Posted on 09-04-2025 |
Share: Facebook | X | Whatsapp | Instagram
ಡಾ.ಕೇಶವ ಶರ್ಮಾ ಮತ್ತು ಡಾಪ್ರಭಾಕರನ್ ಕೃತಿಗಳ ಬಿಡುಗಡೆ
ಶಿವಮೊಗ್ಗ ಏ 9 ಇಲ್ಲಿನ ದೇಶಿಯ ವಿದ್ಯಾ ಶಾಲಾ ಸಮಿತಿ, ದೇಶಿಯ ವಿದ್ಯಾ ಶಾಲಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಕನ್ನಡ ಮತ್ತು ಇಂಗ್ಲಿಷ್ ವಿಭಾಗ ಹಾಗೂ ಸಮುದಾಯ ಶಿವಮೊಗ್ಗದ ವತಿಯಿಂದ ಇಂದು ಕೇಶವ ಶರ್ಮ ಮತ್ತು ಡಾ.ಪ್ರಭಾಕರನ್ ರವರು ಬರೆದಿರುವ ಪುಸ್ತಕ ಬಿಡುಗಡೆ ಮಾಡಲಾಯಿತು.
ಶರ್ಮಾ ರವರು ಪಾಲ್ ಮಿಶೆಲ್ ಪುಕೋ ತತ್ವಜ್ಞಾನ ರಾಜಕಾರಣ ಸಾಮಾಜಿಕ ಚಿಂತನೆಗಳು, ಹಾಗೂ ತಾತ್ವಿಕ ನಿಲುವುಗಳು ಆಂಟೋನಿಯೊ ಗ್ರಾಮ್ಷಿ ವಿಜ್ಞಾನ ತಂತ್ರಜ್ಞಾನ ತತ್ವಜ್ಞಾನ ಸಂಸ್ಕೃತಿ ಚರಿತ್ರೆ ಮತ್ತು ಪರಿಕಲ್ಪನೆ ಗಳು ಕೆ.ಪ್ರಭಾಕರನ್ ಬರೆದಿರುವ ಇಎಂಎಸ್ ನಂಬೂದಿರಿ ಪಾಡ್ ಪಿ.ಗೋವಿಂದ ಪಿಳ್ಳೈಬರೆದಿರುವ ಗ್ರಾಮ್ಷಿಯ ಚಿಂತನೆಗಳು ಪುಸ್ತಕದ ಕನ್ನಡ ಅನುವಾದ ಬಿಡುಗಡೆ ಮಾಡಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವಿಎಸ್ ಅಧ್ಯಕ್ಷರಾದ ಕೊಳಲೆ ರುದ್ರಪ್ಪ ಗೌಡ ರವರು ವಹಿಸಿದ್ದು ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ಇಂದು ಕೃತಿಗಳ ಓದುಗರ ಸಂಖ್ಯೆ ಕಡಿಮೆಯಾಗಿದೆ, ಇಂತಹ ಸಂದರ್ಭದಲ್ಲಿ ಡಾ.ಕೇಶವ ಶರ್ಮರಂತವರು ಗ್ರಾಮ್ಸಿಯಂತಹವರ ಬರವಣಿಗೆಯನ್ನು ಕನ್ನಡಕ್ಕೆ ತಂದಿರುವುದು ಒಳ್ಳೆಯದು ಪುಸ್ತಕವನ್ನು ಕೊಂಡು ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎಂದರು .ಈ ಪುಸ್ತಕದಲ್ಲಿ ಸಂಸ್ಕೃತಿ ಬಗ್ಗೆ ಅತ್ಯಂತ ವೈಚಾರಿಕ ವಿಷಯ ಇದೆ ಎಂದರು.
ಗ್ರಾಮ್ಷಿಯ ಬಗ್ಗೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೆ.ಫಣಿರಾಜ್ ರವರು ಯಜಮಾನಿಕೆ ಆಳ್ವಿಕೆಯ ಬಗ್ಗೆ ಗ್ರಾಮ್ಷಿ ತಿಳಿಸಿದ್ದಾನೆ.ಆದರೆ ಬಲ ಪ್ರಯೋಗ ಯಾವಾಗಲೂ ಸಾದ್ಯವಿಲ್ಲ ಅದರ ಬದಲು ಸಹಮತಿಯ ಆಳ್ವಿಕೆ ಯಿಂದ ಅಧಿಕಾರ ಚಲಾಯಿಸುತ್ತಾರೆ.ಇಂದು ಅಧಿಕಾರಕ್ಕೆ ಬಂದ ಎಲ್ಲರೂ ಈ ರೀತಿ ಯಲ್ಲಿ ಸಂಸ್ಕೃತಿಯ ನ್ನು ಅರ್ಥೈಸಿಕೊಂಡು ಅಧಿಕಾರ ನಡೆಸುತ್ತಾರೆ.ಎಂದರು.
ಡಾ.ಕೆ.ನಾಗಭೂಷಣ್ ಮಾತನಾಡಿ ಕೆಲವು ವಿಷಯಗಳನ್ನು ನಾವು ಪ್ರಶ್ನಿಸದೇ ಒಪ್ಪಿಕೊಳ್ಳುತ್ತೇವೆ.ಅಡಿಗೆ ಮನೆ ಎಂದ ಕೂಡಲೇ ಹೆಣ್ಣು ನೆನಪಾಗುತ್ತಾಳೆ ಹಾಗೇ ನಮಗೆ ಗೊತ್ತಿಲ್ಲದೆ ನಿರ್ದಿಷ್ಟ ವಿಷಯದ ಬಗ್ಗೆ ಈ ನೀತಿ ಶಾಶ್ವತ ಎಂದು ಭಾವಿಸುತ್ತೇವೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಚಿಂತಕ ಕೆ.ಫಣಿರಾಜ್, ಸ್ವಾಗತವನ್ನು ಡಾ.ಉಮೇಶ್ ಅಂಗಡಿ ವಂದನಾರ್ಪಣೆಯನ್ನು ಮಂಜುನಾಥ್ ಎಸ್.ಕೆ.ಮಾಡಿದರು.ಪುಸ್ತಕ ಬಿಡುಗಡೆಯನ್ನು ಚಿಂತಕ ಡಾ.ಕೆ.ಪ್ರಕಾಶ್,ಆಶಯ ಭಾಷಣವನ್ನು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಅವಿನಾಶ್ ಮಾಡಿದರು.ವೇದಿಕೆಯಲ್ಲಿ ಪ್ರಾಂಶುಪಾಲ ಡಾ.ಎಂ.ವೆಂಕಟೇಶ್ ಪುಸ್ತಕ ಪ್ರಕಾಶಕರಾದ ಸೃಷ್ಟಿ ನಾಗೇಶ್ ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್ ಸಹ ಕಾರ್ಯದರ್ಶಿಒಈಕಂ ಡಾ.ಎ.ಸತೀಶ್ ಕುಮಾರ್ ಶೆಟ್ಟಿ ಕೋಶಾಧ್ಯಕ್ಷ ಬಿ.ಗೋಪಿನಾಥ್ ಮತ್ತು ಕನ್ನಡ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು ವಹಿಸಿದ್ದರು.
ವರದಿ ಡಾ.ಕೆ.ಜಿ.ವೆಂಕಟೇಶ್