ಚಿಣ್ಣರ ಚೆಲುವು ಮಕ್ಕಳ ಬೇಸಿಗೆ ರಂಗ ಶಿಬಿರಕ್ಕೆ ಚಾಲನೆ

Drama Drama

Posted on 13-04-2025 |

Share: Facebook | X | Whatsapp | Instagram


ಚಿಣ್ಣರ ಚೆಲುವು ಮಕ್ಕಳ ಬೇಸಿಗೆ ರಂಗ ಶಿಬಿರಕ್ಕೆ ಚಾಲನೆ

ಚಿಣ್ಣರ ಚೆಲುವು ಮಕ್ಕಳ ಬೇಸಿಗೆ ರಂಗ ಶಿಬಿರಕ್ಕೆ ಚಾಲನೆ 

ನೀನಾಸಂ ಅಜಯ್ ರವರ Ask ಚೆಲುವರಂಗ ವತಿಯಿಂದ ಮೂರನೇ ಬಾರಿ ಮಕ್ಕಳ ಬೇಸಿಗೆ ರಂಗ ಶಿಬಿರವನ್ನು ಶಿವಮೊಗ್ಗದ ಸಿಟಿ ಕ್ಲಬ್ ಹಿಂಭಾಗದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಏಪ್ರಿಲ್ 13 ರಿಂದ ಮೇ 5. ರವರೆಗೆ  ನಡೆಯಲಿದೆ ಈ ಶಿಬಿರದಲ್ಲಿ ಕಲೆ , ನಾಟಕ, ಸಾಹಿತ್ಯ, ಪ್ರವಾಸ ವನ್ನು ಹಮ್ಮಿಕೊಂಡಿದ್ದಾರೆ

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಸವಿತಾ ನಾಗಭೂಷಣ್ ಅವರು  ನೆರವೇರಿಸಿ ಅಂದಿನ ಕಾಲದಲ್ಲಿ ಮಕ್ಕಳು ರಜಾದಿನಗಳನ್ನು ಅಜ್ಜಿ ಮನೆಯಲ್ಲಿ ಕಳೆದಿದ್ದರು . ಆದರೆ ಇಂದಿನ ಮಕ್ಕಳಿಗೆ ಅಜ್ಜಿಯ ಮನೆಯ ನೆನಪು ಬೇಸಿಗೆ ಶಿಬಿರದಲ್ಲಿ ಕಲಿಸಲಾಗುತ್ತದೆ. ಮಕ್ಕಳಿಗೆ ಶಿಬಿರದಲ್ಲಿ ಕನ್ನಡ ಮಾತನಾಡುವುದನ್ನು ಕಲಿಸಬೇಕು. ಕನ್ನಡ ಬರೆಯುವುದನ್ನು ಕಲಿಸಬೇಕು.  ಎಂದು ಮಾತನಾಡಿದರು. ಮತ್ತೋರ್ವ ಮುಖ್ಯ ಅತಿಥಿ ಕನ್ನಡ ಮೀಡಿಯಂ ಚಾನೆಲ್ ಸಂಪಾದಕರಾದ ಹೊನ್ನಾಳಿ ಚಂದ್ರಶೇಖರ್ ಅವರು ಮಾತನಾಡಿ  ಶಿಬಿರವು ಮಕ್ಕಳ ಹೊಸತನವನ್ನು ಮತ್ತು ಸೃಜನಶೀಲತೆಯನ್ನ  ಹೆಚ್ಚಿಸುತ್ತದೆ. ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಬೇಸಿಗೆ ಶಿಬಿರ ಪ್ರಾರಂಭಿಸಿದ ರಂಗಾಯಣದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ ಬಗ್ಗೆ ನೆನಪು ಮಾಡಿಕೊಂಡು ರಂಗಭೂಮಿ ಕೆಲಸ ನಿರ್ವಹಿಸಿದ ಚನ್ನಕೇಶವರ ಬಗ್ಗೆ ನೆನಪಿಸಿಕೊಂಡರು. 

ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಗೋಪಿನಾಥ್ ರವರು, ರೋಟರಿ ವಿಜಯ್ ಕುಮಾರ್, ಕ್ರಾಂತಿಕಿಡಿ ಪತ್ರಿಕೆ ಸಂಪಾದಕರಾದ ಗಣೇಶ್ ಬಿಳಿಗಿ ಮತ್ತು ಅಜಯ ನೀನಾಸಂ ಉಪಸ್ಥಿತರಿದ್ದರು. 

ಕಾರ್ಯಕ್ರಮದ ನಂತರ ಅಕ್ಷತಾ ಪಾಂಡವಪುರ ರವರ ಲೀಕ್ ಔಟ್ ನಾಟಕ ಪ್ರದರ್ಶನ ಪ್ರದರ್ಶಿಸಲಾಯಿತು

Search