Posted on 13-05-2025 |
Share: Facebook | X | Whatsapp | Instagram
ಯೋಗದಿಂದ ರೋಗ ಮುಕ್ತವಾಗುತ್ತದೆ.
ಅಭಿನವ ಚನ್ನಬಸವ ಸ್ವಾಮೀಜಿಗಳು ಮೂಲೆಗದ್ದೆ
ಶಿವಮೊಗ್ಗ ಮೇ 11 ಯೋಗದಿಂದ ರೋಗ ಮುಕ್ತವಾಗುತ್ತದೆ ಎಂದು ಸದಾನಂದ ಶಿವಯೋಗಿ ಆಶ್ರಮ ಮೂಲೆಗದ್ದೆಮಠ ಹೊಸನಗರ ಇವರು ಹೇಳಿದರು ಯೋಗ ಶಿಕ್ಷಣ ಸಮಿತಿ ಶಿವಮೊಗ್ಗ ಮತ್ತು ಸೇವಾ ಸಾಗರ ಟ್ರಸ್ಟ್ ಸಾಗರ ಇವರ ಆಶ್ರಯದಲ್ಲಿ ಯೋಗಾಸನ ಶಿಕ್ಷಕರ ಜಿಲ್ಲಾ ಪ್ರಶಿಕ್ಷಣ ವರ್ಗ 2025ರ ಸಮಾರೋಪ ಮಾತುಗಳನ್ನು ಆಡುತ್ತಿದ್ದರು.
ಭಾರತದೇಶ ಪವಿತ್ರವಾದ ಭೂಮಿ ಎಂದು ವಿದೇಶಿಯರು ನಂಬುತ್ತಾರೆ.ಅಮೃತಸರದಲ್ಲಿ ಹಾಗೂ ಇತರೆ ದೇವಸ್ಥಾನದಲ್ಲಿ ಚಪ್ಪಲಿ ನಿಷೇಧ ಭಾರತ ದೇಶಕ್ಕೆ ವಿದೇಶಿ ಯುವಕನೊಬ್ಬ ಕಾಲಿಗೆ ಚಪ್ಪಲಿ ಹಾಕಿಕೊಳ್ಳದೆ ಬಂದಾಗ ಯಾರೋ ಕೇಳಿದಾಗ ಆತ ಸಂಪೂರ್ಣ ಭಾರತ ಪುಣ್ಯ ಭೂಮಿ ಇದ್ದಂತೆ ಎಂದಿದ್ದ.ಆದರೆ ಇಂದು ವಿದೇಶಿ ವ್ಯಾಮೋಹ ಎಷ್ಟು ಹೆಚ್ಚಿದೆ ಎಂದರೆ ಮಕ್ಕಳು ವಿದೇಶದಲ್ಲಿ ಇದ್ದು ತಂದೆ ತಾಯಿ ವೃದ್ಧಾಶ್ರಮ ಸೇರುವಂತಾಗಿದೆ.ಮನಸ್ಸು ನಿಗ್ರಹ ಮಾಡಿಕೊಳ್ಳದೆ ಇದ್ದರೆ ಮನುಷ್ಯ ಹಾಳಾಗಿ ಹೋಗುತ್ತಾನೆ.ಅದಕ್ಕಾಗಿ ಯೋಗವನ್ನು ಅನುಸರಿಸಬೇಕು ಎಂದರು.ಆರೋಗ್ಯವೇ ಭಾಗ್ಯ ಅದನ್ನು ಹಾಳುಮಾಡಿಕೊಳ್ಳಬೇಡಿರಿ.ಮನುಷ್ಯ ಯೋಗದಿಂದ ರೋಗ ಮುಕ್ತನಾಗುತ್ತಾನೆ.ಆದ್ದರಿಂದ ಯೋಗ ಶಿವಯೋಗ ಆಗಬೇಕು ಎಂದರು.
ಬಾ.ಸು.ಅರವಿಂದ ಪ್ರಾರ್ಥನೆ ಮಾಡಿದರೆ ಶ್ರೀಮತಿ ಅರುಣಾ ಸ್ವಾಗತಿಸಿ, ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಡಾ.ಸಂಜಯ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು ಶ್ರೀಯುತ ವಸಂತ ಸ್ವಾಮಿಗಳ ಕಿರು ಪರಿಚಯ ಮಾಡಿಕೊಟ್ಟರು.ಶಿಬಿರದಲ್ಲಿ 71 ಜನ ಭಾಗವಹಿಸಿ ಮೂರು ದಿನಗಳ ಪ್ರಶಿಕ್ಷಣ ಪ್ರಯೋಜನ ಪಡೆದರು.