Posted on 12-04-2025 |
Share: Facebook | X | Whatsapp | Instagram
ಹಿಂದುಳಿದ ವರ್ಗಗಳ ಆಯೋಗದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು. ಕಾಂತರಾಜು
ಶಿವಮೊಗ್ಗ ಏ 12 ಹಿಂದುಳಿದ ವರ್ಗದ ಆಯೋಗದಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ ಅದು ಸೋರಿಕೆಯಾಗಿಲ್ಲ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಮಾಜಿ ಅಧ್ಯಕ್ಷ ಕಾಂತರಾಜು ಹೇಳಿದರು.
ಅವರು ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕೇಂದ್ರದಲ್ಲಿ ಮಂಡಲ್ ಆಯೋಗದ ಅನುಸಾರ 57% ಹಿಂದುಳಿದ ವರ್ಗಕ್ಕೆ ಮೀಸಲಾತಿ ಕೊಡಬೇಕು.ಎಂದಿದೆ . ಆದರೆ ಈಗ 32%ಮೀಸಲಾತಿ ಹಿಂದುಳಿದ ವರ್ಗಕ್ಕೆ ಇದೆ.
ಸಂವಿಧಾನದಲ್ಲಿ ಇಷ್ಟೇ ಮೀಸಲಾತಿ ಕೊಡಬೇಕು ಎಂದು ಹೇಳಿಲ್ಲ.ಆದರೆ ನ್ಯಾಯಾಲಯ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡಬಾರದು ಎಂದು ನಿರ್ಧರಿಸಿದೆ.
ಸಂವಿಧಾನ ಬಂದು 70ವರ್ಷ ಆದರೂ ಮೀಸಲಾತಿ ಬೇಕೇ ಎಂಬ ಚರ್ಚೆ ಇದೆ.ಆದರೆ 1993ರವರೆಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಿಲ್ಲ.ಈಗ 30ವರ್ಷದಿಂದ ಮೀಸಲಾತಿ ಸಿಕ್ಕಿದೆ.ಆದರೆ ಅದು ಕೇವಲ ಉದ್ಯೋಗ ದಲ್ಲಿ ಮಾತ್ರ ಉಳಿದ ಕ್ಷೇತ್ರ ಗಳಲ್ಲಿ ಮೀಸಲಾತಿ ಸಿಕ್ಕಿಲ್ಲ.ವಿದ್ಯಾಭ್ಯಾಸದಲ್ಲಿ ಮತ್ತಿತರ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಬೇಕಾಗಿದೆ.ಎಂದರು.
ವರದಿ ತಯಾರಿಸುವಾಗ ಸರ್ಕಾರದಿಂದ ಯಾವುದೇ ಹಸ್ತಕ್ಷೇಪ ಆಗಿಲ್ಲ.ಎಂದರು
ವೇದಿಕೆಯಲ್ಲಿ ವಿ.ರಾಜು ಧರ್ಮರಾಜ್ ಪ್ರೊ.ರಾಚಪ್ಪ, ನಟರಾಜ್ ಹಿಂದುಳಿದ ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು.