Posted on 27-06-2025 |
Share: Facebook | X | Whatsapp | Instagram
ಯಲಹಂಕ ನಾಡಪ್ರಭು ಕೆಂಪೇಗೌಡ
ಕರ್ನಾಟಕ ರಾಜಧಾನಿ ಬೆಂಗಳೂರನ್ನು ರೂಪಿಸಿದ ಮಹಾನ್ ವ್ಯಕ್ತಿ ನಾಡಪ್ರಭು ಕೆಂಪೇಗೌಡ ರವರು. ಇವರು 1510 ಜೂನ್ 27ರಂದು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ ಯಲಹಂಕದಲ್ಲಿ ಜನಿಸಿದರು ಇವರ ಕುಲದೇವತೆ ಕೆಂಪಮ್ಮ ಆಗಿದ್ದರಿಂದ ಮಗುವಿಗೆ ಕೆಂಪೇಗೌಡ ಎಂದೆ ಹೆಸರಿಟ್ಟರು. ಆಗ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಯಲಹಂಕ ನಾಡಪ್ರಭುಗಳು 1515ರಲ್ಲಿ ಹಂಪೆಯಲ್ಲಿ ನಡೆದ ವಿಜಯದಶಮಿ ಉತ್ಸವಕ್ಕೆ ಐದು ವರ್ಷದ ಬಾಲಕನಾದ ಕೆಂಪೇಗೌಡರನ್ನು ಕರೆದುಕೊಂಡು ಹೋಗಿದ್ದರು. ನಂತರ ಐಬುಗಂಟಿಪುರದ ಮಾಧವ ಭಟ್ಟರ ಗುರುಕುಲ ಆಶ್ರಮದಲ್ಲಿ ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿಯೇ ಅಭ್ಯಾಸ ಮಾಡಿದರು. ಮುಂದೆ ಯುವಕರಾದ ಕೆಂಪೇಗೌಡರು ವಿಜಯದಶಮಿ ಉತ್ಸವದಲ್ಲಿ ಭಾಗವಹಿಸಿ ಮಲ್ಲಯುದ್ಧ ಸ್ಪರ್ಧೆಯಲ್ಲಿ ಎದುರಾಳಿ ತಿರುಮಲ ರಾಯರನ್ನು ಸೋಲಿಸಿ ಕೃಷ್ಣದೇವರಾಯನದ ಮೆಚ್ಚುಗೆಯನ್ನು ಕೂಡ ಗಳಿಸುತ್ತಾರೆ. ಇವರ ಸಾಹಸವನ್ನು ಕಂಡು ಇವರ ತಂದೆ ಕೆಂಪನಂಜೇಗೌಡರು 1528 ರಲ್ಲಿ ಕೆಂಪೇಗೌಡರಿಗೆ ಅವರ ಸೋದರ ಮಾವನ ಮಗಳಾದ ಚಿನ್ನಾಂಬಿಯವರೊಂದಿಗೆ ಮದುವೆ ಮಾಡುತ್ತಾರೆ ಹಾಗೂ ಇದೇ ಸಂದರ್ಭದಲ್ಲಿ ಯುವರಾಜ ಪಟ್ಟಾಭಿಷೇಕವನ್ನು ಇವರಿಗೆ ಮಾಡಲಾಗುತ್ತದೆ ಈ ಸಂದರ್ಭದಲ್ಲಿ ವಿಜಯನಗರದ ಸಾಮಂತರಾಜುಗಳಾದ ಕೆಳದಿ ಚಿತ್ರದುರ್ಗ ಶಿರಾ ಚನ್ನಪಟ್ಟಣ ಮುಂತಾದ ಸಂಸ್ಥಾನದ ಪಾಳೆಗಾರರು ಭಾಗವಹಿಸಿ ಇವರನ್ನು ಶುಭ ಕೋರುತ್ತಾರೆ.
1531ರಲ್ಲಿ ಕೆಂಪನಂಜೇಗೌಡರು ಮಗನಿಗೆ ನಾಡಪ್ರಭುವಾಗಿ ಅಧಿಕಾರ ಕೊಡುತ್ತಾರೆ. ಯಲಹಂಕದ ಸುತ್ತಲೂ ಶತ್ರುಗಳ ಭಯವಿದ್ದರಿಂದ ಒಂದು ದೊಡ್ಡ ರಾಜ್ಯವನ್ನು ನಿರ್ಮಿಸಬೇಕೆಂದು ಯೋಚಿಸಿದ ಕೆಂಪೇಗೌಡರು ಪ್ರಬಲವಾದ ರಾಜಧಾನಿಯನ್ನು ಕಟ್ಟಬೇಕೆಂದು ಹೊಸದಾದ ಸ್ಥಳವನ್ನು ಆಯ್ಕೆ ಮಾಡಲು ತಮ್ಮ ಮಂತ್ರಿಗಳಿಗೆ ಸೂಚಿಸುತ್ತಾರೆ. ಕೊನೆಗೆ ಬೆಂಗಳೂರು ಭಾಗವನ್ನು ಆಯ್ಕೆ ಮಾಡಿಕೊಂಡು ವಿಜಯನಗರದ ಅರಸರಾದ ಅತ್ಯುತರಾಯದ ಅನುಮತಿಯನ್ನು ಪಡೆದು ರಾಜಧಾನಿಯ ನಿರ್ಮಾಣಕ್ಕಾಗಿ ಧನಸಂಗ್ರಹಕ್ಕೆ ತೊಡಗುತ್ತಾರೆ 1532 ರಲ್ಲಿ ಅಚ್ಚುತರಾಯರು ಇವರ ಪರಾಕ್ರಮವನ್ನು ಕಂಡು ಯಲಹಂಕವಲ್ಲದೆ ಹಳೆಯ ಬೆಂಗಳೂರು ವರ್ತೂರು ಬೇಗೂರು ಹಲಸೂರು ಕೆಂಗೇರಿ ತಲಘಟ್ಟಪುರ ಜಿಗಣಿ ಕುಂಬಳಗೋಡು ಬಾಣಾವರ ಮತ್ತು ಹೆಸರುಗಟ್ಟ ಹೋಬಳಿಯನ್ನು ಇವರಿಗೆ ಬಿಟ್ಟುಕೊಟ್ಟು ಅಮರನಾಯಕ ರಾಗಿ ನೇಮಕ ಮಾಡುತ್ತಾರೆ ಈ ಪ್ರದೇಶದಿಂದ ಬಂದ ಆದಾಯದಲ್ಲಿ ಸ್ವಲ್ಪ ಮಾತ್ರ ತಾವು ಇಟ್ಟುಕೊಂಡು ಉಳಿದ ಹಣವನ್ನು ವಿಜಯನಗರ ಸಾಮ್ರಾಜ್ಯಕ್ಕೆ ಕಟ್ಟ ಬೇಕಾಗಿತ್ತು ನಂತರ ಒಂದು ನಿರ್ದಿಷ್ಟವಾದ ರಾಜಧಾನಿಯಲ್ಲಿ ಏನೇನು ಇರಬೇಕು ಎಂದು ಯೋಚಿಸಿದ ಇವರು ಕೋಟೆ ಪೇಟೆ ಗುಡಿ ಕೆರೆಗಳು ಉದ್ಯಾನವನ ಎಲ್ಲವೂ ಇರುವ ಒಂದು ನೀಲನಕ್ಷೆಯನ್ನು ತಯಾರಿಸಲು ಹೇಳಿ ಅಮಾತ್ಯರಾದ ಗಿಡ್ಡೇಗೌಡರಿಗೆ ಸೂಚನೆ ಕೊಟ್ಟು ಕೊನೆಗೆ ದೇವಿ ಕೆಂಪಾಂಬೆಗೆ ನಮಿಸಿ ತಾಯಿ ಲಿಂಗಾಂಬೆ ಹಾಗೂ ಪತ್ನಿ ಚಿನ್ನಮಾಂಬೆ ಗಳ ಜೊತೆ ಚರ್ಚಿಸಿ 1237ರಲ್ಲಿ ನಾಡಿನ ಪ್ರಮುಖರ ಸಮ್ಮುಖದಲ್ಲಿ ಗುದ್ದಲಿ ಪೂಜೆಯನ್ನು ಪ್ರಾರಂಭಿಸಲು ಯೋಚನೆ ಮಾಡುತ್ತಾರೆ. ಅರ್ಚಕರು ತೋರಿಸಿದ ಸ್ಥಳದಲ್ಲಿ ಪೂಜೆಯನ್ನು ಕೈಗೊಂಡ ಇವರು ನಾಲ್ಕು ನೇಗಿಲಿಗೆ ಎತ್ತುಗಳನ್ನು ಕಟ್ಟಿ ಇಂದಿನ ದೊಡ್ಡಪೇಟೆ ಮತ್ತು ಚಿಕ್ಕಪೇಟೆ ರಸ್ತೆಗಳು ಸಂಧಿಸುವ ಪ್ರದೇಶದಲ್ಲಿ ಪೂಜೆ ಕೈಗೊಂಡು ನಾಲ್ಕು ಎತ್ತುಗಳನ್ನು ಅದರ ಇಷ್ಟ ಬಂದ ಕಡೆ ಅದು ಚಲಿಸುವಂತೆ ಸೂಚಿಸುತ್ತಾರೆ ಆ ಎತ್ತುಗಳು ಎಲ್ಲಿ ನೀಡುತ್ತವೆಯೋ ಅಲ್ಲಿಯವರೆಗೆ ರಾಜಧಾನಿಯ ಎಲ್ಲೆಯನ್ನು ಗುರುತಿಸಬೇಕೆಂದು ತೀರ್ಮಾನಿಸಿ ಅಲ್ಲಿ ದ್ವಾರಗಳನ್ನು ಕಟ್ಟುತ್ತಾರೆ ಹಾಗಾಗಿ ಪೂರ್ವಕ್ಕೆ ಹಲಸೂರು ದ್ವಾರ ಪಶ್ಚಿಮಕ್ಕೆ ಸೊಂಡೆಕೊಪ್ಪದ ದ್ವಾರ ಉತ್ತರಕ್ಕೆ ಯಲಹಂಕದ ದ್ವಾರ ದಕ್ಷಿಣಕ್ಕೆ ಆನೇಕಲ್ ದ್ವಾರಗಳನ್ನು ನಿರ್ಮಿಸುತ್ತಾರೆ ಏಕೆಂದರೆ ಎತ್ತುಗಳು ಆಯಾ ಸ್ಥಳದಲ್ಲಿ ಬಂದು ನಿಂತಿದ್ದವು ಕೋಟೆಯ ಹೆಬ್ಬಾಗಿಲನ್ನು ಈಗಿನ ವಿಕ್ಟೋರಿಯಾ ರಾಣಿಯ ಆಸ್ಪತ್ರೆಯ ಬಳಿ ನಿರ್ಮಿಸಲಾಗುತ್ತದೆ ರಾಜಧಾನಿಗೆ ನವ ದ್ವಾರಗಳಿರಬೇಕು ಜೊತೆಗೆ ನವ ದೇವಸ್ಥಾನಗಳು ಇರಬೇಕು ನವ ಕೆರೆಗಳು ಇರಬೇಕು ಎಂದು ಕೋಟೆಗೆ ನಾಲ್ಕು ಮಹದ್ವಾರಗಳನ್ನು 5 ಕಿರಿದ್ವಾರಗಳನ್ನು ನಿರ್ಮಿಸಲಾಯಿತು.ಐದು ಕಿರಿದ್ವಾರಗಳೆಂದರೆ ವರ್ತೂರು ಬಾಗಿಲು ಕೆಂಗೇರಿ ಬಾಗಿಲು ಕನಕಪುರ ಬಾಗಿಲು ಸರ್ಜಾಪುರದ ಬಾಗಿಲು ಮತ್ತು ಯಶವಂತಪುರದ ಬಾಗಿಲನ್ನು ನಿರ್ಮಾಣ ಮಾಡಲಾಗುತ್ತದೆ. ಕೆಂಪೇಗೌಡರ ಕಾರ್ಯವನ್ನು ಕಂಡು ಮೆಚ್ಚಿದ ವಿಜಯನಗರದ ಅತ್ಯುತರಾಯರು ಅವರು ಕೊಟ್ಟ ಅಮರನಾಯಕತ್ವದ ಹಳ್ಳಿಯಿಂದ ಬಂದ ಸಂಪೂರ್ಣ ಹಣವನ್ನು ರಾಜಧಾನಿಯ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸುತ್ತಾರೆ ಹೀಗಾಗಿ ಕೆಂಪೇಗೌಡರು ಅತ್ಯಂತ ಪ್ರಮುಖ ನಗರವನ್ನು ನಿರ್ಮಾಣ ಮಾಡುತ್ತಾರೆ.
ಇದೇ ಸಮಯದಲ್ಲಿ ಒಂದು ದುರ್ಘಟನೆ ನಡೆಯುತ್ತದೆ ಅದೇನೆಂದರೆ ಕೆಂಪೇಗೌಡರು ಕೋಟೆಯ ದಕ್ಷಿಣದ ಬಾಗಿಲನ್ನು ನಿಲ್ಲಿಸಲು ದೊಡ್ಡದಾದ ಕಲ್ಲನ್ನು ಇಟ್ಟಿರುತ್ತಾರೆ ಆದರೆ ಮಾನದಿನ ಬರುವಾಗ ಕಲ್ಲು ಬಿದ್ದಿರುತ್ತದೆ ಹೀಗೆ ಹಲವಾರು ಬಾರಿ ಆದಾಗ ಜ್ಯೋತಿಷ್ಯರನ್ನು ಕೇಳಿದರೆ ಹೆಣ್ಣು ಮಕ್ಕಳೊಬ್ಬಳನ್ನು ಬಲಿ ನೀಡಬೇಕು ಎಂದು ತಿಳಿಯುತ್ತದೆ ಕೆಂಪೇಗೌಡರು ಅದು ಸಾಧ್ಯವಿಲ್ಲವೆಂದು ಸುಮ್ಮನಿರುತ್ತಾರೆ. ಇದರಿಂದ ಕೋಟೆ ಪೂರ್ಣವಾಗುವುದಿಲ್ಲ ಎಂದು ತಿಳಿದ ಅವರ ಮಗ ಸೋಮಣ್ಣಗೌಡರ ಹೆಂಡತಿ ಲಕ್ಷ್ಮೀದೇವಿ ಯಾರಿಗೂ ತಿಳಿಯದಂತೆ ಮಾವನವರ ಕೋಟೆ ಭದ್ರವಾಗಬೇಕು ಎಂದು ತಿಳಿದು ಕುಡುಗೋಲನ್ನು ತಾನೇ ತೆಗೆದುಕೊಂಡು ಹೋಗಿ ದಕ್ಷಿಣದ ಕೋಟೆಯ ಬಾಗಿಲ ಬಳಿ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡು ಸಾವನ್ನಪ್ಪುತ್ತಾಳೆ ಕಾಕತಾಳಿ ಎಂಬಂತೆ ಕೋಟೆಯ ಬಾಗಿಲು ಭದ್ರವಾಗಿ ನಿಲ್ಲುತ್ತದೆ. ಇದರಿಂದ ಮನನೊಂದ ಕೆಂಪೇಗೌಡರು ಸೊಸೆಯ ತಾಯಿ ಮನೆ, ಕೋರಮಂಗಲದ ಬಳಿ ಅವಳ ನೆನಪಿಗಾಗಿ ಲಕ್ಷ್ಮಮ್ಮನವರ ದೇವಾಲಯ ಒಂದನ್ನು ಕಟ್ಟಿ ಸ್ಮಾರಕ ಸ್ಥಳವನ್ನು ನಿರ್ಮಾಣ ಮಾಡುತ್ತಾರೆ.
ಬೆಂಗಳೂರು ಕೋಟೆ ನಿರ್ಮಾಣವಾದ ಮೇಲೆ ಅದರ ಒಳಭಾಗದಲ್ಲಿ 64 ಪೇಟೆಗಳನ್ನು ನಿರ್ಮಾಣ ಮಾಡಿದ್ದು ಇಂದು 54 ಪೇಟೆಗಳ ಹೆಸರುಗಳು ಮಾತ್ರ ಇತಿಹಾಸಕಾರರಿಗೆ ಲಭ್ಯವಾಗಿದೆ ಆಪೇಟೆಗಳಲ್ಲಿ ವೃತ್ತಿ ಆಧಾರಿತ ಪೇಟೆಗಳು ಜಾತಿ ಆಧಾರಿತ ಪೇಟೆಗಳು ವ್ಯಕ್ತಿ ಆಧಾರಿತ ಪೇಟೆಗಳು ಎಂದು ಭಾಗ ಮಾಡಬಹುದಾಗಿದೆ.
ಹರಳೆಪೇಟೆ ಅಕ್ಕಿಪೇಟೆ, ಕುಂಬಾರಪೇಟೆ ರಾಗಿಪೇಟೆ ಗಾಣಿಗರ ಪೇಟೆ ಮಡಿವಾಳಪೇಟೆ, ಗೊಲ್ಲರಪೇಟೆ, ಹೂವಾಡಿಗರ ಪೇಟೆ ಮಂಡಿಪೇಟೆ, ಅಂಚೆಪೇಟೆ, ಬಳೆಪೇಟೆ ತರಗುಪೇಟೆ, ಸುಣ್ಣಕಲ್ ಪೇಟೆ ಮೇದಾರಪೇಟೆ ಕುರುಬರಪೇಟೆ ಮುತ್ಯಾಲಪೇಟ್, ಕುಂಚುಟಿಗರ ಪೇಟೆ ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ ಕಲ್ಲಾರಪೇಟೆ, ತಿಗಳರ ಪೇಟೆ ಮಾಮೂಲ್ ಪೇಟೆ ನಗರ ಪೇಟೆ ಸುಲ್ತಾನ್ ಪೇಟೆ ಮನವರ್ತ ಪೇಟೆ ಕಬ್ಬನ್ ಪೇಟೆ, ಬಿನ್ನಿಪೇಟೆ ಮುಂತಾದವು.
ಇಂದು ಬೆಂಗಳೂರು ನಗರ ಇಷ್ಟೊಂದು ಸಮೃದ್ಧಿಯಾಗಿ ಬೆಳೆದಿದ್ದರೂ ಕೂಡ ನೀರಿನ ಸಮಸ್ಯೆ ನಗರವನ್ನು ಸಾಕಷ್ಟು ಕಾಡುತ್ತಿದೆ ಮತ್ತು ಮಳೆ ಬಂದಾಗ ಸಂಪೂರ್ಣ ನಗರವೇ ದೊಡ್ಡ ಚರಂಡಿಯಾಗಿ ಹರಿಯುತ್ತದೆ ಇದಕ್ಕೆ ಮುಖ್ಯ ಕಾರಣ ಕೆಂಪೇಗೌಡ ಕಟ್ಟಿಸಿದ ಕೆರೆಗಳನ್ನು ಮುಚ್ಚಿರುವುದು ನಮಗೆ ಕಾಣುವಂತೆ ಕೆಂಪೇಗೌಡ ಕಟ್ಟಿಸಿದ 9 ಕೆರೆಗಳು ಎಂದು ಹೇಳ ಹೆಸರಳಿದಂತಾಗಿದೆ
ಕೆಂಪಂಬುದಿಕೆರೆ ಸಂಪಂಗಿರಾಮಕೆರೆ ಧರ್ಮಾಂಬುದಿಕೆರೆ ಚೆನ್ನಮ್ಮನಕೆರೆ ಕಾರಂಜಿ ಕೆರೆ ಹಲಸೂರು ಕೆರೆ ಕೆಂಪಾಪುರ ಅಗ್ರಹಾರ ಕೆರೆ ಸಿದ್ದಿಕಟ್ಟೆ ಕೆರೆ ಗಿಡ್ಡಪ್ಪನಕೆರೆ ಮುಂತಾದವು ಕೆಲವು ಪೂರ್ತಿಯಾಗಿ ಕೆಲವು ಅರ್ಧ ಮುಚ್ಚಿ ಹೋಗಿದೆ ಕೃಷಿಕರ ಉಪಯೋಗಕ್ಕಾಗಿ ಕಲ್ಯಾಣಿಗಳನ್ನು ರಸ್ತೆ ಬದಿ ಗಿಡಮರಗಳನ್ನು ಉದ್ಯಾನವನಗಳನ್ನು ನಿರ್ಮಿಸಿದ ಕೆಂಪೇಗೌಡರು ಅತ್ಯಂತ ವೈಜ್ಞಾನಿಕವಾಗಿ ಸುಂಕವನ್ನು ನಿಗದಿ ಮಾಡಿದ್ದರು
ದೇವಾಲಯದ ನಿರ್ಮಾಣಕ್ಕಾಗಿ ವಿಶೇಷ ಆಸಕ್ತಿ ವಹಿಸಿದ ಇವರು ದೊಡ್ಡ ಬಸವನಗುಡಿ ಆಂಜನೇಯನ ಗುಡಿ ಗಣಪತಿ ದೇವಾಲಯ ಗವಿ ಗಂಗಾಧರೇಶ್ವರ ಗುಹಾಂತರ ದೇವಾಲಯ ಹಲಸೂರಿನ ಸೋಮೇಶ್ವರ ದೇವಾಲಯ ನಗರ ದೇವತೆ ಅಣ್ಣಮ್ಮ ದೇವಾಲಯ ಶಿವಗಂಗಾ ದೇವಾಲಯ ನಿರ್ಮಾಣ ಮಾಡಿದ್ದಲ್ಲದೆ ಕೋಟೆಯ ಒಳಗೆ ವಿನಾಯಕ ಆಂಜನೇಯ ಬಸವಣ್ಣ ಚೆಲುವರಾಯಸ್ವಾಮಿ ಗುಡಿಗಳನ್ನು ಕಟ್ಟಿದ್ದರು.
ಕೋಟಿ ನಿರ್ಮಾಣದಲ್ಲಿ ಹೆಸರಾದ ಕೆಂಪೇಗೌಡರು ಬೆಂಗಳೂರಿನ ಕೋಟೆ ಸಾವಣ ದುರ್ಗ ಕೋಟೆ ಹುಲಿಯೂರು ದುರ್ಗಕೋಟೆ ರಾಮದುರ್ಗ ಕೋಟೆ ಮಾಗಡಿಕೋಟೆ ಹುತ್ತರಿ ದುರ್ಗದ ಕೋಟೆ ಕುದುರಿನ ಭೈರವನ ದುರ್ಗದ ಕೋಟೆ ನಿರ್ಮಾಣ ಮಾಡಿದರು.
ಕೆಂಪೇಗೌಡರ ಉತ್ತಮ ಆಡಳಿತದ ಫಲವಾಗಿ ಬೆಂಗಳೂರು ನಗರ ಸಾಕಷ್ಟು ಪ್ರಬಲವಾಗಿ ಬೆಳೆಯಿತು. ಆದರೆ ಇತರೆ ಸಾಮಂತರಗಳು ವಿಜಯನಗರದ ಅರಸರಿಗೆ ದೂರು ಕೊಟ್ಟಿದ್ದರಿಂದ ಆಗಿನ ಅರಸ ಸದಾಶಿವರಾಯನು ಕುತಂತ್ರಿಗಳಾದ ಸಾಮಂತರ ಮಾತುಗಳನ್ನು ಕೇಳಿ ಗೌಡರನ್ನು ಆಮಂತ್ರಿಸಿ ಅವರನ್ನು ಸೆರೆಹಿಡಿದು ಆನೆಗೊಂದಿಯ ಕೋಟೆಯಲ್ಲಿ ಸೆರೆಮನೆಯಲ್ಲಿ ಇಟ್ಟನು ಐದು ವರ್ಷಗಳ ಕಾಲ ಬಂದಿಯಾದ ಗೌಡರು ನಂತರ ಬಿಡುಗಡೆಯಾದರೂ ಇದೇ ಸಮಯದಲ್ಲಿ 1565ರ ತಾಳಿಕೋಟೆ ಕನ್ನಡ ದಲ್ಲಿ ಗೌರರು 2000 ಸೈನಿಕರನ್ನು ಕರೆದುಕೊಂಡು ವಿಜಯನಗರದ ಪರವಾಗಿ ಯುದ್ಧ ಮಾಡಿದರು ಆದರೆ ಇವರ ಹೋರಾಟ ವಿಫಲವಾಗಿ ವಿಜಯನಗರ ಸಾಮ್ರಾಜ್ಯ ನಾಶವಾಯಿತು
ಅಲ್ಲಿಂದ ಮುಂದೆ ವಿಜಯನಗರದ ಸಾಮಂತರಗಳಲ್ಲಿ ಪರಸ್ಪರ ಯುದ್ಧವಾಗಲು ಪ್ರಾರಂಭಿಸಿ ಮುಂದೆ ಮಾಗಡಿ ಸಮೀಪ ಕೆಂಪಾಪುರ ಎಂಬಲ್ಲಿ ನಡೆದ ಯುದ್ಧದಲ್ಲಿ ಕೆಂಪೇಗೌಡರು 1569ರಲ್ಲಿ ನಿಧನರಾದರು ಇವರು ನಿಧನವಾದ ಸ್ಥಳದಲ್ಲಿ ಇವರ ಮಗ ಇಮ್ಮಡಿ ಕೆಂಪೇಗೌಡ ವೀರ ಸಮಾಧಿಯನ್ನು ನಿರ್ಮಿಸಿ ಬಸವಣ್ಣನ ದೇವಾಲಯವನ್ನು ಕಟ್ಟುತ್ತಾನೆ.
ಒಟ್ಟು 38 ವರ್ಷಗಳ ಕಾಲ ಅಧಿಕಾರವನ್ನು ನಡೆಸಿದ ಕೆಂಪೇಗೌಡರು ಆಡಳಿತದಲ್ಲಿ ಅತ್ಯಂತ ಹೆಸರುವಾಸಿಯಾದ ವ್ಯಕ್ತಿಯಾಗಿದ್ದು ಇಂದಿಗೂ ಕರ್ನಾಟಕ ಅವರಿಗೆ ಋಣಿಯಾಗಿದೆ. ಇವರು ವೊದ್ದೊಳಗವನ್ನು ಚಾವಡಿ ಎಂದು ಕರೆದು ಒಂದು ಚಾವಡಿಗೆ ಒಬ್ಬ ಸುಬೇದಾರ ಇಬ್ಬರು ಶ್ರೇಷ್ಟದಾರರು ನಾಲ್ಕು ಜನ ರಾಯಚೂರು ಒಬ್ಬ ಹಸ್ತಾಂತರ ಪಾದಪತ್ತೆಗಾರ ಕಾವಲುಗಾರ ಉಳಿದವರು ಹೇಳುತ್ತಿದ್ದರು.
ರಾಜ್ಯದ ಆಡಳಿತದಲ್ಲಿ ಒಂಬತ್ತು ಭಾಗವಿದ್ದು ಒಂದನೇ ಭಾಗ ಭೂಮಿಯನ್ನು ನೋಡಿಕೊಳ್ಳುತ್ತಿತ್ತು ಎರಡನೇ ಭಾಗ ಅರಮನೆಗೆ ಸೇರಿದ ಕೆಲಸ ಕಾರ್ಯವನ್ನು ಮಾಡುತ್ತಿತ್ತು ಮೂರನೆಯ ಭಾಗ ಅರಮನೆಗೆ ಬರಬೇಕಾದ ವಸೂಲಿಯ ಕಡೆ ಗಮನ ಕೊಡುತ್ತಿತ್ತು. ಬೊಕ್ಕಸದ ಚಾವಣಿಗೆ ಒಬ್ಬ ಗುರಿಕಾರ ಅಷ್ಟಾಂತರಿ ಗೊಲ್ಲ ಬೀಗಮುದ್ರಿ ಮತ್ತು ಕಾವಲುಗಾರ ಇರುತ್ತಿದ್ದರು ಅರಮನೆಯ ಚಾವಡಿಯಲ್ಲಿ ಒಬ್ಬ ಗುರಿಕಾರ ಇಬ್ಬರು ಶಾನುಭೋಗರು 10 ಜನ ಓಲೆಕಾರರು ಒಬ್ಬ ದಫೇದಾರ ಒಬ್ಬ ಹೋಬಳಿ ದರ ಒಬ್ಬ ಸೇರೆಗಾರ ಒಬ್ಬ ಗುರಿಕಾರ ಇರುತ್ತಿದ್ದರು. ಆ ಕಾಲದಲ್ಲಿ ಕೆಂಪೇಗೌಡರು ಶಾಂತಿಕಾರರ ಶೈನಪಡೆ ಎಂಬ ರಿಸರ್ವ್ ಸೇನೆ ಪಡೆಯನ್ನು ಹೊಂದಿದ್ದರು. ಸುಂಕದ ಚಾವಡಿಯಲ್ಲಿ ಮನೆ ಕಾರರು ಶಾನುಭಾಗಲು ಇರುತ್ತಿದ್ದರು ಎಲ್ಲಾ ಚಾವಡಿಗಳ ಮೇಲ್ವಿಚಾರಣೆಯನ್ನು ದಳವಾಯಿ ಸಂಪ್ರತಿ ರೈಸ್ದವರು ಹೊಂದಿರುತ್ತಿದ್ದರು ಒಟ್ಟಿನಲ್ಲಿ ಸೂರ್ಯವಸ್ತುತವಾದ ಆಡಳಿತ ಪದ್ಧತಿ ಇತ್ತು.ಇವರು ನಂತರ ಇಮ್ಮಡಿ ಕೆಂಪೇಗೌಡ 55 ವರ್ಷಗಳವರೆಗೆ ಮೂರನೆಯ ಕೆಂಪೇಗೌಡ 20 ವರ್ಷದವರೆಗೆ ರಾಜ್ಯಭಾರ ಮಾಡಿದರು ಆದರೆ ಮೈಸೂರಿನ ದೊರೆಯಾದ ದೊಡ್ಡ ಕೃಷ್ಣರಾಜ ಒಡೆಯರು ದಳವಾಯಿ ದೇವರಾಜಯ್ಯನ ನಾಯಕತ್ವದಲ್ಲಿ ಸೈನ್ಯವನ್ನು ಕಳುಹಿಸಿ ದೊಡ್ಡ ಹೋರಾಟವನ್ನು ಮಾಡಿದರು ಈ ಹೋರಾಟದಲ್ಲಿ ಮೂರನೇ ಕೆಂಪೇಗೌಡ ಸೆರೆಸಿಕ್ಕನು ಆತನನ್ನು ಶ್ರೀರಂಗಪಟ್ಟಣ ಕೋಟೆಗೆ ಕಳುಹಿಸಿ ಬೆಂಗಳೂರು ಮತ್ತು ಯಲಹಂಕ ಮಾಗಡಿಯನ್ನು ಮೈಸೂರು ರಾಜ್ಯಕ್ಕೆ ಸೇರಿಸಿಕೊಳ್ಳಲಾಯಿತು ಹೀಗಾಗಿ 1678 ರಲ್ಲಿ ಯಲಹಂಕ ನಾಡಪ್ರಭುವಿನ ಆಳ್ವಿಕೆ ಕೊನೆಗೊಂಡಿತು.