ಬೆಳೆ ಬೆಳೆಯುತ್ತಿರುವ ರೈತರ ಭೂಮಿ ಬಿಟ್ಟು ಮುಚ್ಚಿರುವ ಕೈಗಾರಿಕೆ ಭೂಮಿಯನ್ನು ವಶಪಡಿಸಿಕೊಳ್ಳಿ ಕೆ.ಎಲ್.ರಾವ್

Social Program struggle

Posted on 27-06-2025 |

Share: Facebook | X | Whatsapp | Instagram


ಬೆಳೆ ಬೆಳೆಯುತ್ತಿರುವ ರೈತರ ಭೂಮಿ ಬಿಟ್ಟು ಮುಚ್ಚಿರುವ ಕೈಗಾರಿಕೆ ಭೂಮಿಯನ್ನು ವಶಪಡಿಸಿಕೊಳ್ಳಿ ಕೆ.ಎಲ್.ರಾವ್

ಬೆಳೆ ಬೆಳೆಯುತ್ತಿರುವ ರೈತರ ಭೂಮಿ ಬಿಟ್ಟು ಮುಚ್ಚಿರುವ ಕೈಗಾರಿಕೆ ಭೂಮಿಯನ್ನು ವಶಪಡಿಸಿಕೊಳ್ಳಿ ಕೆ.ಎಲ್.ರಾವ್


ಶಿವಮೊಗ್ಗ ಜೂನ್ 27  ಕರ್ನಾಟಕ ರಾಜ್ಯ ಸರ್ಕಾರವು ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣದಲ್ಲಿ ರೈತರ ಭೂಮಿಯನ್ನು ಬಲವಂತವಾಗಿ ಭೂಸ್ವಾಧೀನ ಮಾಡಿಸಿಕೊಳ್ಳುವ ಹುನ್ನಾರವನ್ನು ನಡೆಸುತ್ತಿದೆ. 

ಈ ಬಗ್ಗೆ ಪ್ರತಿಭಟಿಸಿದ ರೈತರನ್ನು ಕಾರ್ಮಿಕರನ್ನು ಸರ್ಕಾರ ಬಂಧಿಸಿ ರೈತ ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡುತ್ತಿದೆ. 

ಆಡಳಿತ ನಡೆಸುವ ಪಕ್ಷ ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ ಅವೆರಡು ಕೂಡ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ 

ಅವರ ಮೂಲ ಉದ್ದೇಶ ಬಂಡವಾಳ ಶಾಹಿಗಳ ಪರವಾಗಿದ್ದು ಕೂಲಿ ಕಾರ್ಮಿಕರ ರೈತರ ಹಿತವನ್ನು ಕಡೆಗಣಿಸುವುದೇ ಆಗಿದೆ. ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲು ಭೂಮಿ ಅವಶ್ಯಕತೆಯಿದೆ‌ ಎಂದಾದಲ್ಲಿ ಈ ಹಿಂದೆ ಸರ್ಕಾರಗಳು ಕೈಗಾರಿಕೆಯ ಸ್ಥಾಪನೆಗಾಗಿ ಕೇವಲ ನೆಪ ಮಾತ್ರಕ್ಕೆ ಹಣವನ್ನು ಪಡೆದುಕೊಂಡು ಸಾವಿರಾರು ಎಕರೆ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಿದೆ. 

ಕೆಲವೇ ಕೈಗಾರಿಕೆಗಳನ್ನು ಹೊರತುಪಡಿಸಿ ಉಳಿದ ಭೂಮಿಯಲ್ಲಿ ಕೈಗಾರಿಕೆಗಳು ಇದುವರೆಗೆ ಸ್ಥಾಪನೆಯಾಗಿಲ್ಲ ಮತ್ತು ಕೈಗಾರಿಕೆ ಪಡೆದ ಸಾಕಷ್ಟು ಜಾಗವನ್ನು ರಿಯಲ್ ಎಸ್ಟೇಟ್ ದಂದೆಗೆ ಇವರು ಉಪಯೋಗಿಸಿಕೊಂಡಿದ್ದಾರೆ. ಸರ್ಕಾರ ಇಂತಹ ಭೂಮಿಯನ್ನು ಹುಡುಕಿ ಅದರಲ್ಲಿ ನಿಬಂಧನೆ ಅನುಸಾರ ಇದುವರೆಗೆ ಕೈಗಾರಿಕೆಯನ್ನು ಸ್ಥಾಪನೆ ಮಾಡಿಲ್ಲ ಮತ್ತು ಸರ್ಕಾರದ ಒಪ್ಪಂದದ ವಿರುದ್ಧ ನಡೆದುಕೊಂಡಿದೆ ಎಂದು ಗೊತ್ತಾದಲ್ಲಿ ಆ ಭೂಮಿಯನ್ನು ಪುನಃ ಸರ್ಕಾರ ತನ್ನ ವಶಕ್ಕೆ ಕಾನೂನು ಬದ್ಧವಾಗಿಯೇ ತೆಗೆದುಕೊಳ್ಳಬಹುದು. 

ಒಂದು ವೇಳೆ ಒಂದೇ ಕಡೆ ಭೂಮಿ ಬೇಕೆಂದರೂ ಕೂಡ ಅವರು ತೆಗೆದುಕೊಂಡ ಭೂಮಿಯನ್ನು ಇವರಿಗೆ ಬೇಕಾದ ಜಾಗದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ನೀಡಿ ಅದರ ಬದಲಾಗಿ ರೈತರ ಭೂಮಿಯನ್ನು ಪಡೆಯಬಹುದು. ಅದನ್ನು ಬಿಟ್ಟು ಏಕಾಏಕಿ ರೈತರ ಭೂಮಿಯನ್ನು ಕಸಿದುಕೊಂಡು ಅವರನ್ನು ನಿರಾಶ್ರಿತರನ್ನಾಗಿ ಮಾಡಿದರೆ ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಪುನಹ ಕ್ರಾಂತಿ ಸಂಭವಿಸಬಹುದು ಎಂದಿದ್ದಾರೆ.

ಈಗಾಗಲೇ ಸರ್ಕಾರ ಕಾರ್ಮಿಕರ ಕೆಲಸದ ಅವಧಿಯನ್ನು 7:00 ಗಂಟೆ ಯಿಂದ 12: 00ಗಂಟೆಗೆ ಹೆಚ್ಚಿಸುವುದು ಮಹಿಳೆಯರನ್ನು ರಾತ್ರಿ ಪಾಳೆಯದಲ್ಲಿ ದುಡಿಸಿಕೊಳ್ಳುವುದು ಅಪಾಯಕಾರಿ ಯಂತ್ರಗಳಲ್ಲೂ ಕೂಡ ಮಹಿಳೆಯರು ಕೆಲಸ ನಿರ್ವಹಿಸುವಂತೆ ಮಾಡುವುದು ವಿದ್ಯುತ್ ಬಳಸುವ ಮತ್ತು ಬಳಸದಿರುವ ಕಾರ್ಮಿಕರು ಎಂದು ಎರಡು ಭಾಗ ಮಾಡಿ ಕಾರ್ಮಿಕರ ವೇತನವನ್ನು ಕಡಿಮೆ ಮಾಡುವುದು ಮತ್ತು ವಿದ್ಯುತ್ ಬಳಸುವ ಕಾರ್ಮಿಕರ ಸಂಖ್ಯೆ ಹತ್ತರಿಂದ ಇಪ್ಪತ್ತಕ್ಕೆ ಬಳಸದಿರುವ ಕಾರ್ಮಿಕರ ಸಂಖ್ಯೆ 20 ರಿಂದ 40 ಕ್ಕೆ ಏರಿಸುವ ಉದ್ದೇಶ ಹೊಂದಿದ್ದು, ಕೈಗಾರಿಕೆಯನ್ನು ಮುಚ್ಚುವ ಉದ್ದೇಶದಿಂದ ಕನಿಷ್ಠ 100 ಕಾರ್ಮಿಕರು ಇದ್ದರೆ ಅಂತ ಕೈಗಾರಿಕೆಯನ್ನು ಮುಚ್ಚಬಾರದು ಎಂಬ ನಿಯಮವನ್ನು ಬದಲಿಸಿ ಕನಿಷ್ಠ 300 ಕ್ಕೆ ಇಳಿಸುವುದು ಗುತ್ತಿಗೆ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ನ್ಯಾಯಾಲಯದಲ್ಲಿ ಕಾರ್ಮಿಕರ ಮತ್ತು ಮಾಲೀಕರ ವ್ಯಾಜ್ಯವನ್ನು ವಿಳಂಬ ಮಾಡಿಸುವುದು ಮತ್ತು ಕಾರ್ಮಿಕರ ಸಂಘಕ್ಕೆ ಮಾನ್ಯತೆ ನೀಡದೆ ಇರುವುದು ಇತ್ಯಾದಿಗಳನ್ನು ಒಳಗೊಂಡ ಹೊಸ ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸುತ್ತದೆ. 

ಸರ್ಕಾರವು ಈ ಬಗ್ಗೆ ಮಧ್ಯಪ್ರವೇಶಿಸಿ ಕಾರ್ಮಿಕರ ಮತ್ತು ರೈತರ ಕಲ್ಯಾಣಕ್ಕಾಗಿ ಯೋಜನೆ ಕೈಗೊಳ್ಳಬೇಕೆ ವಿನಹ ಶ್ರೀಮಂತರ ಮತ್ತು ಬಂಡವಾಳಶಾಹಿಗಳ ಪರವಾದ ನಿರ್ಣಯವನ್ನು ಕೈಗೊಳ್ಳಬಾರದು ಎಂದು ಕಾರ್ಮಿಕ ಸಂಘಟನೆಯ ನಾಯಕರು ಸಮುದಾಯ ಶಿವಮೊಗ್ಗದ ಮಾಜಿ ಅಧ್ಯಕ್ಷರು ಆದ ಕೆ .ಲಕ್ಷ್ಮೀನಾರಾಯಣ ರಾವ್ ಸರ್ಕಾರವನ್ನು ‌ಒತ್ತಾಯಿಸಿದ್ದಾರೆ.

Search