Posted on 31-03-2025 |
Share: Facebook | X | Whatsapp | Instagram
ಶಿಕಾರಿಪುರದಲ್ಲಿ ಅದ್ದೂರಿಯಿಂದ ರಂಜಾನ್ ಆಚರಣೆ
ಶಿಕಾರಿಪುರ ಇಲ್ಲಿನ ಶಿರಾಳಕೊಪ್ಪ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಹಿಂದೂ ಮುಖಂಡರೊಂದಿಗೆ ಸಂಪೂರ್ಣ ಮುಸಲ್ಮಾನರು ತಮ್ಮಲ್ಲಿರುವ ಒಳಜಾತಿಯನ್ನು ಮರೆತು ಸಾಮೂಹಿಕವಾಗಿ ನಮಾಜನ್ನು ಆಚರಿಸಿ ತಮ್ಮ ಉಪವಾಸ ವೃತವನ್ನು ಈ ಹಬ್ಬವನ್ನು ಆಚರಿಸುವ ಮೂಲಕ ಕೈಬಿಟ್ಟರು. ಒಂದು ತಿಂಗಳು ಕಾಲ ಹಗಲಿಡಿ ಉಪವಾಸವಿದ್ದು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದು ದಿನಕ್ಕೆ ಐದು ಬಾರಿ ನಮಾಜನ್ನು ಸಲ್ಲಿಸುತ್ತಿದ್ದ ಮುಸಲ್ಮಾನರು ಇಂದು ಸಂಪೂರ್ಣ ಸ್ವಚ್ಛಗೊಳಿಸಲಾಗಿ ಶ್ವೇತ ವಸ್ತ್ರ ಮತ್ತು ಶ್ವೇತ ಟೊಪ್ಪಿಗೆಯನ್ನು ಧರಿಸಿ ಇಲ್ಲಿಗೆ ಆಗಮಿಸಿದರು ಸಾವಿರಾರು ಜನ ಸೇರಿದ್ದರಿಂದ ಈ ಮೈದಾನ ಭರ್ತಿ ಯಾಗಿ ಮೈದಾನದ ಹೊರಗೂ ಕೂಡ ಸಾವಿರಾರು ಜನ ಕುಳಿತು ತಮ್ಮ ಚಾದರ್ ಹಾಕಿಕೊಂಡು ಪಶ್ಚಿಮಾಭಿಮುಖವಾಗಿ ಮುಖ ಮಾಡಿ ನಮಾಜನ್ನು ಸಲ್ಲಿಸಿದರು.
ಹಿಂದೂ ಪ್ರಮುಖರಾದ ಗೋಣಿ ಮಾಲತೇಶ್ ಮತ್ತಿತರ ಅನೇಕ ಸಂಘಟನೆಯ ಪ್ರಮುಖರು ಈ ನಮಾಜಿನಲ್ಲಿ ಭಾಗವಹಿಸಿ ಹಿಂದೂ ಮತ್ತು ಮುಸಲ್ಮಾನರ ಐಕ್ಯತೆಯನ್ನು ಮತ್ತೊಮ್ಮೆ ಸಾರಿದರು.
ಡಿ.ಡಿ. ಶಿವಕುಮಾರ್ ವರದಿಗಾರರು ಶಿಕಾರಿಪುರ