Posted on 09-04-2025 |
Share: Facebook | X | Whatsapp | Instagram
ಕೇಂದ್ರ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಶಿಕಾರಿಪುರ ಕಾಂಗ್ರೆಸ್ ನಿಂದ ಹೋರಾಟ
ಶಿಕಾರಿಪುರ ತಾಲೂಕ್ ಯುವ ಕಾಂಗ್ರೆಸ್ ಘಟಕ ಶಿಕಾರಿಪುರ ಶಿರಳಕೊಪ್ಪ ಬ್ಲಾಕ್ ಘಟಕದಿಂದ ಕೇಂದ್ರ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ತೀವ್ರ ಪ್ರತಿಭಟನೆ ಹೋರಾಟ ದೊಂದಿಗೆ ಮಾನ್ಯ ತಹಸಿಲ್ದಾರ್ ರವರಿಗೆ ಮನವಿ ಸಲ್ಲಿಸಿ ತಹಸಿಲ್ದಾರ್ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಗಳು ಭಾರತ ಸರ್ಕಾರ ನವದೆಹಲಿ ಇವರಿಗೆ ಮನವಿ ಸಲ್ಲಿಸಲಾಯಿತು . ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜನಸಾಮಾನ್ಯರ ಮೇಲೆ ಗದ ಪ್ರಹಾರ ನಡೆಸುತ್ತಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಜನ ವಿರೋಧಿ ನೀತಿಯನ್ನು ಶಿಕಾರಿಪುರ ತಾಲೂಕು ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ ಎಲ್ ಪಿ ಜಿ ಸಿಲಿಂಡರ್ ಗ್ಯಾಸ್ ಪೆಟ್ರೋಲ್ ಡೀಸೆಲ್ ರೈತರಿಗೆ ರಸಗೊಬ್ಬರ ಬೆಲೆ ಏರಿಕೆ ಹೈವೇಯಲ್ಲಿ ಟೋಲ್ ಟ್ಯಾಕ್ಸ್ ಏರಿಕೆ ಪ್ರತಿಯೊಂದು ಆಹಾರ ಪದಾರ್ಥಕ್ಕೂ ಜಿಎಸ್‌ಟಿ ಆರೋಗ್ಯವೇ ಜೀವ ವಿಮೆಗೂ ಜೆಎಸ್‌ಟಿ ಔಷಧಿಗಳ ಬೆಲೆ ಏರಿಕೆ ಅಬಕಾರಿ ಶುಲ್ಕ ಸಿ ಏನ್ ಜಿ ಬೆಲೆ ಏರಿಕೆ ಹಣದುಬ್ಬರ ಹಾಗೂ ನಿರುದ್ಯೋಗದಿಂದ ಬಳಲುತ್ತಿರುವ ಜನಸಾಮಾನ್ಯ ರೈತರು ದಿನಗೂಲಿ ಕಾರ್ಮಿಕರು ವಿದ್ಯಾರ್ಥಿಗಳು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಭಾರಿ ಹೊರೆಯಾಗಿದೆ ಜನ ಜೀವನ ಸರಳಗೊಳಿಸುವ ಕೆಲಸವನ್ನಾಗಲಿ ಕೇಂದ್ರ ಸರ್ಕಾರ ಮಾಡುತ್ತಿಲ್ಲ ಬದಲಿಗೆ ಕೇವಲ ಆಶ್ವಾಸನೆ ಕೊಡುತ್ತಾ ಜನರಿಗೆ ಮಿತಿಮೀರಿದ ತೆರಿಗೆ ಮಾಡುವ ಮೂಲಕ ಸುಲಿಗೆ ಮಾಡಲು ಹೊರಟಿದೆ ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಲಿಂಡರ್ ಬೆಲೆ ರೂ.450 ಪೆಟ್ರೋಲ್ 70 ಬಂಗಾರ 25,000 ಹತ್ತು ಗ್ರಾಂ ಬೆಳ್ಳಿ 40,000 ಕೆಜಿ ರೈತರ ರಸಗೊಬ್ಬರ ಕೇವಲ 800 ರಿಂದ ಸಾವಿರ ರೂಪಾಯಿ ಹೀಗೆ ಅನೇಕ ಬೆಲೆಗಳು ಕಡಿಮೆ ದರದಲ್ಲಿ ಇತ್ತು ಬಿಜೆಪಿ ಸರ್ಕಾರ ಬಂದ ನಂತರ ಎಲ್ಲಾ ಬೆಲೆಗಳು ಮೂರು ನಾಲ್ಕು ಪಟ್ಟು ಜಾಸ್ತಿಯಾಗಿದೆ ಈ ಸರ್ಕಾರವನ್ನು ಕಿತ್ತುಗೆಯ ಬೇಕು ಎಂದು ರಾಷ್ಟ್ರಪತಿಯವರಿಗೆ ಮನವಿಯನ್ನ ಸಲ್ಲಿಸಿದರು ಈ ಸಂದರ್ಭದಲ್ಲಿ ಯುವ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಶಿವು ಶಿರಳಕೊಪ್ಪ ಬ್ಲಾಕ್ ಅಧ್ಯಕ್ಷರು ಕೆ ಡಿ ಪಿ ಸದಸ್ಯರು ರಾಘವೇಂದ್ರ ನಾಯಕ್ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ಭಂಡಾರಿ ಮಾಲತೇಶ್ ವಕೀಲರು ಕಾಂಗ್ರೆಸ್ ಮುಖಂಡರುನಿಂಗಪ್ಪ ಹಾಗೂ ಚರಣ್ ಬನ್ನೂರು ಶಿಕಾರಿಪುರ ತಾಲೂಕಿನ ಕಾಂಗ್ರೆಸ್ ಮುಖಂಡರು ಯುವ ಮುಖಂಡರು ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಈ ಪ್ರತಿಭಟನೆ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ತಹಶೀಲ್ದಾರ್ ಅವರಿಗೆ ಮನವಿ ಎಲ್ಲಾ ಸಲ್ಲಿಸಿ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಜನಾಕ್ರೋಶ ಹೋರಾಟ ಮಾಡುವ ಯಾವುದೇ ನೈತಿಕತೆ ಇಲ್ಲ ಎಂದು ರಾಘವೇಂದ್ರ ನಾಯಕ್ ಹಾಗೂ ಭಂಡಾರಿ ಮಾಲತೇಶ್ ತೀವ್ರವಾಗಿ ಖಂಡಿಸಿದ್ದಾರೆ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿರುವ ಸರ್ಕಾರ 5 ಗ್ಯಾರಂಟಿಗಳನ್ನು ಕೊಟ್ಟು ಜನಗಳ ಕಷ್ಟಕ್ಕೆ ಸ್ಪಂದಿಸುವ ಸರ್ಕಾರ ನೇರವಾಗಿ ಜನಗಳಿಗೆ ಅಕೌಂಟಿಗೆ ಹಣ ಜಮಾ ಮಾಡುವ ಸರ್ಕಾರವಾಗಿದೆ ಎಂದು ಹಾಗೂ ಪಕ್ಷಾತೀತ ಜಾತ್ಯಾತೀತವಾಗಿ ಜನಗಳ ಕಷ್ಟಕ್ಕೆ ಸ್ಪಂದಿಸುವ ಸರ್ಕಾರ ಇಂತಹ ಸರ್ಕಾರದ ವಿರುದ್ಧ ಹೋರಾಟ ತಕ್ಷಣ ಕೈ ಬಿಟ್ಟು ಕೇಂದ್ರ ಸರ್ಕಾರದ ಬೆಲೆ ಏರಿಕೆಯ ಹೊರೆಯನ್ನ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದರು,