ಥಿಯೇಟರ್ ನಿಂದ ಹಣ ಮಾಡಲು ಸಾಧ್ಯವಿಲ್ಲ ಪ್ರಕಾಶ್ ಬೆಳವಾಡಿ

Culture Literature

Posted on 09-04-2025 |

Share: Facebook | X | Whatsapp | Instagram


ಥಿಯೇಟರ್ ನಿಂದ ಹಣ ಮಾಡಲು ಸಾಧ್ಯವಿಲ್ಲ ಪ್ರಕಾಶ್ ಬೆಳವಾಡಿ

ಥಿಯೇಟರ್ ನಿಂದ ಹಣ ಮಾಡಲು ಸಾಧ್ಯವಿಲ್ಲ ಪ್ರಕಾಶ್ ಬೆಳವಾಡಿ 

ಶಿವಮೊಗ್ಗ ಏ .9  ಥಿಯೇಟರ್ ನಿಂದ ಹಣ ಮಾಡಲು ಸಾಧ್ಯವಿಲ್ಲ ನಾಟಕ ಮಾಡುವುದಕ್ಕೆ ರಂಗಮಂದಿರ ಸಿಗುವುದಿಲ್ಲ ಎಂದು ಹಿರಿಯ ರಂಗ ಹಾಗೂ ಚಿತ್ರ ನಟ ಪ್ರಕಾಶ್ ಬೆಳವಾಡಿ ಹೇಳಿದರು.

ಅವರು ಬಹುಮುಖಿ ಶಿವಮೊಗ್ಗದ 50ನೇ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಂದು ಅನೇಕ ಪತ್ರಕರ್ತರು ನಾಟಕ ಕಲೆಯನ್ನು ಹಾಳು ಮಾಡಲೆಂದು ವಿಮರ್ಶೆ ಬರೆಯುತ್ತಾರೆ.ಯಾವುದೇ ನಾಟಕ ಎಂಟು ಪ್ರದರ್ಶನ ಮಾಡಬೇಕೆಂದು ಯೋಚನೆ ಮಾಡಿದರೆ ಒಂದೇ ಪ್ರದರ್ಶನಕ್ಕೆ ಕಂಬಿ ಕೀಳುವಂತೆ ಮಾಡುತ್ತಾರೆ.ಚಲನ ಚಿತ್ರಕ್ಕೆ ಈ ಸಮಸ್ಯೆ ಇಲ್ಲ ಅದ್ಭುತ ಪ್ರಚಾರ ಮಾಡಿ ಮೂರೇ ದಿನಕ್ಕೆ ಕೋಟಿ ರೂಪಾಯಿ ಮಾಡುತ್ತಾರೆ.

ಕರ್ನಾಟಕದಲ್ಲಿ ಚಿತ್ರ ನಿರ್ಮಿಸುವುದಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ.ಆದರೆ ನಾಟಕ ಕಲೆ ಪ್ರದರ್ಶಿಸುವುದಕ್ಕೆ ಯಾವುದೇ ಪ್ರೋತ್ಸಾಹ ಇಲ್ಲ,ಆದರೆ ಟಿವಿ ಮನುಷ್ಯರನ್ನು ಚಿಕ್ಕದಾಗಿ ಸಿನಿಮಾ ದೊಡ್ಡದಾಗಿ ಆದರೆ ನಾಟಕ ಮನುಷ್ಯ ರನ್ನು ಆತ ಇರುವಂತೆ ನೈಜವಾಗಿ ತೋರಿಸುತ್ತದೆ,

ಬಾಂಬೆ ನಾಟಕ ಕಲಾವಿದರು ಪ್ರೇಕ್ಷಕರು ಗಲಾಟೆ ಮಾಡಿದರೆ ನಾಟಕವನ್ನು ನಿಲ್ಲಿಸುತ್ತಾರೆ.ಆದರೆ ಕರ್ನಾಟಕದ ನಾಟಕ ಟೀಂ ನವರು ಅಷ್ಟು ಪ್ರಬಲರಾಗಿಲ್ಲ.ಸಿನಿಮಾ ಸುಳ್ಳನ್ನು ಸತ್ಯವೆಂದು ಹೇಳುತ್ತಾ ನಮ್ಮನ್ನು ಭ್ರಮಾದೀನರನ್ನಾಗಿ ಮಾಡುತ್ತದೆ ಆದರೆ ನಾಟಕ ಸತ್ಯ ಮಾತ್ರ ಹೇಳಬೇಕಾಗುತ್ತದೆ.ಹೆಚ್ಚೆಂದರೆ ಪಾತ್ರಧಾರಿ ನಾನು ಕೃಷ್ಣ ನಾನು ರಾಮ ಎಂದು ಹೇಳಬಹುದು ಅದು ತೆರೆದಿಟ್ಟ ರಹಸ್ಯ.

ಸಿನಿಮಾ ಕೇವಲ ಕ್ಯಾಮೇರ ಮತ್ತು ಪ್ರೇಂಗಳ ಮೇಲೆ ನಿಂತಿದೆ.ಆದರೆ ನಾಟಕ ಪೂರ್ಣ ನೈಜ.ನಾಟಕಕ್ಕೆ ನಿರ್ದಿಷ್ಟವಾದ ವೇದಿಕೆ ಬೇಕಾಗಿಲ್ಲ ರಸ್ತೆ ಯಿಂದ ಹಿಡಿದು ಅರಮನೆಯ ವೇದಿಕೆಯಲ್ಲು ಮಾಡಬಹುದು.ನಾಟಕಕ್ಕೆ ತಂತ್ರಜ್ಞಾನ ಹೆಚ್ಚು ಉಪಯೋಗಿಸಿದರೆ ಖರ್ಚು ಹೆಚ್ಚಾಗುತ್ತದೆ.ನಾಟಕ ರಚನೆ ಮಾಡಿದವರು ಮುಖ್ಯ ವಾಗುತ್ತಾರೆ ಹೊರತು ನಾಟಕ ಮಾಡಿದವರು ಅಲ್ಲ.ನಾಟಕದಲ್ಲಿ ಬರುವ ಎಲ್ಲಾ ರಸಗಳು ಆನಂದ ಭಾವ ಉಂಟು ಮಾಡುತ್ತದೆ.ಅಳುವ ಸನ್ನಿವೇಶ ಕೂಡ ಎಲ್ಲರನ್ನೂ ಅಳಿಸಿದರೆ ಅದನ್ನೇ ರಸ ಎನ್ನಬೇಕು.ಇಂತಹ ರಸಮಯ ಸನ್ನಿವೇಶ ದಿಂದಲೇ ನಾಟಕ ಉಳಿದಿದೆ.ನಾಟಕದ ಪದಗಳು ನಮ್ಮ ಸಂಸ್ಕೃತಿ ಯಿಂದ ಬರುತ್ತದೆ.ನಾಟಕದ ಭಾಷೆ ಕನ್ನಡವಾಗಿಯೇ ಉಳಿಯುತ್ತದೆ.ಆದರೆ ಇಂದು ಚಿತ್ರಗಳು ಭಾಷೆಯಲ್ಲಿ ಕನ್ನಡತನ ಕಳೆದುಕೊಂಡಿದೆ.

ನಾಟಕ ಪ್ರೇಕ್ಷಕರ ನಾಡಿಮಿಡಿತ ಅನುಸರಿಸಿ ಪ್ರತಿ ಪ್ರದರ್ಶನ ದಲ್ಲು ಬದಲಾವಣೆ ಮಾಡುತ್ತದೆ.ಎಲ್ಲಿಯವರೆಗೆ ನಾಟಕ ನೋಡುವವರು  ಇರುತ್ತಾರೆಯೋ ಅಲ್ಲಿಯವರೆಗೆ ನಾಟಕ ಇರುತ್ತದೆ.ಎಂದರು.

ಭಾಷಣದ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತ ತಮ್ಮ ತಾಯಿ ಸಂಪ್ರದಾಯಸ್ಥ ಹೆಣ್ಣು ಮಗಳಾಗಿದ್ದು ನಮ್ಮ ಮನೆಯ ನಾಯಿಗೆ ಮನು ಎಂದು ಹೆಸರಿಟ್ಟಿದ್ದರು,ಕೇಳಿದರೆ ಮನು ಸ್ತ್ರೀ ವಿರೋಧಿ ಅದಕ್ಕಾಗಿ ಹೀಗಿಟ್ಟೆ ಹಾಗಾಗಿ ನಮ್ಮ ಮನೆ ಸಂಪ್ರದಾಯಸ್ಥ ಕುಟುಂಬವಾದರು ವೈಚಾರಿಕತೆಯ ಗೂಡಾಗಿತ್ತು ಎಂದಿದ್ದಾರೆ.ಸಿನಿಮಾಗಿಂತ ಸಾಹಿತ್ಯ ಶ್ರೇಷ್ಠ ಏಕೆಂದರೆ ಹೂವು ಎಂದು ಸಾಹಿತ್ಯ ಹೇಳಿದರೆ ನಮಗೆ ನೂರು ಕಲ್ಪನೆಯ ಹೂವು ನೆನಪಿಗೆ ಬರುತ್ತದೆ.ಆದರೆ ಸಿನಿಮಾ ಹೂವು ತೋರಿಸಿದರೆ ನಿರ್ದಿಷ್ಟವಾದ ಹೂ ಕಾಣುತ್ತದೆ.ಹಾಗಾಗಿ ಸಿನಿಮಾ ಎಂದೂ ಕಲ್ಪನೆ ಹಿಗ್ಗಿಸುವುದಿಲ್ಲ.ಎಂದರು.

ಬಹುಮುಖಿ ಸಂಚಾಲಕರಾದ ಡಾ.ಕೆ.ನಾಗಭೂಷಣ್ ರವರು ಕಾರ್ಯಕ್ರಮದಲ್ಲಿ ಎಲ್ಲರನ್ನೂ ಸ್ವಾಗತಿಸಿ ಕೊನೆಯಲ್ಲಿ ವಂದಿಸಿ ಕಾರ್ಯಕ್ರಮದ ಪೂರ್ಣ ನಿರ್ವಹಣೆ ಮಾಡಿದರು.

ವರದಿ ಡಾ.ಕೆ.ಜಿ.ವೆಂಕಟೇಶ್ ಕ್ರಾಂತಿಕಿಡಿ

Search