ಸುದ್ಧಿಗಳ ಗುಚ್ಛ

Politics State

Posted on 04-04-2025 |

Share: Facebook | X | Whatsapp | Instagram


ಸುದ್ಧಿಗಳ ಗುಚ್ಛ

 ಭಾರತದ ಸಿಗಡಿಗೆ ಪೆಟ್ಟು 

ಶಿವಮೊಗ್ಗ ಏ 4.  ಪ್ರಧಾನಮಂತ್ರಿ ಮೋದಿಜಿ ಅವರ ಸ್ನೇಹಿತನಾದ ಟ್ರಂಪ್ ರವರು ಅಮೆರಿಕದ ಅಧ್ಯಕ್ಷರಾದ ಮೇಲೆ ತಮ್ಮ ಸ್ನೇಹವನ್ನು ಧಿಕ್ಕರಿಸಿ ಭಾರತದ ಸರಕುಗಳ ಮೇಲೆ ಶೇಕಡ 27 ರಷ್ಟು ತೆರಿಗೆಯನ್ನು ಹಾಕಿದ್ದಾರೆ. ಅಂದರೆ ಭಾರತದ ನೂರು ರೂಪಾಯಿ ಬೆಲೆಯ ವಸ್ತುವನ್ನು ಅವರಿಗೆ ಕೊಡಬೇಕೆಂದರೆ 27 ತೆರಿಗೆಯನ್ನು ಅಮೆರಿಕಕ್ಕೆ ಕಟ್ಟಬೇಕು. 

     ಉತ್ತರ ಭಾರತದ ವಸ್ತುಗಳಿಗಿಂತ ಹೆಚ್ಚಾಗಿ ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕ ತಮಿಳುನಾಡು ಕೇರಳ ಆಂಧ್ರಪ್ರದೇಶದ ಸಿಗಡಿ (ಚಟ್ಲೆ) ಅಮೇರಿಕಕ್ಕೆ ಭಾರತದಲ್ಲಿ ಬೆಳೆದ ಶೇಕಡ 40ರಷ್ಟು ಅಮೆರಿಕಕ್ಕೆ ರಪ್ತಾಗುತ್ತಿತ್ತು. ಆದರೆ ಈಗ ಅದರ ಮೇಲೆ 27 ರಷ್ಟು ತೆರಿಗೆ ಹಾಕಿದ್ದರಿಂದ ಸಿಗಡಿ ಉದ್ಯಮಕ್ಕೆ ಆ ಮೂಲಕ ದಕ್ಷಿಣ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ ಕಳೆದ ವರ್ಷ 2023-24ರಲ್ಲಿ ಭಾರತವು ಕೇವಲ ಸಿಗಡಿ ಮಾರಾಟ ಮಾಡಿ 21 700 ಕೋಟಿ ಹಣವನ್ನು ಗಳಿಸಿತ್ತು. ಅದೇ ರೀತಿ ಭಾರತದ ಜಮಖಾನಗಳನ್ನು ಮಾರಾಟ ಮಾಡಿ 17000 ಕೋಟಿ ಹಣ ಪಡೆದಿತ್ತು ಈಗ ಈ ಎರಡು ಉದ್ಯಮಕ್ಕೆ ಮಾರಕವಾದ ಹೊಡೆತ ಬಿದ್ದಿದೆ.


ರಾಹುಲ್ ಗಾಂಧಿ ಪ್ರಶ್ನೆಗೆ ತತ್ತರಿಸಿದ ಲೋಕಸಭೆ 

ಶಿವಮೊಗ್ಗ ಏ 3 

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ನಮ್ಮ ಮಿತ್ರ ದೇಶ ಅಂದುಕೊಂಡ ಅಮೇರಿಕಾ ನಮ್ಮ ದೇಶದ ವಸ್ತುಗಳ ಮೇಲೆ ಶೇಕಡ 27 ರಷ್ಟು ತೆರಿಗೆಯನ್ನು ಹೆಚ್ಚು ಮಾಡಿದೆ, ಇದರಿಂದ ಭಾರತದ ಆರ್ಥಿಕತೆ ಹಾಳಾಗುತ್ತದೆ ನಮ್ಮ ವಾಹನ ಉದ್ಯಮ ಔಷಧ ಉದ್ಯಮ ಕೃಷಿ ಮೀನುಗಾರಿಕೆಗೆ ಸಾಕಷ್ಟು ಪೆಟ್ಟು ಬೀಳುತ್ತದೆ. ತಾವು ಪ್ರತಿ ಸುಂಕವನ್ನು ವಿಧಿಸುವ ವಿಚಾರವನ್ನು ಮಾಡಿದ್ದೀರಾ ತಿಳಿಸಿ, 

ಹಾಗೆ ಭಾರತದ ವಿದೇಶಾಂಗ ನೀತಿಯು ಸಂಪೂರ್ಣ ದಾರಿ ತಪ್ಪಿದೆ ಕೇಂದ್ರ ಸರ್ಕಾರದ ರಕ್ಷಣಾ ಮಂತ್ರಿ ಚೀನಾ ದೇಶದ ಜೊತೆ ಸ್ನೇಹದಿಂದ ಇದ್ದು ಅಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ್ದಾರೆ ಆದರೆ ಭಾರತದ 4000 ಚದುರ ಕಿಲೋಮೀಟರ್ ಪ್ರದೇಶವನ್ನು ಚೀನಾ ದೇಶ ಆಕ್ರಮಿಸಿಕೊಳ್ಳುವುದಕ್ಕೆ ಬಿಟ್ಟಿದ್ದೀರಿ ಗಾಲ್ವನ್ ಕಣಿವೆಯಲ್ಲಿ ನಡೆದ ದಾಳಿ ವೇಳೆ ಚೀನಾ ಭಾರತದ 20 ಯೋಧರನ್ನು ಕೊಂದು ಹಾಕಿದೆ. ನಮ್ಮ ಯೋಧರ ಸಾವಿಗೆ ನಮ್ಮ ಪ್ರದೇಶದ ಭೂಮಿಗೆ ಯಾವುದೇ ಬೆಲೆ ಇಲ್ಲವೇ ಕೇಂದ್ರ ಸರ್ಕಾರ ತಕ್ಷಣ ಈ ಬಗ್ಗೆ ಭಾರತದ ಜನತೆಗೆ ತಿಳಿಸಬೇಕು ಮತ್ತು ಅಮೆರಿಕ ಹಾಗೂ ಚೀನಾದ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳುತ್ತದೆ ಎಂದು ಉತ್ತರಿಸಬೇಕು ಎಂದರು ಸದ್ಯಕ್ಕೆ ಕೇಂದ್ರ ಸರ್ಕಾರ ಉತ್ತರವನ್ನು ನೀಡಿಲ್ಲ.


4 ವರ್ಷದ ಹಿಂದೆ ಕೊಲೆಯಾದ ಮಹಿಳೆ ಪತ್ತೆ 

ಶಿವಮೊಗ್ಗ ಏ 4. 2021ರ ಜುಲೈನಲ್ಲಿ ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ನಿವಾಸಿ ಮಲ್ಲಿಗೆ ಎಂಬುವವಳು ಕೊಲೆಯಾಗಿದ್ದಾಳೆ. ಈ ಕೊಲೆಯನ್ನು ಆಕೆಯ ಗಂಡ ಗಣೇಶನೇ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿ ಮೈಸೂರು ಜಿಲ್ಲೆ ಬೆಟ್ಟದಪುರದ ಶಾನುಭೋಗನಹಳ್ಳಿಯ ಕಾಲುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯ ಶವವನ್ನು ಮಲ್ಲಿಗೆಯದೆ ಎಂದು ಆಕೆಯ ತಾಯಿ ಗುರುತಿಸಿದ್ದರು ಮತ್ತು ಡಿಎನ್ಎ ವರದಿ ಬರುವ ಮುನ್ನವೇ ಆಕೆಯ ಗಂಡ ಸುರೇಶನಿಗೆ ಪೊಲೀಸರು ತಮ್ಮ ಲಾಠಿಯ ರುಚಿಯನ್ನು ತೋರಿಸಿ ಆತ ನ್ಯಾಯಾಲಯದಲ್ಲಿ ತಾನೇ ಕೊಲೆ ಮಾಡಿದೆ ಎಂದು ಒಪ್ಪಿಕೊಂಡು ಜೈಲು ಪಾಲಾಗಿದ್ದನು. 

ಈ ಮಹಿಳೆಯು 2025ರ ಏಪ್ರಿಲ್ 1 ರಂದು ಕುಶಾಲ್ ನಗರ ಹೋಟೆಲ್ ಒಂದರಲ್ಲಿ ಇದ್ದಿದ್ದನ್ನು ಗಮನಿಸಿದ ವ್ಯಕ್ತಿ ಒಬ್ಬರು ಪೊಲೀಸರಿಗೆ ವಿಷಯ ತಿಳಿಸಿದರು. ಆ ಸಮಯದಲ್ಲಿ ಮಲ್ಲಿಗೆ ತನ್ನ ಪ್ರಿಯಕರ ಗಣೇಶನೊಂದಿಗೆ ಕೆಎಸ್ಆರ್ಟಿಸಿ ಬಸ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಕ್ಕೆ ತೆರಳುತ್ತಿದ್ದಳು ಮಡಿಕೇರಿಯಲ್ಲಿ ಬಸ್ಸನ್ನು ನಿಲ್ಲಿಸಿ ಪೊಲೀಸರು ಆಕೆಯನ್ನು ಮತ್ತು ಅವರ ಪ್ರಿಯತಮನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಆಕೆ ನಾಲ್ಕು ವರ್ಷದಿಂದ ಮಡಿಕೇರಿ ಬಳಿಯ ಶೆಟ್ಟಿಹಳ್ಳಿ ಎಂಬಲ್ಲಿ ವಾಸವಾಗಿದ್ದಳೆಂದು ತಿಳಿದು ಬಂದಿದೆ. 

ಧರ್ಮಸ್ಥಳದ ಸೌಜನ್ಯ ಕೊಲೆಯಾಗಿ 13 ವರ್ಷದ ನಂತರ ಅವಳನ್ನು ಕೊಲೆ ಮಾಡಿದವನು ನಿಜವಾದ ಕೊಲೆಗಾರ ಅಲ್ಲ ಎಂದು ಪತ್ತೆಯಾಯಿತು. ಅದರಂತೆ ಈ ಕೇಸ್ ನಲ್ಲೂ ಕೂಡ ಅವಳು ಬದುಕಿದ್ದಾಗಲೇ ಗಂಡನ ಕೈಲಿ ತಾನೇ ಕೊಲೆ ಮಾಡಿದೆ ಎಂದು ತಿಳಿಸಿ ಜೈಲಿಗೆ ಕಳುಹಿಸಲಾಯಿತು. ಪೊಲೀಸರ ಲಾಠಿಗೆ ಇದ್ದ ಬೆಲೆ ಕರ್ತವ್ಯಕ್ಕೆ ಇಲ್ಲವಾಗಿದೆ.


4 ತಿಂಗಳಲ್ಲಿ 50 ಕೆಜಿ ಚಿನ್ನ ಚಿತ್ರ ನಟಿಯಿಂದ ಕಳ್ಳ ಸಾಗಣೆ

 ಶಿವಮೊಗ್ಗ ಏಪ್ರಿಲ್ 4  ಬೆಂಗಳೂರಿನ ಚಿತ್ರನಟಿ ರನ್ಯಾ ರಾವ್ ಅವರು ದುಬೈ ನಿಂದ ಒಟ್ಟು ಕಳ್ಳತನ ಮಾಡಿದ ಚಿನ್ನ 49 .6 ಕೆ.ಜಿ ಎಂದು ತಿಳಿದು ಬಂದಿದೆ. ಆ ಚಿನ್ನವನ್ನು ಬೆಂಗಳೂರಿನಲ್ಲಿ ಆಕೆಯ ಸ್ನೇಹಿತ ಸಾಹಿಲ್ ಸಕಾರಿಯ ಎಂಬಾತ 40.7ಕೋಟಿಗೆ ಮಾರಾಟ ಮಾಡಿ 38.35ಕೋಟಿ ಹಣವನ್ನು ಹವಾಲ ಮೂಲಕ ದುಬೈಗೆ ಕಳುಹಿಸಿಕೊಟ್ಟು 1.72 ಕೋಟಿ ರನ್ಯಾಗೆ ನೀಡಿದ್ದಾನೆ.

2024 ನವೆಂಬರ್ ನಿಂದ 2025 ಫೆಬ್ರವರಿ ಒಳಗೆ ಈಕೆ ನವೆಂಬರ್ ನಲ್ಲಿ 8.9 ಕೆ.ಜಿ.ಡಿಸೆಂಬರ್ ನಲ್ಲಿ 12 .6 ಕೆ.ಜಿ. ಜನವರಿಯಲ್ಲಿ 14.5 ಕೆಜಿ ಫೆಬ್ರವರಿಯಲ್ಲಿ 13.4 ಕೆ.ಜಿ. ಚಿನ್ನವನ್ನು ದುಬೈನಿಂದ ಬೆಂಗಳೂರಿಗೆ ತಂದಿದ್ದಾಳೆ.

     ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪೂರ್ಣ ಉಸ್ತುವಾರಿ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಗೆ ಸೇರಿದ್ದು ಹೀಗೆ ಅರ್ಧ ಕ್ವಿಂಟಲ್ ಚಿನ್ನವನ್ನು ದುಬೈ ನಿಂದ ಭಾರತಕ್ಕೆ ತಂದರು ರಮ್ಯಾ ರಾವ್ ಒಮ್ಮೆಯೂ ಸಿಕ್ಕಿರಲಿಲ್ಲ, ಎಂದರೆ ಭಾರತದ ರಕ್ಷಣಾ ವ್ಯವಸ್ಥೆ ಅಂತರಾಷ್ಟ್ರೀಯ ವಿಮಾನಯಾನದ ವ್ಯವಸ್ಥೆ ಎಷ್ಟು ಹಾಳಾಗಿರಬೇಕು ಎಂದು ಸಾಮಾನ್ಯ ಜನರು ಕೇಂದ್ರದತ್ತ ನೋಡುವಂತಾಗಿದೆ.


ಪ್ರಜ್ವಲ್ ರೇವಣ್ಣನ ಅರ್ಜಿ ವಜಾ 

ಶಿವಮೊಗ್ಗ ಏ 4 ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನವರು ಸುಮಾರು 50ಕ್ಕೂ ಹೆಚ್ಚು ಮಹಿಳೆಯರ ಮೇಲೆ ವರ್ಷಗಟ್ಟಲೆ ಅತ್ಯಾಚಾರ ಮಾಡಿ ಅದನ್ನು ತಾವೇ ವಿಡಿಯೋ ರೆಕಾರ್ಡ್ ಮಾಡಿಕೊಂಡು ಕೊನೆಗೆ ಸಿಕ್ಕಿ ಬಿದ್ದಿದ್ದರು 

ಈ ಬಗ್ಗೆ ಸಂತ್ರಸ್ತ ಮಹಿಳೆಯರ ಪರವಾಗಿ ಕೇಸನ್ನು ದಾಖಲಿಸಿಕೊಂಡ ವಿಶೇಷ ನ್ಯಾಯಾಲಯ ಅವರನ್ನು ವಿಚಾರಣೆಗೆ ಒಳಪಡಿಸಿ ಆತನನ್ನು ಅತ್ಯಾಚಾರಿ ಎಂದು ದಾಖಲೆಗಳಿಂದ ತೀರ್ಮಾನಿಸಿ ಅಂತಿಮ ತೀರ್ಪನ್ನು ನೀಡುವುದನ್ನು ಕಾಯ್ದಿರಿಸಲಾಗಿದೆ.

ಆದರೆ ಪ್ರಜ್ವಲ್ ರೇವಣ್ಣ ತನ್ನನ್ನು ಈ ಪ್ರಕರಣದಿಂದ ಕುಲಾಶಯಗೊಳಿಸಬೇಕು ಎಂದು ಘನ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದು ಇವರ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತಿರಸ್ಕರಿಸಿದ್ದಾರೆ


ಶಿವಮೊಗ್ಗ ತಾಲೂಕಿನಲ್ಲಿ ಶರಾವತಿ ಸಂತ್ರಸ್ಥರ ಭೂಮಿ ಸರ್ವೆ ಕಾರ್ಯ ಪ್ರಾರಂಭ.

ಶಿವಮೊಗ್ಗ ಏ5  ಶರಾವತಿ ಮುಳುಗಡೆ ಸಂತ್ರಸ್ಥರ ಪುನರ್ ವಸತಿಗೆ ಅರಣ್ಯ ಜಮೀನು ರಿಸರ್ವ್ ಮಾಡುವ ಸಂಬಂಧ ಜಂಟಿ ಸ್ಥಳ ಪರಿಶೀಲನೆಗೆ ಕಂದಾಯ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತಾಲೂಕಿನ ಹಳ್ಳಿಗಳಲ್ಲಿ ಸರ್ವೆ ಕಾರ್ಯವನ್ನು ಇಂದಿನಿಂದ ಕೈಗೊಳ್ಳುತ್ತದೆ. 

ಚೋರಡಿ ಸರ್ವೆ ನಂಬರ್ 117 ಕೋಣೆ ಹೊಸೂರು ಸರ್ವೇ ನಂಬರ್ 22. 23 ತುಪ್ಪುರು 19 44 45 ಕುಂಸಿ 21 ಸಿಂಗನಹಳ್ಳಿ 61 ಕೊರಗಿ 30 ಶಾಂತಿ ಕೆರೆ 1 ಒಡೆಯರ ಕೊಪ್ಪ 1 ಶೆಟ್ಟಿಕೆರೆ 1 ಮಂಜರಿಕೊಪ್ಪ 7 26 27 28 37 ಅನುಪಿನ ಕಟ್ಟೆ 127 ಹನುಮಂತಪುರ 6 ಸೋಲೂರು 16 ದೊಡ್ಡಮತ್ಲಿ 16 ಆಡಿನ ಕೊಟ್ಟಿಗೆ 17 ಕೂಡಿ 31 32 33 34 ತಾವರೆಕೊಪ್ಪ 24 ಪುರದಾಳು 1 ಮಲೇಶಂಕರ ಎಸ್ಎಫ್ 1 ಶೆಟ್ಟಿಹಳ್ಳಿ 24 ಚಿತ್ರಶೆಟ್ಟಿಹಳ್ಳಿ 1 7 8 24 ಸರ್ವೆ ನಂಬರ್ ಗಳಲ್ಲಿ ಸರ್ವೆ ಕಾರ್ಯ ನಡೆಯುತ್ತದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಅನುಭೋಗದ ದಾಖಲೆಯನ್ನು ತೋರಿಸಿ ಅದರ ಆಧಾರದ ಮೇಲೆ ನಿಯಮಾನುಸಾರ ಸರ್ವೆ ಕಾರ್ಯ ಮಾಡಲು ಅವಕಾಶ ನೀಡಬೇಕೆಂದು ಶಿವಮೊಗ್ಗ ತಾಸಿಲ್ದಾರ ವಿ ಎಸ್ ರಾಜೀವ್ ಮನವಿ ಮಾಡಿದ್ದಾರೆ.

Search