ್ಲದ ಶೀಲ ಸ್ತ್ರೀಗೆ ಯಾಕೇ ಎಂದು ನ್ಯಾಯವಾಗಿ ಪ್ರಶ್ನಿಸಿದ್ದಾರೆ.
ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಎನ್ ಎ ಎಂ ಇಸ್ಮಾಯಿಲ್ ಅವರು ಅಪೂರ್ಣ ವಿರಾಮ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ ನಾನು ಕನ್ನಡ ಕಲಿಯಬಾರದ ಎಂದು ನಾನು ನಮ್ಮ ಮೇಷ್ಟ್ರು ಗಳಿಗೆ ಕೇಳಿದ್ದೆ..ಏಕೆಂದರೆ ನಮ್ಮ ಕಾಲೇಜಿನ ಮೇಸ್ಟ್ರುಗಳು ನನ್ನ ಹೆಸರು ಕೇಳಿ ನೀನು ಹಿಂದಿ ಓದುತ್ತಿದ್ದಿಯ ಎಂದು ತಿಳಿದಿದ್ದೆ ಎಂದಾಗ ಈ ಮಾತು ಹೇಳಿದ್ದೆ ಆಗ ವಿಚಲಿತರಾದ ನನ್ನ ಮೇಸ್ಟ್ರು ನನ್ನ ಸಮಾಧಾನ ಪಡಿಸಿದ್ದರು.ಏಕೆಂದರೆ ಇಂದು ಹಳೆಗನ್ನಡ ಸಂಸ್ಕೃತ ನಾವು ಓದುವುದಲ್ಲ ಎಂದು ಕೊಂಡಿದ್ದಾರೆ.ರಾಜೇಂದ್ರರವರು ವಿಮರ್ಶೆ ಪುಸ್ತಕಕ್ಕೆ ಬಹುಶಃ ಈ ಕಾರಣಕ್ಕೆ ಅಪೂರ್ಣ ವಿರಾಮ ಎಂಬ ಹೆಸರು ಇಟ್ಟಿದ್ದಾರೆ.ಏಕೆಂದರೆ ವಿಮರ್ಶೆ ಅರ್ಥೈಸಿಕೊಳ್ಳುವುದು ಬಹು ಕಷ್ಟ ಎಂದರು.ಆದರೂ ಇವರ ಪ್ರಯತ್ನ ಮೆಚ್ಚುವಂತದ್ದು ಎಂದರು.
ಕಾರಂತ ಕಥನ ಸ್ತ್ರೀ ವಾದಿ ಓದು ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ವಿಮರ್ಶಕ ಕೇಶವ ಶರ್ಮ ಅವರು ಮಾತನಾಡಿ ಕಾರಂತರು ಅನುಭವ ಜನ್ಯವಾದ ವಿಷಯ ಕುರಿತು ಬರೆಯುತ್ತಿದ್ದರು. ಅದನ್ನೇ ರಾಜೇಂದ್ರ ಮುಂದುವರಿಸಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಶಿರಾಳಕೊಪ್ಪ ಕದಂಬ ಕಾಲೇಜಿನ ಪ್ರಾಂಶುಪಾಲರಾದ ಯುವರಾಜ ಬಿ.ಹೆಚ್.ವಹಿಸಿದ್ದು ತಮ್ಮ ಅಧ್ಯಕ್ಷತೆಯ ನುಡಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲ ಡಾ.ಹೆಚ್.ಎಸ್.ನಾಗಭೂಷಣ ಮಾತನಾಡಿ ರಾಜೇಂದ್ರ ತನ್ನ ನಿಲುವುಗಳಲ್ಲಿ ಗಟ್ಟಿಯಾಗಿದ್ದು ಅತ್ಯಂತ ಮುಕ್ತವಾಗಿ ಸಿಗುವ ಲೇಖಕ ಎಂದರು.ಕೃತಿಗಳ ಲೇಖಕರಾದ ಡಾ.ಟಿ.ರಾಜೇಂದ್ರತಗಡ್ಲಿ,ಸುವ್ವಿ ಪ್ರಕಾಶನದ ಬಿ.ಎನ್.ಸುನೀಲ್ ಕುಮಾರ್ ಉಪಸ್ಥಿತರಿದ್ದು ಮಾತನಾಡಿದರು.
ಸಂಗೀತ ಶಿಕ್ಷಕ ಮಲ್ಲಿಕಾರ್ಜುನ ಜಿ.ಎಂ.ಗೀತಗಾಯನ ನಡೆಸಿಕೊಟ್ಟರು.ಶ್ರೀಮತಿ ಹಸೀನಾ ಭಾನು ಕಾರ್ಯಕ್ರಮದ ನಿರ್ವಹಣೆ ಮಾಡಿದರು.ಲೇಖಕ ಟಿ.ರಾಜೇಂದ್ರ ತಗಡ್ಲಿ ಎಲ್ಲರನ್ನೂ ವಂದಿಸಿದರು.