Posted on 26-06-2025 |
Share: Facebook | X | Whatsapp | Instagram
ಹೊಸನಗರ ತಹಶೀಲ್ದಾರ್ ವಿರುದ್ಧ ಪೊಲೀಸರಿಗೆ ದೂರು ರೈತ ಕುಟುಂಬದಿಂದ ತಹಸಿಲ್ದಾರ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ.
ಹೊಸನಗರ ಜೂನ್ 26 ಇಲ್ಲಿನ ತಹಸಿಲ್ದಾರ್ ಕಚೇರಿಯ ಮುಂದೆ ನಿನ್ನೆಯಿಂದ ನಡೆಯುತ್ತಿದ್ದ ರೈತ ಕುಟುಂಬದ ಉಪವಾಸ ಸತ್ಯಾಗ್ರಹ ಇಂದು ಕೂಡ ಮುಂದುವರೆದಿದೆ.
ಮತ್ತು ತಹಸಿಲ್ದಾರ್ ಅವರು ಏಳು ವರ್ಷದಿಂದ ಇದ್ದ ಅಡಿಕೆ ಸಸಿಗಳನ್ನು ಕಾನೂನು ಬಾಹಿರವಾಗಿ ಧ್ವಂಸಗೊಳಿಸಿದ್ದಾರೆ ಎಂದು ರೈತ ಶ್ರೀಧರ ಬಿನ್ ರಾಜಪ್ಪ ಗೌಡ ಪೊಲೀಸರಿಗೆ ದೂರು ನೀಡಿದ್ದಾರೆ.
ಸರ್ಕಾರಿ ದಾಖಲೆಯ ಪ್ರಕಾರ ಸರ್ಕಾರಿ ಭೂಮಿಯನ್ನು ಕಳೆದ ಹತ್ತು ವರ್ಷದಿಂದ ಬೇಲಿ ಹಾಕಿಕೊಂಡು ಮತ್ತು ಅದೇ ಭೂಮಿಯಲ್ಲಿ ವಾಸದ ಮನೆಯನ್ನು ಕಟ್ಟಿಕೊಂಡು ಅಲ್ಲಿಯೇ ವಾಸ ಮಾಡುತ್ತಿದ್ದ ಶ್ರೀಧರ ಬಿನ್ ರಾಜಪ್ಪ ಗೌಡ ವಸವೆ ಗ್ರಾಮ ಹುಂಚ ಹೋಬಳಿಯ ವ್ಯಕ್ತಿಗೆ ಸೇರಿದ ಐದು ಎಕರೆ ಅಡಿಕೆ ತೋಟ ಮತ್ತು ವಾಸದ ಮನೆಯನ್ನು ಹೊಸನಗರದ ತಹಸಿಲ್ದಾರ್ ರಶ್ಮಿ ಹಾಲೇಶ್ ರವರು ತೆಗೆಸಿದ್ದು ಭೂಮಿಯನ್ನು ಪಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ರೈತ ಶ್ರೀಧರ ಪೊಲೀಸರಿಗೆ ದೂರು ನೀಡಿ ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ.
ಕಳೆದ ಹತ್ತು ವರ್ಷದಿಂದ ಈ ಭೂಮಿಯನ್ನು ತನ್ನ ಸುಪರ್ದಿ ಯಲ್ಲಿ ಇಟ್ಟುಕೊಂಡು ಅಲ್ಲಿ ವಾಸದ ಮನೆಯನ್ನು
ಕಟ್ಟಿಕೊಂಡು ಮನೆಗೆ ವಿದ್ಯುತ್ ಇಲಾಖೆಯಿಂದ ಅಕ್ರಮ ಕಟ್ಟಡಕ್ಕೆ ಎಂದು ವಿದ್ಯುತ್ತನ್ನು ತೆಗೆದುಕೊಂಡು 7 ವರ್ಷದಿಂದ ಅಡಿಕೆ ಸಸಿಯನ್ನು ಬೆಳೆದಿದ್ದಾರೆ.
ಮತ್ತು ಜಿಲ್ಲಾಧಿಕಾರಿಗೆ ಅಕ್ರಮ ಭೂಮಿಯನ್ನು ಸಕ್ರಮಗೊಳಿಸಿ ಕೊಡುವಂತೆ 29-12-18ರಂದು ಅರ್ಜಿಯನ್ನು ನೋಂದಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳು 26.2 25 ರಂದು ವಿಚಾರಣೆಗೆ ಕರೆದಿದ್ದು ಅದು 7- 4 -25 ನಂತರ 5- 5 -25ಕ್ಕೆ ಮುಂದೂಡಿದ್ದು ಆ ದಿನ ಕೂಡ ಅನ್ಯ ಕಾರ್ಯ ನಿಮಿತ್ತ ಪುನಃ 16- 6- 25ಕ್ಕೆ ಕೇಸ್ನ ವಿಚಾರಣೆ ಅನ್ನು ಮುಂದೂಡಲಾಗಿದೆ.
ಆದರೆ ವಿಚಾರಣೆ ಇನ್ನು ಬಾಕಿ ಇರುವಂತೆ ತಹಸೀಲ್ದಾರ ರವರ ಆದೇಶದ ಮೇರೆಗೆ ಸರ್ಕಾರ ಮನೆ ಅಡಿಕೆ ಸಸಿಯನ್ನು ಕಡಿದು ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಚಾರಣೆ ಬಾಕಿ ಇರುವಂತೆ ಮನೆ ಮತ್ತು ಅಳಿಕೆ ಸಸಿಯನ್ನು ನಾಶಗೊಳಿಸಿದ ವಿರುದ್ಧ ಪೋಲಿಸ್ ಗೆ ದೂರ ನೀಡಿ ತಹಸಿಲ್ದಾರ್ ಕಚೇರಿಗೆ ಬಿಡುಗಡೆ ಶ್ರೀಧರ್ ಅವರ ಕುಟುಂಬ ಉಪವಾಸ ಕುಳಿತಿದೆ ರೈತ ಮುಖಂಡ ತೀನಾ ಶ್ರೀನಿವಾಸ್ ರವರು ದಿನಾಂಕ 24ರಂದು ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡಿ ದಿನವಿಡಿ ಉಪವಾಸ ಕುಳಿತಿದ್ದರು ಇಂದು ಕೂಡ ಉಪವಾಸ ಮುಂದುವರೆದಿದೆ.