ಬ್ರೆಕ್ಟ್ ನ ಕಾವ್ಯ ಗಳಲ್ಲಿ ಕಗ್ಗತ್ತಲಲ್ಲಿ ಬೆಳಕಿದೆ. - ಸಿರಾಜ್ ಅಹಮದ್

Culture Literature

Posted on 24-06-2025 |

Share: Facebook | X | Whatsapp | Instagram


ಬ್ರೆಕ್ಟ್ ನ ಕಾವ್ಯ ಗಳಲ್ಲಿ ಕಗ್ಗತ್ತಲಲ್ಲಿ ಬೆಳಕಿದೆ. -     ಸಿರಾಜ್ ಅಹಮದ್

ಬ್ರೆಕ್ಟ್ ನ ಕಾವ್ಯ ಗಳಲ್ಲಿ ಕಗ್ಗತ್ತಲಲ್ಲಿ ಬೆಳಕಿದೆ.

      ಸಿರಾಜ್ ಅಹಮದ್ 

ಶಿವಮೊಗ್ಗ ಜೂನ್ 22  ಬ್ರೆಕ್ಟ್ ನ ಕಾಲದಲ್ಲಿ ಯುದ್ದಗಳು ನಡೆಯುತ್ತ ಸಾಮೂಹಿಕ ನರಮೇಧ ಅರಾಜಕತೆ ಇತ್ತು.ಅಂತಹ ಸಮಯದಲ್ಲಿ ಬ್ರೆಕ್ಟ್ ಅದನ್ನೇ ಕುರಿತು ಕಾವ್ಯ ರಚಿಸಿದ್ದು ಕಗ್ಗತ್ತಲಲ್ಲಿ ಬೆಳಕು ಬಂದಂತೆ ಆಗಿದೆ.ಎಂದು ಸಹ್ಯಾದ್ರಿ ಕಾಲೇಜಿನ ಆಂಗ್ಲ ಪ್ರಾಧ್ಯಾಪಕ ಸಿರಾಜ್ ಅಹಮದ್ ಹೇಳಿದರು.

     ಅವರು ಪ್ರೆಂಡ್ಸ್ ಸೆಂಟರ್ ಹಾಲ್ ನಲ್ಲಿ ಬಹುಮುಖಿ ಕಾರ್ಯಕ್ರಮದಲ್ಲಿ ಜರ್ಮನಿಯ ಬ್ರೆಕ್ಟ್ ಕವಿಯ ಕಾವ್ಯ ಕುರಿತು ಮಾತನಾಡುತ್ತಿದ್ದರು.

ಆತನ ಕಾವ್ಯ ದಲ್ಲಿ ವ್ಯಂಗ್ಯ ಇದೆ.ಅದು ನಮ್ಮ ತಪ್ಪನ್ನು ನಮಗೆ ತೋರಿಸುತ್ತದೆಕಾವ್ಯ ಓದುತ್ತಾ ಹೋದಂತೆ ಅಂತರಂಗ ಚುಚ್ಚಿದ ಅನುಭವ ಆಗುತ್ತದೆ.

ಬ್ರೆಕ್ಟ್ ಎರಡು ಮಹಾಯುದ್ದ ನೋಡಿ ಹಿಟ್ಲರ್ ಸ್ಟಾಲಿನ್ ರಂತಹ ಸರ್ವಾಧಿಕಾರಿ ಗಳನ್ನು ನೋಡಿ ಒಂದುವರೆ ಸಾವಿರಕ್ಕೂ ಹೆಚ್ಚು ಕವನ ಬರೆದು ಆಕಾಲದ ಹಿಂಸೆ ಯನ್ನು ಖಂಡಿಸಿದ .ಆತ ಇದರಿಂದಾಗಿ 16ವರ್ಷ ದೇಶಭ್ರಷ್ಟ ನಾಗ ಬೇಕಾಯಿತು.ಅವನ ಪುಸ್ತಕವನ್ನು ಸುಟ್ಟರೂ ಕೂಡ ಆತ ಬಂಡುಕೋರ ಕಲಾವಿದನಾಗಿ ಕೊನೆಯವರೆಗೂ ಹಿಂಸೆ ವಿರೋಧ ಮಾಡುತ್ತಿದ್ದ.

     ಆತನ ಕಾವ್ಯ ಜನ ಸಾಮಾನ್ಯರ ಪರವಾಗಿತ್ತು.ದುಡಿಯುವ ವರ್ಗದ ಪರವಾಗಿದ್ದ.ಬರೆಯುತ್ತ ಹೋರಾಡಬೇಕು ಹೋರಾಡುತ್ತಲೇ ಬರೆಯಬೇಕು ಎನ್ನುತ್ತಿದ್ದ.ಈತನ ಎಲ್ಲಾ ಕಾವ್ಯ ಗಳು ಸಮಕಾಲೀನ ವಿಷಯಗಳ ಬಗ್ಗೆ ಇತ್ತು.ಚರಿತ್ರೆಯ ಒಳಸುಳಿಯಲ್ಲಿ ಈತ ಸಿಕ್ಕು ಅದರ ಭಾಗವಾಗಿ ಕವನ ಬರೆಯುತ್ತಿದ್ದ. 

     ಯುದ್ದಗಳು ಮಾನವೀಯ ಮೌಲ್ಯಗಳನ್ನು ನಾಶಪಡಿಸುತ್ತದೆ.ಯುದ್ದದಲ್ಲಿ ಸೈನಿಕರು ಮಾತ್ರವಲ್ಲದೆ ಸಾಮಾನ್ಯ ಜನರು ಮಹಿಳೆಯರು ನಾಶವಾಗುತ್ತಾರೆ.ಎಂದು ತಿಳಿಸಿ ನೀವು ವಿರೋಧ ಮಾಡುವಾಗ ಗಟ್ಟಿ ಧ್ವನಿಯಲ್ಲಿ ಮಾಡಬೇಕು ಎಲ್ಲರೂ ಎದ್ದುನಿಂತು ನಿಮ್ಮ ನೋಡುತ್ತಾರೆ.ಆತ ಕವಿಯ ಉದ್ದೇಶ ಹೇಳುತ್ತಾ ಅದರಿಂದ ಸಮಾಜಕ್ಕೆ ಅನುಕೂಲ ಆಗಬೇಕು.ನನ್ನ ಕಾವ್ಯ ದಲ್ಲಿ ಅಲಂಕಾರ ಪ್ರಾಸ ಇರಬಾರದು ಅದು ಅಸಭ್ಯ ಎಂದು ಹೇಳಿ ನನ್ನ ಗೋರಿಯ ಮೇಲೆ ಇಲ್ಲಿ ಮಲಗಿದ ವ್ಯಕ್ತಿ ಕೆಲವು ಸಲಹೆ ನೀಡಿದ ನಾವು ಅದನ್ನು ಪಾಲಿಸಿದೆವು ಎಂದು ಬರೆಯಿರಿ ಎಂದಿದ್ದ.

ಈತನ ಕವನಗಳಿಗೆ ಸಿಗಬೇಕಾದಷ್ಟು ಮಾನ್ಯತೆ ಸಿಗಲಿಲ್ಲ.

ಆತ ಜನರಿಗೆ ತಿಳಿಸಿದ್ದ ನೀವು ತಿಳಿದಂತೆ ಮಾಧ್ಯಮಗಳು ಫೋಟೋ ಗಳು ಜನರಿಗೆ ಸತ್ಯ ತಿಳಿಸುವುದಿಲ್ಲ ಅದು ಸುಳ್ಳು ಹೇಳುತ್ತವೆ.ಎಂದಿದ್ದಾನೆ.

ಆತ ಬರೆದ ಯುದ್ದದ ಕವನ ಹೀಗಿದೆ.

ಅವರು ಹಾಕಿದ ಬಾಂಬಾರು ಗಳಿಗಿಂತ 

ಅವರು ಛೂ ಬಿಟ್ಟ ಹಸಿವಿನಿಂದ 

ಹೆಚ್ಚು ಜನ ಸತ್ತಿದ್ದಾರೆ.

ಇಂದು ಮನುಷ್ಯ ಯಂತ್ರಗಳ ಯಜಮಾನ ನಾಗಿದ್ದಾನೆ.

ನಾನೊಬ್ಬ ಸಾಮಾನ್ಯ ಮನುಷ್ಯ 

ನಾನೂ ಎಲ್ಲರ ಹಾಗೇ ಇಷ್ಟೇ ಊಟ ಮಾಡುತ್ತೇನೆ.

ನನಗೆ ಪ್ರಪಂಚವನ್ನೇ ಗೆಲ್ಲಬೇಕೆಂಬ ಆಸೆ.

ಹೌದೇ ಹಾಗಾದರೆ 

ನಿನ್ನ ಮಗುವಿನ 

ಮಾಂಸವನ್ನು ಬಡಿಸಲೇ?

ಯುದ್ದವೆಂದರೆ 

ಸತ್ತ ಶವವನ್ನು ಎದ್ದು

ಕೂರಿಸಿ ದಂತೆ.


ಗಂಡ ಹೆಂಡತಿ ಹಾಸಿಗೆ ಯಲ್ಲಿ

ಮಲಗಿದ್ದಾರೆ 

ಯುದ್ದ ಮುಗಿದ ಮೇಲೆ ಆಕೆ

ತಬ್ಬಲಿ ಮಗುವನ್ನು 

ಹೆರುತ್ತಾಳೆ.

ಒಟ್ಟಿನಲ್ಲಿ ನಾವು ಯುದ್ದಗಳು ಮಾಡುವ ಹಿಂಸೆ ತಡೆ ಹಿಡಿಯದಿದ್ದರೆ ನಾವೂ ಕೂಡ ಒಳ್ಳೆಯ ಕಾರಣಕ್ಕೆ ಒಳ್ಳೆಯ ಗೋರಿ ಸೇರುತ್ತೇವೆ. ಎಂಬ ಬ್ರೆಕ್ಟ್ ನ ಮಾತು ನೆನಪಿಟ್ಟುಕೊಳ್ಳಬೇಕು ಎಂದರು.

ಬಹುಮುಖಿಯ ಡಾ.ನಾಗಭೂಷಣ್ ಸ್ವಾಗತಿಸಿ ನಿರೂಪಿಸಿದರು.

Search
Recent News