Posted on 16-04-2025 |
Share: Facebook | X | Whatsapp | Instagram
5 ವರ್ಷ 5 ತಿಂಗಳಾದರೆ ಒಂದನೇ ತರಗತಿಗೆ ಸೇರಿಸಬಹುದು.
ಶಿವಮೊಗ್ಗ ಏ 15, ಕರ್ನಾಟಕ ರಾಜ್ಯ ಸರ್ಕಾರವು ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಬೇಕಾದರೆ ಆರು ವರ್ಷ ಪೂರ್ಣಗೊಳ್ಳಬೇಕು ಎಂದು ಶಾಸನವನ್ನು ಮಾಡಿತ್ತು ಆದರೆ ಅನೇಕ ಪೋಷಕರು ಒತ್ತಾಯ ಮಾಡಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರಿಂದ ಈ ವರ್ಷ ಮಾತ್ರ 5 ವರ್ಷ 5
ತಿಂಗಳಾದ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಬಹುದು ಮುಂದಿನ ವರ್ಷದಿಂದ ಆರು ವರ್ಷ ಪೂರ್ಣವಾದ ಮಕ್ಕಳಿಗ ಮಾತ್ರ ಒಂದನೇ ತರಗತಿಯ ಶಾಲೆಗೆ ಸೇರಿಸಲು ಅವಕಾಶವಿದೆ.
ಈ ಹಿಂದೆ ತಜ್ಞರು ಈ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ತರಿಸಿಕೊಂಡು ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಆರು ವರ್ಷ ಪೂರ್ಣಗೊಳ್ಳಲೇಬೇಕು ಎಂಬ ಕಾನೂನು ತರಲು ಒತ್ತಾಯಿಸಿದರಿಂದ ಸರ್ಕಾರ ಈ ರೀತಿ ನಿಗದಿ ಮಾಡಿತ್ತು
ಆದರೆ ಪೋಷಕರ ಒತ್ತಾಯದ ಮೇರೆಗೆ ಸರ್ಕಾರ ಈ ಕಾನೂನನ್ನು ಮರುಪರಿಶೀಲನೆ ಮಾಡಿ ಈ ವರ್ಷಕ್ಕೆ ಮಾತ್ರ ಸಡಿಲಗೊಳಿಸಲಾಗಿದೆ.