Posted on 13-05-2025 |
Share: Facebook | X | Whatsapp | Instagram
ಸಾಗರ ಮೇ 9 ಯೋಗ ಮನಸ್ಸನ್ನು ನಿಯಂತ್ರಣ ಮಾಡುತ್ತದೆ ಎಂದು ಇಲ್ಲಿನ ಪ್ರಣವ ಪೀಠ ಶ್ರೀ ಕೂಡ್ಲಿಮಠ ತಾಳಗುಪ್ಪದ ಸಿದ್ಧವೀರ ಮಹಾಸ್ವಾಮಿಗಳು ಹೇಳಿದರು ಅವರು ಯೋಗ ಶಿಕ್ಷಣ ಸಮಿತಿ ಶಿವಮೊಗ್ಗ ಹಾಗೂ ಸೇವಾ ಸಾಗರ ಟ್ರಸ್ಟ್ ಸಾಗರ ಇವರ ಸಂಯುಕ್ತ ಆಶ್ರಯದಲ್ಲಿ ಸೇವಾ ಸಾಗರ ಪ್ರೌಢಶಾಲೆ ಯಲ್ಲಿ ನಡೆದ ಯೋಗಾಸನ ಶಿಕ್ಷಕರ ಜಿಲ್ಲಾ ಪ್ರ ಶಿಕ್ಷಣ ವರ್ಗದ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧಾರಣ ಧ್ಯಾನ ಸಮಾಧಿ ಮುಖಾಂತರ ದೇಹ ಮತ್ತು ಮನಸ್ಸನ್ನು ಸರಿ ಮಾಡುವುದೇ ಯೋಗವಾಗಿದೆ
ಇಂದು ಯೋಗವೆಂದರೆ ಆರೋಗ್ಯಕ್ಕಾಗಿ ಮಾಡುತ್ತೇವೆ ಆರೋಗ್ಯವೇ ಭಾಗ್ಯ ಇದನ್ನು ಸರಿಯಾಗಿ ಇಟ್ಟುಕೊಳ್ಳಬೇಕಾದರೆ ಆಹಾರ ಪದ್ಧತಿ ಸರಿ ಮಾಡಿಕೊಳ್ಳಬೇಕು. ಯೋಗ ಮಾಡಬೇಕೆಂದಾಗ ಚಾಪೆ ಹಾಕಿಕೊಳ್ಳಬೇಕು ಸತ್ವ ತಮೋ ರಜೋಗುಣ ಮೂರು ಗುಣ ಸರಿ ಇದ್ದರೆ ಆಯುಷ್ಯ ಮತ್ತು ಆರೋಗ್ಯ ಹೆಚ್ಚಾಗುತ್ತದೆ ಕಾರ ಉಪ್ಪು ಹುಳಿ ಹಾಗೂ ಕುರುಕಲು ತಿಂಡಿಯನ್ನು ಹೆಚ್ಚು ತಿಂದರೆ ರಾಜಸಗುಣ ತಾಮಸ ಗುಣ ಹೆಚ್ಚಾಗಿ ಮನುಷ್ಯ ಹಾಳಾಗುತ್ತಾನೆ ಹಾಗಾಗಿ ಎಲ್ಲರೂ ಸಾತ್ವಿಕ ಆಹಾರವನ್ನು ಸೇವಿಸಬೇಕು ಒಂದು ಹೊತ್ತು ಉಂಡವನು ಯೋಗಿ ಎರಡು ಹೊತ್ತು ಉಂಡವನು ಭೋಗಿ ಮೂರು ಹೊತ್ತು ಉಂಡವನು ರೋಗಿ ಹಾಗಾಗಿ ಬೇಕರಿ ತಿಂಡಿಗಳನ್ನು ಕರೆ ಮಾಡಿ ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಉಪಯೋಗಿಸಬೇಕು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರಾಸ್ತಾವಿಕ ಭಾಷಣ ಮಾಡಿದ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ. ಸಂಜಯ್ ರವರು ಕಳೆದ 27 ವರ್ಷದಿಂದ ಯೋಗ ಶಿಕ್ಷಣ ಸಮಿತಿ ಶಿವಮೊಗ್ಗ ಭದ್ರಾವತಿ ಆಯನೂರು ಯೋಗ ತರಬೇತಿಯನ್ನು ನೀಡುತ್ತಿದೆ. ಈಗ 57 ಕೇಂದ್ರವಿದ್ದು ಸಾವಿರಾರು ಜನ ಯೋಗ ತರಬೇತಿಯನ್ನು ಪಡೆಯುತ್ತಿದ್ದಾರೆ. ಈಗಾಗಲೇ ಹೊಳೆ ಹೊನ್ನೂರು ಹೊಸನಗರ ಗಳಲ್ಲಿ ಜಿಲ್ಲಾ ಪ್ರಶಿಕ್ಷಣ ತರಬೇತಿ ನೀಡಿದ್ದು ಈ ವರ್ಷ ಸಾಗರದಲ್ಲಿ ಹಮ್ಮಿಕೊಂಡಿದೆ ಎಂದರು.ವೇದಿಕೆಯಲ್ಲಿ ಹಿರಿಯರಾದ ಅ.ಪು.ನಾರಾಯಣಪ್ಪ ಉಪಸ್ಥಿತರಿದ್ದರು.