Posted on 17-05-2025 |
Share: Facebook | X | Whatsapp | Instagram
ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಮಂಡ್ಯ
ಇವರಿಂದ ಕನ್ನಡ ಜಾಗೃತಿ ಸಮಾವೇಶ
ಮಂಡ್ಯ ಮೇ 17 ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಮಂಡ್ಯ ಇವರಿಂದ ಇಂದು ಇಲ್ಲಿನ ಸಂಸ್ಕೃತಿ ಭವನದಲ್ಲಿ ಕನ್ನಡ ಜಾಗೃತಿ ಸಮಾವೇಶ ನಡೆಸಿ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ವಿರುದ್ಧ ಮೆರವಣಿಗೆ ನಡೆಸಿ ರಸ್ತೆ ತಡೆ ಚಳುವಳಿ ನಡಿಸಿ ಗೋಷ್ಠಿ ನಡೆಸಲಾಯಿತು.
ಸುನಂದಾ ಜಯರಾಂ ಮಾತನಾಡುತ್ತಾ ಆಗಿರುವ ತಪ್ಪುಗಳನ್ನು ಸರಿಪಡಿಸಿ ಕೊಳ್ಳಬೇಕು.ಮಹೇಶ್ ಜೋಶಿಯವರು ಸರ್ವಾಧಿಕಾರದ ಮನೋಭಾವವನ್ನು ಬಿಡಬೇಕು.
ಎಸ್ ಜಿ ಸಿದ್ಧರಾಮಯ್ಯ ನವರು ಮಾತನಾಡಿ ಜಿ.ನಾರಾಯಣ ರಂತಹ ರಾಜಕಾರಣಿಗಳು ಕಸಾಪ ಅಧ್ಯಕ್ಷರಾಗಿದ್ದರು ಕೂಡ ಎಂದು ರಾಜಕಾರಣ ಮಾಡಲಿಲ್ಲ ಅಸಮಾನತೆಯ ಮನಸ್ಸಿನ ಈ ಜೋಷಿ ದುಷ್ಟತನದ ರಾಜಕಾರಣ ಮಾಡಿ ಆಡಳಿತ ನಡೆಸುತ್ತಿದ್ದಾನೆ.ಸಾಹಿತ್ಯದ ಕೆಲಸ ಬಿಟ್ಟು ರಾಜಕೀಯ ಮಾಡುತ್ತಿದ್ದಾನೆ ಎಂದರು.ಈತ ಸಾಹಿತ್ಯದ ಸೂಕ್ಷ್ಮತೆ ಇಲ್ಲದ ಸರ್ವಾಧಿಕಾರಿ ಅಧ್ಯಕ್ಷ ಎಂದರು.
ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ ಮೊದಲ ಕ್ರಾಂತಿಯ ಕಹಳೆಯನ್ನು ಮಂಡ್ಯ ಮೊಳಗಿಸಿದೆ.ಜೋಷಿಗೆ ತಾನು ಏನು ಮಾತನಾಡುತ್ತೇನೆ ಎಂಬ ಪ್ರಜ್ಞೆ ಇಲ್ಲ.ಈತನಿಗೆ ಕೊಟ್ಟ ಕ್ಯಾಬಿನೆಟ್ ಸ್ಥಾನಮಾನ ತಕ್ಷಣ ವಾಪಾಸು ತೆಗೆದುಕೊಳ್ಳಬೇಕು ಎಂದರು.ಮಂಡ್ಯ ಸಮ್ಮೇಳನ ಮುಗಿದು 6ತಿಂಗಳಾದರು 2 ವರೆ ಕೋಟಿ ರೂಪಾಯಿ ವೈಯಕ್ತಿಕವಾಗಿ ಖರ್ಚು ಮಾಡಿದ ಲೆಕ್ಕ ಇದೂವರೆಗೂ ಕೊಟ್ಟಿಲ್ಲ ಸಾಹಿತ್ಯ ಪರಿಷತ್ತು ಇವರಪ್ಪನ ಮನೆ ಅಲ್ಲ ಎಂದರು.
ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ ಜೋಷಿಗೆ ಅಧಿಕಾರ ನೀಡಿದ್ದು ಮಂಗನಿಗೆ ಹೆಂಡ ಕುಡಿಸಿದಂತಾಗಿದೆ, ಶಿವಮೊಗ್ಗದ ಎಲ್ಲಾ ತಾಲ್ಲೂಕುಗಳಲ್ಲಿ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತಿರುವ ಡಿ.ಮಂಜುನಾಥ ರವರಿಗೆ ನೋಟಿಸ್ ನೀಡಿರುವ ಜೋಷಿ ಗೆ ರಾಜ್ಯಾದ್ಯಂತ ಕಪ್ಪು ಬಾವುಟ ಪ್ರದರ್ಶಿಸಬೇಕು ಎಂದರು.
ಹೋರಾಟಗಾರ್ತಿ ವಿಮಲಾ ಮಾತನಾಡಿ ಸಾಹಿತ್ಯದ ಗಂಧಗಾಳಿಯೂ ಇಲ್ಲದ ಜೋಷಿ ಕಸಾಪ ಅಧ್ಯಕ್ಷ ಆದುದು ದುರಂತ ಎಂದರು.ಈ ವ್ಯಕ್ತಿಯನ್ನು ಆರಿಸಿದ್ದು ದೇಶವನ್ನು ಒಡೆಯುವ ಬಹುಸಂಸ್ಕೃತಿ ನಾಶಮಾಡುವ ಜನರಾಗಿದ್ದಾರೆ.ಕಸಾಪ ಸದಸ್ಯರು ಜೋಷಿಯ ಗುಲಾಮರಲ್ಲ ಎಂದರು.ದಾವಣಗೆರೆ ಜಿಲ್ಲೆಯ ರುದ್ರಪ್ಪ ಮಾತನಾಡಿ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಹೋರಾಟ ನಡೆಯಬೇಕು.ಎಂದರು. ಲೇಖಕಿ ಹೆಚ್.ಎಲ್.ಪುಷ್ಪ ಮಾತನಾಡಿ ಜೋಷಿಗೆ ಮಹಿಳಾ ಲೇಖಕಿಯರು ಯಾವಾಗಲೋ ಬಹಿಷ್ಕಾರ ಹಾಕಿ ಆಗಿದೆ.ಅವರನ್ನು ಮಾತನಾಡಿಸಲು ಹೋದಾಗ ಮೊದಲೇ ಅಪಾಯಿಂಟ್ ಮೆಂಟ್ ತಗೋಬೇಕು ಎಂದಿದ್ದರಿಂದ ಲೇಖಕಿಯರ ಸಂಘ ಇದೂವರೆಗೂ ಅವರ ಭೇಟಿ ಮಾಡಿಲ್ಲ ಎಂದರು. ಕಾಳೇಗೌಡ ನಾಗವಾರ ಮಾತನಾಡಿ ಇಂತಹ ವ್ಯಕ್ತಿಯನ್ನು
ಇದೂವರೆಗೂ ಕನ್ನಡಿಗರೂ ಸಹಿಸಿಕೊಂಡಿದ್ದೇ ಆಶ್ಚರ್ಯ ಎಂದರು.ಈತ ಹುಟ್ಟು ಕಳ್ಳ ಇವನನ್ನು ಪ್ರತಿಭಟಿಸಿ ಹೋರಾಟ ಮಾಡಬೇಕು ಎಂದರು.ಪದ್ಮಾಶೇಖರ್ ಮಾತನಾಡಿ ಕಸಾಪ ಅಧ್ಯಕ್ಷರ ಈ ರೀತಿಯ ವರ್ತನೆ ನಾನು ಎಂದೂ ನೋಡಿಲ್ಲ, ತಿಂಗಳಿಗೆ ಸುಮಾರು 2ವರೆ ಲಕ್ಷ ಹಣ ಕಬಳಿಸುವ ಇವರು ಈ ಕೂಡಲೇ ರಾಜಿನಾಮೆ ಕೊಡಬೇಕು.ಸಾಹಿತಿಗಳ ಹಣ ತಿಂದ ಈ ದಗಾಕೋರನನ್ನ ತಕ್ಷಣ ಕೆಳಗಿಳಿಸಬೇಕು ಎಂದರು.ಶ್ರೀಕಂಠೇಗೌಡ ಮಾತನಾಡಿ ನಮ್ಮ ಹಿರಿಯರು ಕಸಾಪ ಕಟ್ಟಿದ್ದು ಜೋಷಿಯಂತವರು ಹಣ ಮಾಡಲು ಅಲ್ಲ ಅವರನ್ನು ತಕ್ಷಣ ಬಂಧಿಸಿ ಎರಡೂವರೆ ಕೋಟಿ ಹಣ ಪಡೆಯಬೇಕು ಎಂದರು.ಪ್ರೋ.ನಂಜರಾಜ ಅರಸ್ ಮಾತನಾಡಿ ಮಹೇಶ್ ಜೋಷಿ ಅಯೋಗ್ಯ ಅವನನ್ನು ಸರ್ಕಾರವೇ ಕಿತ್ತು ಹಾಕಬೇಕು.ಇಲ್ಲದೇ ಹೋದಲ್ಲಿ ಮಂಡ್ಯದ ಜನ ಆಮರಣಾಂತ ಉಪವಾಸ ಕೈಗೊಳ್ಳುತ್ತೇವೆ .ನನಗೆ 95ವರ್ಷ ಆದರೂ ಉಪವಾಸ ಕೂರುತ್ತೇನೆ ಎಂದರು.ಹಾಸನದ ಕರಿಯಣ್ಣ ಮಾತನಾಡಿ ಜೋಷಿ ಕಾಲದಲ್ಲಿ ಪ್ರಜಾಪ್ರಭುತ್ವ ಇಲ್ಲ ಅದನ್ನು ಮರು ಸ್ಥಾಪಿಸಬೇಕು ಎಂದರು ಕೆ.ಹೆಚ್ ಕುಮಾರ್ ಮಂಡ್ಯ ಮಾತನಾಡಿ ಜೋಷಿ ರಾಜಿನಾಮೆ ಕೊಡುವ ವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದರು.ಸುಮತೀಂದ್ರ ಬೆಂಗಳೂರು ಮಾತನಾಡಿ ಎಲ್ಲಾ ಸಮಾನಮನಸ್ಕ ಸಂಘಟನೆಗಳನ್ನು ಒಂದು ಗೂಡಿಸಿ
ದೊಡ್ಡ ಹೋರಾಟ ಮಾಡುತ್ತೇವೆ.ಹಾಗೂ ರಾಜ್ಯಪಾಲರಿಗೆ ಒತ್ತಾಯ ಮಾಡಿ ಜೋಷಿಯ ನಾಡೋಜ ವಾಪಾಸು ಪಡೆಯಲು ಒತ್ತಾಯಿಸುತ್ತೇವೆ ಎಂದರು.ಶ್ರವಣ ಬೆಳಗೊಳದ ಶ್ರಾದ್ದೆ ಮಾತನಾಡಿ ಅವಿವೇಕಿ ಮಹೇಶ್ ಜೋಷಿ ಯನ್ನು ಹೊರದೂಡಿ ಪರಿಷತ್ತಿನ ಮುಖ್ಯ ಕಛೇರಿ ಗೆ ಬೀಗ ಹಾಕಬೇಕು ಎಂದರು.ಚಾಮರಾಜನಗರದ ವಸುಂದರಾ ಭೂಪತಿ ಮಾತನಾಡಿ ಚಾಮರಾಜನಗರ ಮತ್ತು ಬೆಂಗಳೂರಿನಲ್ಲಿ ದೊಡ್ಡ ಹೋರಾಟ ಮಾಡಿ ಮಹೇಶ್ ಜೋಷಿ ಕೆಳಗಿಳಿಸುವವರೆಗೂ ನಾವು ಹೋರಾಟ ಮುಂದುವರೆಸುತ್ತೇವೆ ಎಂದರು..ಶಿವಮೊಗ್ಗ ಜಿಲ್ಲೆಯ ಪರವಾಗಿ ಡಾ.ಕೆ.ಜಿ.ವೆಂಕಟೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.ಅನೇಕ ಜಿಲ್ಲೆಯ ಕನ್ನಡ ಪ್ರೇಮಿಗಳು ಮಾತನಾಡಿ 4ನಿರ್ಣಯ ಕೈಗೊಂಡರು.
ಮೀರಾ ಶಿವಲಿಂಗಯ್ಯ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭಾ ನಿರ್ಣಯಗಳು
1 ಈ ಕೂಡಲೇ ಮಹೇಶ್ ಜೋಷಿ ಯನ್ನು ವಜಾಗೊಳಿಸಿ ಆಡಳಿತಾಧಿಕಾರಿ ನೇಮಕ ಮಾಡಬೇಕು
2 ಮಹೇಶ್ ಜೋಷಿ ಕಾಲದಲ್ಲಾದ ಎಲ್ಲಾ ತಿದ್ದುಪಡಿ ರದ್ದುಮಾಡಿ ಹಳೆಯದನ್ನು ಮುಂದುವರಿಸಬೇಕು.
3ಮೀರಾ ಶಿವಲಿಂಗಯ್ಯ ನವರಿಗೆ ಮಾಡಿದ ಅವಮಾನಕ್ಕೆ ಜೋಷಿ ಸಾರ್ವಜನಿಕ ವಾಗಿ ಕ್ಷಮೆ ಕೇಳಬೇಕು.
4ಈ ಕೂಡಲೇ ಮಂಡ್ಯ ಜಿಲ್ಲೆಯ ಸಮ್ಮೇಳನದ 2ವರೆ ಕೋಟಿ ರೂಪಾಯಿ ಮತ್ತು ವಿದೇಶಿ ಯರು ಕೊಟ್ಟ 10ಕೋಟಿಗೂ ಹೆಚ್ಚು ಹಣದ ಲೆಕ್ಕ ಕೊಡಬೇಕು..
5 ಇವರ ಕಾಲಾವಧಿಯಲ್ಲಿ ಆದ ಆರ್ಥಿಕ ಅಪರಾಧಗಳಿಗೆ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಒಬ್ಬರನ್ನು ನೇಮಿಸಿ ತನಿಖೆಗೆ ಒಳಪಡಿಸಬೇಕು. ಎಂದು ಸಭೆ ತೀರ್ಮಾನಿಸಿತು.
ವರದಿಗಾರರು ಕ್ರಾಂತಿ ಕಿಡಿ