ಕೆಳದಿ ರಾಜ್ಯದ ಆಡಳಿತ ದೇಶಕ್ಕೆ ಮಾದರಿಯಾಗಿದೆ ಡಾ. ಕೆ.ಜಿ .ವೆಂಕಟೇಶ್

Culture Literature

Posted on 28-03-2025 |

Share: Facebook | X | Whatsapp | Instagram


ಕೆಳದಿ ರಾಜ್ಯದ ಆಡಳಿತ ದೇಶಕ್ಕೆ ಮಾದರಿಯಾಗಿದೆ   ಡಾ. ಕೆ.ಜಿ .ವೆಂಕಟೇಶ್

ಶಿವಮೊಗ್ಗ ಮಾರ್ಚ್ 27  ಕೆಳದಿ ಸಂಸ್ಥಾನದ ಆಡಳಿತ ದೇಶಕ್ಕೆ ಮಾದರಿಯಾಗಿದೆ ಇದನ್ನು ಬ್ರಿಟಿಷರು ಕೂಡ ಅನುಸರಿಸಿದರು ಎಂದು ಇತಿಹಾಸ ಚಿಂತಕ ಡಾ. ಕೆ.ಜಿ. ವೆಂಕಟೇಶ್ ಹೇಳಿದರು. ಅವರು ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಏರ್ಪಡಿಸಿದ್ದ ಶ್ರೀರಾಮ ಭಟ್ಟ ಮತ್ತು ಶ್ರೀಮತಿ ದೇವಕಮ್ಮ ದತ್ತಿ ಹಾಗೂ ಶ್ರೀ ಆನಂದಪುರಂ ಜಗದ್ಗುರು ಗುರುಬಸವ ಮಹಾಸ್ವಾಮಿಗಳ ದತ್ತಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಕೆಳದಿ ಸಂಸ್ಥಾನದ ಆಡಳಿತದ ಮಹತ್ವದ ಬಗ್ಗೆ ಮಾತನಾಡುತ್ತಿದ್ದರು. 

      1498ರಿಂದ 1763 ರವರೆಗೆ 265 ವರ್ಷಗಳ ಕಾಲ ಕರ್ನಾಟಕ ಮತ್ತು ಕೇರಳದ ಭಾಗವನ್ನು ಒಳಗೊಂಡ ಕೆಳದಿ ಇಕ್ಕೇರಿ ಬಿದನೂರು ಕವಲೆದುರ್ಗ ಎಂಬ ನಾಲ್ಕು ರಾಜಧಾನಿಯನ್ನು ಹೊಂದಿ ಚೌಡಪ್ಪ ನಾಯಕನಿಂದ ಮೂರನೇ ಸೋಮಶೇಖರನಾಯಕನವರೆಗೆ 18 ಅರಸರುಗಳು ಆಳಿದ ಕೆಳದಿ ಆಡಳಿತ ದೇಶಕ್ಕೆ ಮಾದರಿಯಾದ ಆಡಳಿತವನ್ನು ನೀಡಿದೆ, ಲಿಂಗಣ್ಣ ಕವಿ ಬರೆದ ಕೆಳದಿ ನೃಪವಿಜಯ ಗಂಗಾದೇವಿಯ ಕೆಳದಿ ರಾಜಾಭ್ಯುದಯ ಗ್ರಂಥಗಳು ವಿದೇಶಿ ಪ್ರವಾಸಿಗಳಾದ ಇಟಲಿಯ ಪೆಟ್ರೋ ಡೆಲ್ಲಾವೆಲ್ಲೆ ಫ್ರಾನ್ಸಿಸ್ ರಾಬರ್ಟ್, ಅಲೆಗ್ಸಾಂಡರ್ ಹ್ಯಾಮಿಲ್ಟನ್ ಫ್ರಾನ್ಸಿಸ್ ಬುಕ್ಕನನ್ ಈ ರಾಜ್ಯದ ಬಗ್ಗೆ ವಿಶೇಷವಾಗಿ ತಿಳಿಸಿದ್ದಾರೆ. ಸುಮಾರು 750ಕ್ಕೂ ಹೆಚ್ಚು ಶಾಸನಗಳು ಇವರ ಆಡಳಿತದ ಬಗ್ಗೆ ಮಾಹಿತಿ ನೀಡುತ್ತದೆ ಎಂದರು. 

ಈ ವಂಶದ ದೊಡ್ಡ ಸಂಕಣ್ಣನಾಯಕ ರಾಜ್ಯವನ್ನು ಚಿಕ್ಕ ಸಂಕಣ್ಣನಾಯಕನಿಗೆ ಒಪ್ಪಿಸಿ ತಾನು ತೀರ್ಥಯಾತ್ರೆಯನ್ನು ಕೈಗೊಂಡು ರಾಮೇಶ್ವರದಿಂದ ನೇಪಾಳದವರೆಗೆ ಪರ್ಯಟನೆ ಮಾಡಿ ನೇಪಾಳದಲ್ಲಿ ಕಾಶಿಯ ಲಿಂಗವನ್ನು ಸ್ಥಾಪಿಸುತ್ತಾನೆ. ಕಾಶಿ ಮತ್ತು ಗಯಾದಲ್ಲಿ ಜಂಗಮವಾಡಿ ಮಠವನ್ನು ಕಟ್ಟಿಸಿ

ಇಕ್ಕೇರಿಗೆ ಬಂದು ಪೈಠಣದಲ್ಲಿ ನೋಡಿದ ‌32 ಕೈಗಳ ಆಘೋರೇಶ್ವರ ಮೂರ್ತಿಯನ್ನು ಇಕ್ಕೇರಿಯಲ್ಲೂ ಕೆತ್ತಿಸಿ ಅಘೋರೇಶ್ವರ ದೇವಸ್ಥಾನವನ್ನು ಕಟ್ಟಿಸಿದನು.

ಹಿರಿಯ ವೆಂಕಟಪ್ಪ ನಾಯಕ 38 ವರ್ಷಗಳ ಕಾಲ ರಾಜ್ಯಭಾರ ಮಾಡಿ ಆನಂದಪುರದಲ್ಲಿ ಚಂಪಕ ಸರೋವರವನ್ನು ಕಟ್ಟಿಸಿ ಅಕ್ಕಪಕ್ಕದ ಗೇರುಸೊಪ್ಪೆ ಮತ್ತಿತರ ಚಿಕ್ಕಪುಟ್ಟ ಅರಸರನ್ನು ಸೋಲಿಸಿ ಕೆಳದಿ ರಾಜ್ಯ ವಿಸ್ತರಿಸಿ ಉತ್ತರದ ಗೋವಾದಿಂದ ಹಿಡಿದು ದಕ್ಷಿಣದ ಚಂದ್ರ ಗಿರಿ ತೀರದವರೆಗೆ ರಾಜ್ಯ ವಿಸ್ತರಿಸಿ ಪೋರ್ಚುಗೀಸರನ್ನು ಸೋಲಿಸಿ ಕರಾವಳಿ ವ್ಯಾಪಾರವನ್ನು ವಿಸ್ತರಿಸಿದನು.

ಈ ವಂಶದ ಅತ್ಯಂತ ಪ್ರಸಿದ್ಧನಾದ ಆಡಳಿತಗಾರ ಅರಸನೆಂದರೆ ಶಿವಪ್ಪ ನಾಯಕ. ಆತನ ಆಡಳಿತ ಪದ್ಧತಿಯನ್ನು ಸಿಸ್ತು ಎಂದು ಕರೆಯುತ್ತಾರೆ. ಉತ್ತರ ಭಾರತದಲ್ಲಿ ಅಕ್ಬರನ ಕಾಲದಲ್ಲಿ ರಾಜ ತೋದರ ಮಲ್ಲ ಕಂದಾಯ ಪದ್ಧತಿಗೆ ಬಂದೋಬಸ್ತ್ ಎಂದು ಕರೆದಿದ್ದ ಅದೇ ರೀತಿ ಶಿವಪ್ಪ ನಾಯಕನ ಕಾಲದ ಆಡಳಿತ ಪದ್ಧತಿಗೆ ಶಿಸ್ತು ಎಂದು ಹೆಸರು. 

ಕೃಷಿ ಪದ್ಧತಿಯಲ್ಲಿ ಅಮೂಲಾಗ್ರವಾಗಿ ಬದಲಾವಣೆ ಮಾಡಿ ಭೂಮಿಯ ಫಲವತ್ತತೆ ಮತ್ತು ಉತ್ಪತ್ತಿಗೆ ಅನುಗುಣವಾಗಿ ಅದನ್ನು ಉತ್ತಮೋತ್ತಮ ಉತ್ತಮ ಮಧ್ಯಮ ಅಧಮ ಅಧಮಾಧಮ ಎಂದು ಐದು ಭಾಗವನ್ನಾಗಿ ಮಾಡಿ ಮರುಳು ಮಿಶ್ರಿತವಾದ ಭೂಮಿ ಕಪ್ಪು ಮಣ್ಣಿನ ಭೂಮಿ ಮಧ್ಯಮ ವರ್ಗದ ಕೆಂಪು ಭೂಮಿ ತೇವಾಂಶದಿಂದ ಕೂಡಿದ ಭೂಮಿ ಮತ್ತು ಬಂಜರಭೂಮಿ ಎಂದು ವಿಂಗಡಿಸಿ  ಮತ್ತು ರಾಜ್ಯವೇ ಸ್ವತಹ ಗಿಡಗಳನ್ನು ಬೆಳೆಗಳನ್ನು ಬೆಳೆಸಿ ಅದರ ವಾರ್ಷಿಕ ಉತ್ಪನ್ನವನ್ನು ಸರಾಸರಿ ಐದು ವರ್ಷಗಳವರೆಗೆ ನೋಡಿ ಅನಂತರ ಕಂದಾಯವನ್ನು ನಿಗದಿ ಮಾಡುತ್ತಿದ್ದರು. 

ಒಂದನೇ ವರ್ಗದ ಭೂಮಿಗೆ ಒಂದು ಗದ್ಯಾಣ 2ನೇ ವರ್ಗದ ಭೂಮಿಗೆ ಏಳು ಹಣ ಮೂರನೆಯ ವರ್ಗದ ಭೂಮಿಗೆ ಯಯಯಯ ಮಾಡದೆ ಬೀಳು ಬಿಡುತ್ತಿರಲಿಲ್ಲ ಇತಿಹಾಸಕಾರ ಬಿ ಎಲ್ ರೈಸ್ ರಾಜ ತೋದರಮಲ್ಲನಿಗಿಂತ ಈತನ ಕಂದಾಯ ವ್ಯವಸ್ಥೆ ಉತ್ತಮವಾಗಿತ್ತು ಇದು ಬ್ರಿಟಿಷರಿಗೆ ಮಾದರಿಯಾಯಿತು ಈತ ಗೋಪಾದ

ದಷ್ಟು ಭೂಮಿಯನ್ನು ಹಾಗೆ ಬಿಡುತ್ತಿರಲಿಲ್ಲ ಮಲೆನಾಡುಥ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇರುಬೀಜ ಉದ್ಯಮವನ್ನು ಗೇರು ಮರವನ್ನು ಬೆಳೆಯುವುದನ್ನು ಜಾರಿಗೆ ತಂದವನು ಶಿವಪ್ಪ ನಾಯಕ. ಕಂದಾಯವನ್ನು ನಗದು ರೂಪದಲ್ಲಿ ಮತ್ತು ಧಾನ್ಯ ರೂಪದಲ್ಲಿ ಪಚೇಡೆಯುತ್ತಿದ್ದನು.ಕಾವೇರಿ ನದಿಗೆ ಚಿಕ್ಕ ಸೇತುವೆಯನ್ನು ಕಟ್ಟಿಸಿ ವ್ಯವಸಾಯಕ್ಕೆ ಅನುಕೂಲ ಮಾಡಿಕೊಟ್ಟನು.ಎಂದರು.

    ‌    ಕಾರ್ಯಕ್ರಮದಲ್ಲಿ ಆರೋಗ್ಯದ ಬಗ್ಗೆ ಮಾತನಾಡಿದ ಡಾಕ್ಟರ್.ಪಿ.ನಾರಾಯಣ ಪ್ರಥಮ ಚಿಕಿತ್ಸೆ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿ 

ಯಾವುದೇ ಕಾಯಿಲೆ ಬಂದಾಗ ವಿಶೇಷವಾದ ಆಕಸ್ಮಿಕ ಘಟನೆಗಳು ನಡೆದಾಗ ಆಸ್ಪತ್ರೆಗೆ ಹೋಗುವ ಮೊದಲು ಮಾಡಬಹುದಾದ ಚಿಕಿತ್ಸೆ ಪ್ರಥಮ ಚಿಕಿತ್ಸೆ. ಗಾಯವಾದಾಗ ಅದಕ್ಕೆ ಏನು ಹಾಕದೆ ಸ್ವಚ್ಛ ಮಾಡಿದ ಬಟ್ಟೆಯಿಂದ ಗಾಯವನ್ನು ತೊಳೆದು ಕಟ್ಟಬೇಕು ಸುಟ್ಟ ಗಾಯಕ್ಕೆ ತಣ್ಣೀರು ಹಾಕಬೇಕು ಮೂಳೆ ಮುರಿದಾಗ ಒಂದು ಮರದ ಪಟ್ಟಿಯನ್ನು ಕಟ್ಟಿ ಕೈ ಅಥವಾ ಕಾಲನ್ನು ನೆಟ್ಟಗೆ ಮಾಡಿರಬೇಕು ಕಣ್ಣಿಗೆ ಕಸ ಬಿದ್ದಾಗ ಕಣ್ಣನ್ನು ಮುಚ್ಚಿಕೊಳ್ಳಬೇಕು ಉಚ್ಚಲು ಹೋಗಬಾರದು ಕಿವಿಗೆ ಕಸ ಬಿದ್ದಾಗ ಯಾವುದೇ ಕಡ್ಡಿಯನ್ನು ಕಿವಿಗೆ ಹಾಕಿದರೆ ತಮಟೆಗೆ ಹಾನಿಯಾಗಿ ಶಾಶ್ವತವಾಗಿ ಕೆಂಪಾಗುತ್ತೀರಿ ಕಿವಿ ಒಳಗೆ ಹುಳ ಹೋದಾಗ ಶುದ್ಧ ನೀರನ್ನು ಹಾಕಿ ಹತ್ತಿಯಿಂದ ಮುಚ್ಚಬೇಕು ಪೀಡ್ಸ್ ಬಂದಾಗ ಕಬ್ಬಿಣ ಕೊಡಬಾರದು ಮಲಗಿಸಿ ಗಾಳಿ ಬೆಳಕು ಜಾಸ್ತಿ ಬಿಡಬೇಕು ಹಾರ್ಟ್ ಅಟ್ಯಾಕ್ ಆದಾಗ ಎದೆಯನ್ನು ಒತ್ತಿ ಹೃದಯವನ್ನು ಬಡಿಯಬೇಕು ವಿಷ ಕುಡಿದಾಗ ಉಪ್ಪು ನೀರು ಕುಡಿಸಿ ವಾಂತಿ ಮಾಡಿಸಬೇಕು ಜ್ವರ ಬಂದಾಗ ತಣ್ಣೀರಿನಿಂದ ಮೈ ಹೋರಿಸಬೇಕು ಹಾವು ಕಚ್ಚಿದಾಗ ಹೆದರಿಕೆಯಿಂದ ಸಾಯುವವರು ಜಾಸ್ತಿ ಹಾವು ಕಚ್ಚಿದ ಜಾಗದಲ್ಲಿ ವಿಷ ಇದ್ದ ಜಾಗ ತೊಳೆಯಬೇಕು ಗಾಯದ ಮೇಲ್ಗಡೆ ಬಟ್ಟೆ ಕಟ್ಟಬೇಕು ನಾಯಿ ಕಚ್ಚಿದಾಗ ಗಾಯವನ್ನು ತೊಳೆದು ಹಾಗೆ ಬಿಡಬೇಕು ಬ್ಯಾಂಡೇಜ್ ಹಾಕಬಾರದು ನಾಯಿಗೆ ಇಂಜೆಕ್ಷನ್ ಕೊಡದೆ ಇದ್ದರೆ ಆತನಿಗೆ ಕೊಡಿಸಬೇಕು. ಜೇನು ಹುಳ ಕಚ್ಚಿದಾಗ ಅದರ ಮುಳ್ಳನ್ನು ತೆಗೆಯಬೇಕು. 

ಪ್ರಥಮ ಚಿಕಿತ್ಸೆ ನಂತರ ಅವರನ್ನು ಕಡ್ಡಾಯವಾಗಿ ಆಸ್ಪತ್ರೆ ಕರೆದೊಯ್ದು ವೈದ್ಯರಿಗೆ ತೋರಿಸಬೇಕು ಎಂದರು. 

ನಿರೂಪಣೆ ಸಿಂಧೂ ಪ್ರಾರ್ಥನೆ ದ್ರಾಕ್ಷಾಯಿಣಿ ಸ್ವಾಗತ ಸುನೀತಾ ರವರು ಮಾಡಿದರು. ವೇದಿಕೆಯಲ್ಲಿ ದತ್ತಿಧಾನಿಗಳಾದ ಡಾಕ್ಟರ್ ಕೆ.ಆರ್. ಶ್ರೀಧರ್ ವಿದ್ಯಾರ್ಥಿನಿ ನಿಲಯದ ನಿಲಯ ಪಾಲಕರಾದ ಶ್ರೀಮತಿ ಎಸ್ ಮಮತಾ ಉಪಸ್ಥಿತರಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಮಂಜುನಾಥ್ ವಹಿಸಿದ್ದರು.

Search