Posted on 24-03-2025 |
Share: Facebook | X | Whatsapp | Instagram
ಹೊಸನಗರ ಮಾ.23 ಶಿವಮೊಗ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ.ಮಂಜುನಾಥ್ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಅವರು ಹೊಸನಗರದ ಗಾಯತ್ರಿ ಮಂದಿರದಲ್ಲಿ ನಡೆದ 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಯಾಗಿ ಭಾಗವಹಿಸಿದ್ದು ಅಭಿನಂದನಾ ಭಾಷಣ ಮಾಡುತ್ತಿದ್ದರು.
ಭಾಷೆ ಬಹಳ ಮುಖ್ಯ ಅದರ ಬಳಕೆಗಾಗಿ ಸಾಹಿತ್ಯ ಪರಿಷತ್ತು ಅತ್ಯಂತ ಉತ್ತಮ ಕೆಲಸವನ್ನು ಜಿಲ್ಲೆಯಲ್ಲಿ ಮಾಡಿದೆ.ಮತ್ತು ಈಗಲೂ ಮಾಡುತ್ತಿದೆ. ಇಸ್ರೇಲ್ ಅಂತ ಚಿಕ್ಕ ರಾಷ್ಟ್ರ ಹೀಬ್ರೂ ಭಾಷೆ ರಾಷ್ಟ್ರ ಭಾಷೆಯನ್ನಾಗಿ ಮಾಡಿಕೊಂಡಿದೆ.7ಕೋಟಿ ಜನ ಕನ್ನಡಿಗರು ಇದ್ದರೂ ಕೂಡ ಸರ್ಕಾರ ಕನ್ನಡಿಗರ ತೆರಿಗೆ ಹಣ ಪಡೆದು ಉರ್ದು ಭಾಷೆ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ.ಹೀಗೆ ಮಾಡಿ ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ಸಾಧ್ಯವಿಲ್ಲ.ನಮ್ಮ ಕನ್ನಡದ ಮಕ್ಕಳು ಉರ್ದು ಮಕ್ಕಳು ಒಟ್ಟಿಗೆ ಕುಳಿತು ರಾಜ್ಯದ ಭಾಷೆ ಕಲಿತರೆ ಮಾತ್ರ ರಾಜ್ಯ ಭಾಷೆ ಎಲ್ಲವೂ ಅಭಿವೃದ್ಧಿ ಯಾಗುತ್ತದೆ.
ಹೊಸನಗರ ತಾಲ್ಲೂಕು ವಿಧಾನಸಭಾ ಕ್ಷೇತ್ರವನ್ನು ಪುನಃ ತರಲು ನಡೆಯುವ ಎಲ್ಲಾ ಹೋರಾಟಕ್ಕೂ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದರು.
ವೇದಿಕೆಯಲ್ಲಿ ಪ್ರೋ.ಹೂವಯ್ಯಗೌಡ,ಹೊಸನಗರ ತಾಲೂಕಿನ ಕಸಾಪ ಅಧ್ಯಕ್ಷ ಗಣೇಶ್ ಮೂರ್ತಿ ತಾಲ್ಲೂಕು ಸಮ್ಮೇಳನದ ಊಟೋಪಚಾರ ಸೇವೆ ಮಾಡಿಸಿದ ತಲನೇರಿ ಕುಟುಂಬದ ಪ್ರೋ.ಟಿ.ಎಸ್.ಹೂವಯ್ಯಗೌಡ .ಬಸಪ್ಪ ಗೌಡ, ತಾಲ್ಲೂಕು ಕಸಾಪ ಕಾರ್ಯದರ್ಶಿ ಶ್ರೀ ಕೆ.ಜಿ.ನಾಗೇಶ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಿ.ಎಸ್.ಶ್ರೀಧರ್ ರವರನ್ನು ಹಾಗೂ ಎಲ್ಲಾ ಘಟಕದ ಅಧ್ಯಕ್ಷ ಕಾರ್ಯದರ್ಶಿ ಗಳನ್ನು ಸನ್ಮಾನಿಸಲಾಯಿತು.