ಲೌಕಿಕ ಜೀವನದ ಆಸೆ ತೊರೆಯುವುದೇ ಮೋಕ್ಷ ಡಾ.ಶಾಂತರಾಮ ಪ್ರಭುಗಳು

Culture Literature

Posted on 13-05-2025 |

Share: Facebook | X | Whatsapp | Instagram


ಲೌಕಿಕ ಜೀವನದ ಆಸೆ ತೊರೆಯುವುದೇ ಮೋಕ್ಷ   ಡಾ.ಶಾಂತರಾಮ ಪ್ರಭುಗಳು

ಲೌಕಿಕ ಜೀವನದ ಆಸೆ ತೊರೆಯುವುದೇ ಮೋಕ್ಷ 

ಡಾ.ಶಾಂತರಾಮ ಪ್ರಭುಗಳು 

ಹೊಸನಗರ ಮೇ 12. ಲೌಕಿಕ ಜೀವನದ ಆಸೆ ತೊರೆಯುವುದೇ ಮೋಕ್ಷ ಎಂದು ಶಾಂತಾರಾಮ್ ಪ್ರಭುಗಳು ಹೇಳಿದರು.ಅವರು ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ತಾಲ್ಲೂಕಿನ ವರಕೋಡು 

ಗ್ರಾಮದ ನಿವೃತ್ತ ಉಪನ್ಯಾಸಕರಾದ ಅಶೋಕ್ ಕುಮಾರ್ ಮನೆಯಲ್ಲಿ ನಡೆದ ಸಾಹಿತ್ಯ ಹುಣ್ಣಿಮೆ ಮತ್ತು ಬುದ್ದ ಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

   ಕರ್ನಾಟಕದಲ್ಲಿ ಕೂಡ ಬುದ್ದ ಧರ್ಮ ವ್ಯಾಪಿಸಿತ್ತು ರಾಯಚೂರು ಬಳ್ಳಾರಿ ಚಿತ್ರದುರ್ಗ ಕೊಪ್ಪಳಗಳಲ್ಲಿ ಬೌದ್ಧರು ನೆಲೆಸಿದ್ದರು ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರವರು ಬುದ್ದನ ಬಗ್ಗೆ ಮಹತ್ವವಾದ ಗ್ರಂಥ ಬರೆದಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ್ ಮಾತನಾಡಿ ಸಾಹಿತ್ಯ ಪರಿಷತ್ತು ಪ್ರತಿವರ್ಷ ಬುದ್ದ ಜಯಂತಿ ಕಾರ್ಯಕ್ರಮ ಮಾಡುತ್ತಾ ಬಂದಿದೆ, ಪ್ರತಿ ಬಾರಿಯೂ ಭೌದ್ಧ ಧರ್ಮದ ಬಗ್ಗೆ ವಿದ್ವಾಂಸರು ಉನ್ನತ ವಿಷಯ ತಿಳಿಸಿದ್ದಾರೆ.ಇಂದು ಕೂಡ ಶಾಂತಾರಾಮ ಪ್ರಭುಗಳು  ಬುದ್ದನ ಮದ್ಯಮ ಮಾರ್ಗ ತಿಳಿಸಿದ್ದಾರೆ.ಹೊಸನಗರದಲ್ಲಿ ಮೊದಲ ಬಾರಿಗೆ ಬುದ್ದ ಜಯಂತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವುದು ಸಂತೋಷದ ವಿಷಯ ಎಂದರು.

ತಾಲ್ಲೂಕು ಕಸಾಪ ದ ಅಧ್ಯಕ್ಷರಾದ ಗಣೇಶ್ ಮೂರ್ತಿ ನಾಗರಕೂಡಿಗೆ ಯವರು  ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ  ಕವಿಗಳಾದ ಎಂ.ನವೀನ್ ಕುಮಾರ್  ಡಾ.ಕೆ.ಜಿ.ವೆಂಕಟೇಶ್ ಇಲಿಯಾಸ್ ಕೆಸಿನಮನೆ ರತ್ನಾಕರ್ ಕವನ ವಾಚಿಸಿದರು.ಕತೆಯನ್ನು ವಶಿಷ್ಟ ಸುಬ್ರಹ್ಮಣ್ಯ 

ಹಾಗೂ ಚೈತನ್ಯ ಹೇಳಿದರು.ಹಾಗೂ ಹಾಸ್ಯ ಕಾರ್ಯಕ್ರಮವನ್ನು ವಕೀಲರಾದ ಕೆ.ಬಿ.ಪ್ರಶಾಂತ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಶ್ರೀ ಕಟ್ಟೆ ಸುರೇಶ್ ರವರನ್ನು ಅವರ ಮಾನವೀಯ ಕಾರ್ಯಗಳಿಗಾಗಿ ಗುರುತಿಸಿ ಸನ್ಮಾನಿಸಲಾಯಿತು.ಶ್ರೀ ಜಗದೀಶ್ ರಾವ್ ರವರು  ಈ ಸಂದರ್ಭದಲ್ಲಿ ಮಾತನಾಡಿ ಸುರೇಶ್ ರವರು ಯಾವುದೇ ಅನಾಥ ಶವಕ್ಕಾದರೂ ಕೂಡ ಯೋಗ್ಯವಾಗಿ ಶವಸಂಸ್ಕಾರ ಮಾಡುತ್ತಾರೆ ಮತ್ತು  ಉಚಿತವಾಗಿ 20ವರ್ಷಗಳಿಂದ ಅದನ್ನು ನಡೆಸಿಕೊಂಡು ಬರುತ್ತಿದ್ದಾರೆ ಹಾಗಾಗಿ ಅವರನ್ನು ಗುರುತಿಸುವ ಕಾರ್ಯ ಮಾಡಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ  ಸಾಹಿತ್ಯ ಹುಣ್ಣಿಮೆಯ ಮುಖ್ಯ ಕಾರ್ಯಕ್ರಮವಾಗಿ ಬುದ್ದನ ಜೀವನದ ಕೆಲವು ವಿಶೇಷಗಳನ್ನು ಹಾಗೂ ಅಷ್ಟಾಂಗ ಮಾರ್ಗವನ್ನು ಪಾಲಿಭಾಷೆಯಲ್ಲಿ ವಾಚಿಸಿ ಕನ್ನಡದಲ್ಲಿ ಅರ್ಥೈಸಿ ಗಮಕ ವಾಚನ ಕಾರ್ಯಕ್ರಮ ನಡೆಸಲಾಯಿತು.ಶ್ರೀಮತಿ ಅನುಪಮಾ ಸುರೇಶ್ ಗಾಯನ ಮತ್ತು ಡಾ.ಈ.ಎನ್.ಅಶೋಕ್ ಕುಮಾರ್ ರವರು ವಾಚನ  ನಡೆಸಿ ಪ್ರೇಕ್ಷಕರ ಮನಸ್ಸಿನಲ್ಲಿ ಹೊಸ ಚಿಂತನೆ ಮೂಡಿಸಿದರು.

 .

Search