Posted on 12-06-2025 |
Share: Facebook | X | Whatsapp | Instagram
ಜಿಲ್ಲೆಯಲ್ಲಿಯೇ ಅತ್ಯುತ್ತಮ ಕೆಲಸಗಾರ ತಹಶೀಲ್ದಾರ್ ಶಿಕಾರಿಪುರ ಮಲ್ಲೇಶ್ ಬೀರಪ್ಪ ಪೂಜಾರ್
ಶಿವಮೊಗ್ಗ ಜಿಲ್ಲೆಯಲ್ಲಿ ರೈತ ಹಿತಕ್ಕಾಗಿ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆಯನ್ನು ಮಾಡಿ 7 ವಿಶೇಷ ಕಾರ್ಯಕ್ರಮಗಳ ಪೈಕಿ 5ರಲ್ಲಿ ಜಿಲ್ಲೆಯಲ್ಲಿಯೇ ಶಿಕಾರಿಪುರವನ್ನು ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸಿದ ತಹಶೀಲ್ದಾರ್ ಎಂದರೆ ಮಲ್ಲೇಶ್ ಬೀರಪ್ಪ ಪೂಜಾರ್
ಶಿಕಾರಿಪುರದಲ್ಲಿ ರೈತರಿಗೂ ಕೆಇಬಿಗೂ, ರೈತರಿಗೂ ಅಡಿಕೆ ಮಾರಾಟದ ದಲ್ಲಾಳಿಗಳಿಗೂ ರೈತರಿಗೂ ಸರ್ಕಾರದ ವಿವಿದ ಇಲಾಖೆಗಳಿಗೂ ಭಿನ್ನಾಭಿಪ್ರಾಯ ಬಂದಾಗ ಎಲ್ಲಾ ಹಂತದಲ್ಲೂ ಕೂಡ ರೈತರ ಪರವಾಗಿ ನಿಂತು ಕಾನೂನಿಗೆ ವಿರುದ್ಧವಾಗದಂತೆ ರೈತರಿಗೆ ಸಂಬಂಧಪಟ್ಟಂತ ಕಂದಾಯ ಸೇವೆಯನ್ನು ನಿಗದಿತ ಸಮಯದಲ್ಲಿ ಮಾಡಿಕೊಟ್ಟು ಅವರಿಗೆ ಬರಬೇಕಾದ ಪರಿಹಾರವನ್ನು ಕೂಡ ತಕ್ಷಣವೇ ಒದಗಿಸಿ ಶಿಕಾರಿಪುರ ತಾಲೂಕನ್ನು ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿಸಿದವರು ಅಲ್ಲಿನ ತಹಶೀಲ್ದಾರಾದ ಮಲ್ಲೇಶ್ ಬೀರಪ್ಪ ಪೂಜಾರ್ ಅವರು.
ಕಂದಾಯ ಇಲಾಖೆಯ ಒಟ್ಟು 7 ಕಾರ್ಯಕ್ರಮಗಳಲ್ಲಿ 5ರಲ್ಲಿ ಶಿಕಾರಿಪುರ ಮೊದಲ ಸ್ಥಾನ ಪಡೆದಿದೆ. ರೈತರ ಪಹಣಿಗೆ ಆಧಾರ್ ಜೋಡಣೆಯಲ್ಲಿ 1,38,588, ಪಹಣಿ ಕೆಲಸ ಮುಗಿದಿದ್ದು ಮೊದಲ ಸ್ಥಾನ. ಜಿಯೋ ಪೆನ್ಸಿಂಗ್ ಮೂಲಕ ಸರ್ಕಾರಿ ಭೂಮಿಯನ್ನು ಗುರುತಿಸಿ ಅತಿಕ್ರಮಣ ಮತ್ತು ಅಕ್ರಮ ಮಂಜೂರಾತಿ ತಪ್ಪಿಸಿ ತಾಲೂಕಿನಲ್ಲಿ 4846 ಪ್ರಕರಣ ಸರಿಪಡಿಸಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ.
ಭೂ ಮಂಜುರಾತಿ ಪ್ರಕರಣದ ದರಕಾಸ್ತು ಪೋಡಿ ದುರಸ್ತಿ ಸಂಬಂಧ ನಮೂನೆ 1 ರಿಂದ 5ರ ಮಾಹಿತಿ ದಾಖಲಿಸಲು ತಂತ್ರಾಂಶ ಅಭಿವೃದ್ದಿಗೊಳಿಸಲಾಗಿದ್ದು ತಾಲೂಕಿನಲ್ಲಿ 769 ಪ್ರಕರಣ ದಾಖಲಾಗಿದ್ದು ಅದರಲ್ಲಿ 683 ಪ್ರಕರಣವನ್ನು ಪೂರ್ಣ ಗೊಳಿಸಲಾಗಿದೆ. ಬಗರ್ ಹುಕುಂ ಸಾಗುವಳಿ ಕುರಿತು ಇದ್ದ 180 ಅರ್ಜಿಯಲ್ಲಿ 127 ಅರ್ಜಿಯನ್ನು ಇತ್ಯರ್ಥ ಗೊಳಿಸಲಾಗಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಕೆರೆ ಹೊಂದಿರುವ ಎರಡನೇ ತಾಲೂಕು ಶಿಕಾರಿಪುರ ಇಲ್ಲಿನ 1280 ಕೆರೆಗಳು ಒತ್ತುವರಿಯಾಗಿದೆ. ಅದರಲ್ಲಿ 816 ಕೆರೆ ಅಳತೆ ಮಾಡಿಸಿ ಒತ್ತುವರಿಯನ್ನು ಗುರುತಿಸಲಾಗಿದೆ. 464 ಕೆರೆಗಳು ಪೂರ್ಣ ಒತ್ತುವರಿಯಾಗಿವೆ. ಆದರೆ ಸರ್ಕಾರಕ್ಕೆ ಒತ್ತುವರಿಯಾದ ಕೆರೆ ಭೂಮಿಯನ್ನು ಬಿಡಿಸಿಕೊಳ್ಳಲು ಆಗಲಿಲ್ಲ. ಇದಕ್ಕೆ ಕೆರೆ ಒತ್ತುವರಿ ಮಾಡಿಕೊಂಡವರಲ್ಲಿ ರಾಜಕೀಯ ಪ್ರಭಾವ ಇರುವವರು ಹೆಚ್ಚಿದ್ದಾರೆ, ಬಹುಶಃ ಶಿಕಾರಿಪುರದ ಶಾಸಕರುಗಳು ಸಂಸದರು ಮತ್ತು ಮಾಜಿ ಮುಖ್ಯಮಂತ್ರಿಗಳು ತಹಸೀಲ್ದಾರ್ ಅವರಿಗೆ ಪೂರ್ಣ ಬೆಂಬಲ ನೀಡಿ ಸರ್ಕಾರದ ಪರವಾಗಿ ನಿಂತರೆ ಒತ್ತುವರಿ ತೆರವಿನಲ್ಲೂ ಕೂಡ ಶಿಕಾರಿಪುರ ಮೊದಲನೇ ಸ್ಥಾನವನ್ನು ಪಡೆಯಬಹುದು
ಕಡತ ಡಿಜಿಟಲೀಕರಣ ಯೋಜನೆ ಅಡಿ ತಾಲೂಕಿನಲ್ಲಿ 1 35,336 ಕಡತಗಳದ್ದು ಅದರಲ್ಲಿ 8,882 ಕಡತಗಳ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದೆ. ಇನ್ನು 1, 26, 454 ಕಡತ ಸ್ಕ್ಯಾನಿಂಗ್ ಆಗಬೇಕಾಗಿದೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಶಿಕಾರಿಪುರ 2ನೇ ಸ್ಥಾನದಲ್ಲಿದೆ. ಒಟ್ಟಿನಲ್ಲಿ ತಹಶೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಅವರ ಕಾರ್ಯ ವೈಖರಿಯಿಂದ ಸರ್ಕಾರ ಸಂತೋಷಗೊಂಡಿದ್ದು ಅವರಿಗೆ ಸನ್ಮಾನಿಸಿದೆ. ಇನ್ನಷ್ಟು ಸಹಕಾರ, ನೆರವನ್ನು ಸರ್ಕಾರ ನೀಡಿದರೆ ಕೆರೆ ಒತ್ತುವರಿ ಕಡತ ವಿಲೇವಾರಿ ಬಗೆಹರಿಸುತ್ತೇವೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಭದ್ರಾವತಿ ಸಾಗರ ಹೊಸನಗರ ತೀರ್ಥಹಳ್ಳಿ ಶಿಕಾರಿಪುರ ಸೊರಬ ತಾಲೂಕುಗಳಿದ್ದು ಹೊಸನಗರ ಹೊರತುಪಡಿಸಿ ಉಳಿದ ತಾಲೂಕುಗಳಿಗೆ ಎಂಎಲ್ಎಗಳು ಕೂಡ ಇದ್ದಾರೆ. ಈ ಶಾಸಕರುಗಳು ಚುನಾವಣಾ ಸಮಯದಲ್ಲಿ ಬಂದು ತಮ್ಮ ಪಕ್ಷದ ವತಿಯಿಂದ ರೈತರ ಹಿತಕ್ಕಾಗಿ ಮಾಡುವ ಕೆಲಸಗಳ ದೊಡ್ಡ ಪಟ್ಟಿಯನ್ನು ನೀಡಿ ಚುನಾವಣೆಯಲ್ಲಿ ಮತ ಪಡೆದು ಮತ್ತೆ ಪುನಃ ಚುನಾವಣೆಗೆ ಬರುವುದು ವಾಡಿಕೆ. ಆದರೆ ಶಿಕಾರಿಪುರದಲ್ಲಿ ಮೊದಲಿನಿಂದ ರಾಜಕೀಯ ಪ್ರಜ್ಞೆ ಜಾಗೃತಗೊಂಡಿದೆ ಯಾವುದೇ ಅಧಿಕಾರಿಗಳು ಕೆಲಸ ಮಾಡದೇ ಇದ್ಜಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಯಾದ ಯಡಿಯೂರಪ್ಪನವರು ಅವರ ಮೇಲೆ ತಕ್ಷಣವೇ ಕ್ರಮ ಕೈಗೊಂಡು ಕೆಲಸ ಮಾಡಿಸಿ ಕೊಡುತ್ತಿದ್ದರು, ಈಗಿನ ಶಿಕಾರಿಪುರದ ಶಾಸಕ ಬಿ ವೈ ವಿಜಯೇಂದ್ರ ಮೊದಲ ಬಾರಿಗೆ ಶಾಸಕರಾಗಿದ್ದು ತಂದೆಯ
ಹಾದಿಯಲ್ಲಿ ನಡೆಯುತ್ತಾ ರೈತರ ಕಷ್ಟವನ್ನು ಪರಿಗಣಿಸಿ ಸರ್ಕಾರದಿಂದ ಆಗುವ ಕಾರ್ಯಗಳನ್ನು ತಕ್ಷಣ ಮಾಡಿಸಿಕೊಡುತ್ತಿರುವುದು ಶಿವಮೊಗ್ಗ ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ. ಉಳಿದ ರಾಜಕಾರಣಿಗಳು ಕೂಡ ಒಣಗುತ್ತಿಗೆ ರಾಜಕೀಯ ಮಾಡುವ ಮೊದಲು ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮೊದಲು ಸರ್ಕಾರದ ಭೂಮಿಯನ್ನು ವಶಕ್ಕೆ ಪಡೆದುಕೊಂಡು ರೈತರಿಗೆ ಅನುಕೂಲವಾಗುವ ಎಲ್ಲ ಯೋಜನೆಗಳನ್ನು ನೂರಕ್ಕೆ ನೂರು ಜಾರಿಗೆ ತಂದು ಅವರಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಅದರಲ್ಲೂ ಮಲೆನಾಡಿನ ಭಾಗದಲ್ಲಿ ಅಧಿಕಾರಿಗಳು ರಕ್ತ ಪಿಪಾಸುಗಳಂತೆ ಮುಗ್ಧ ರೈತರನ್ನು ಹೀರುತ್ತಾರೆ ಅದರ ಬದಲು ಸರ್ಕಾರದಿಂದ ಯಾವ ಯಾವ ಯೋಜನೆ ಬಂದಿದೆ. ರೈತರಿಗೆ ಹೇಗೆ ಇದರಿಂದ ಅನುಕೂಲ ಆಗುತ್ತದೆ ಮತ್ತು ಅವರ ಭೂಮಿ ಮತ್ತು ಪಹಣಿ ಇತ್ಯಾದಿ ವಿಷಯಗಳಲ್ಲಿ ಯಾವ ಲೋಪವಾಗಿದೆ ಎಂಬುದನ್ನ ಮನಗಂಡು ರೈತರಿಗೆ ಅನುಕೂಲವಾಗುವಂತೆ ಕಾರ್ಯ ಮಾಡಿಕೊಡಬೇಕು.