Posted on 29-03-2025 |
Share: Facebook | X | Whatsapp | Instagram
ಶಿಕಾರಿಪುರ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಶಿರಾಳಕೊಪ್ಪ ಭಾಗದ ನೇರಲಗಿ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದು ತಾಲೂಕಿನ ಎಲ್ಲಾ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಮಾಜಿ ಕಾಡ ಅಧ್ಯಕ್ಷರು ನಗರದ ಮಹದೇವಪ್ಪನವರು ಶಿಕಾರಿಪುರ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ನಾಗರಾಜ್ ಗೌಡ ತಾಲೂಕ್ ಬ್ಲಾಕ್ ಅಧ್ಯಕ್ಷರು ಪಾರಿವಾಳ ಶಿವರಾಂ ಕೆಪಿಸಿಸಿ ಸದಸ್ಯರು ಗೋಣಿ ಮಾಲತೇಶ ಕೆಡಿಪಿ ಸದಸ್ಯರು ರಾಘವೇಂದ್ರ ನಾಯಕ ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷರು ಭಂಡಾರಿ ಮಾಲತೇಶ್ ಬಡಗಿ ಪಾಲಾಕ್ಷಪ್ಪ ಶಿಕಾರಿಪುರ ಪುರಸಭಾ ಸದಸ್ಯರು ಉಳ್ಳಿ ದರ್ಶನ್ ಶಿರಳಕೊಪ್ಪ ಬ್ಲಾಕ್ ಅಧ್ಯಕ್ಷರು ಶಿಕಾರಿಪುರ ತಾಲೂಕಿನ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಿತೈಷಿಗಳು ಅಭಿಮಾನಿಗಳು ಆಗಮಿಸಿದ್ದು ಈ ಸಂದರ್ಭದಲ್ಲಿ ನಾಗರಾಜ್ ಗೌಡ ರವರು ಏಕ ಪಕ್ಷಿಯವಾಗಿ ನಿರ್ಧಾರ ತೆಗೆದುಕೊಂಡು ಸ್ವಪಕ್ಷೀಯರಲ್ಲದವರಿಗೆ ಹಾಗೂ ತಮಗೆ ಬೇಕಾದವರಿಗೆ ಪ್ರಮುಖ ಹುದ್ದೆಗಳನ್ನು ಕೊಟ್ಟಿರುತ್ತಾರೆ ಸರ್ಕಾರದಲ್ಲಿ ನಾಮಿನಿ ವಿಚಾರವಾಗಿ ಬಿಜೆಪಿ ಕಾರ್ಯಕರ್ತರಿಗೆ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರಿಗೆ ನೀಡಿರುವ ಕಾರಣ ನಾಗರಾಜ್ ಗೌಡರ ವಿರುದ್ಧ \'ಆರ್ ಎಸ್ ಎಸ್ ನಾಗರಾಜ್ ಗೌಡ \' ದಿಕ್ಕಾರ ಎಂದು ಕೂಗಿದರು ಕಾಂಗ್ರೆಸ್ ಕಾರ್ಯಕರ್ತರು. ರೊಚ್ಚಿಗೆದ್ದ ಮುಖಂಡರು, ಕಾರ್ಯಕರ್ತರು ನಾಗರಾಜ್ ಗೌಡ ರವರ ಮೇಲೆ ಮಾತಿನ ಚಕಮಕಿ ಯೊಂದಿಗೆ ಕೈ ಮಿಲಾಯಿಸುವ ಮುಟ್ಟಕ್ಕೆ ಸಚಿವರ ಸಮ್ಮುಖದಲ್ಲೇ ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಗಲಾಟೆಯನ್ನು ಮಾಡಿದರು ಮಧ್ಯ ಪ್ರವೇಶ ಮಾಡಿದಾಗ ಸಚಿವರು ಜಿಲ್ಲಾ ಮುಖಂಡರು ಕಾರ್ಯಕರ್ತರನ್ನು ಮುಖಂಡರನ್ನು ಸಮಾಧಾನ ಪಡಿಸಿ ಮುಂದಿನ ದಿನಗಳಲ್ಲಿ ಎಲ್ಲಾ ಸರಿಪಡಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು ಮುಖಂಡರು ಕಾರ್ಯಕರ್ತರ ಕಿತ್ತಾಟದಿಂದ ತಾಲೂಕಿನ ಕಾಂಗ್ರೆಸ್ ಪಕ್ಷದ ಮತದಾರರು ಹಿತೈಷಿಗಳು ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ ಎಲ್ಲರೂ ಹೊಂದಿಕೊಂಡು ಹೋಗಬೇಕು ಎನ್ನುವುದೇ ಮತದಾರರ ಆಶಯವಾಗಿದೆ ಸ್ವಪಕ್ಷೀಯ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವುದು ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಒಡಕುಂಟಾಗುವ ಸೂಚನೆಯಾಗಿದೆ ನಂತರ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ತಾಲೂಕ್ ಪಂಚಾಯತ್ ಸ್ಥಳೀಯ ಚುನಾವಣೆ ಬಗ್ಗೆ ಚರ್ಚಿಸಲಾಯಿತು
ವರದಿ : ಶಿವಕುಮಾರ್, ವರದಿಗಾರರು ಶಿಕಾರಿಪುರ