ಭದ್ರಾವತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಭೆ ಎಂಪಿಎಂ ಕಾರ್ಖಾನೆ ಮುಂದುವರಿಸುವ ಭರವಸೆ

ಭದ್ರಾವತಿ Political

Posted on 24-03-2025 |

Share: Facebook | X | Whatsapp | Instagram


ಭದ್ರಾವತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಭೆ   ಎಂಪಿಎಂ ಕಾರ್ಖಾನೆ ಮುಂದುವರಿಸುವ ಭರವಸೆ

ಭದ್ರಾವತಿ ಮಾ.24   ಇಲ್ಲಿನ ಕಾಂಗ್ರೆಸ್ ಪಕ್ಷದ ವತಿಯಿಂದ ನಗರ ಬ್ಲಾಕ್ ಕಾಂಗ್ರೆಸ್ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಭೆಯನ್ನು ಇತ್ತೀಚೆಗೆ ನಡೆಸಲಾಯಿತು. 

ಈ ಸಭೆಯಲ್ಲಿ ಮುಂಬರುವ ತಾಲೂಕ್ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಬಗ್ಗೆ ಪಕ್ಷ ಕೈಗೊಳ್ಳಬೇಕಾದ ಕಾರ್ಯಕ್ರಮಗಳೇನು ಎಂಬುದನ್ನು ತಿಳಿಸಲಾಯಿತು. ಹಾಗೂ ಕಾಂಗ್ರೆಸ್ ಪಕ್ಷವು ಇದುವರೆಗೆ ಅಲ್ಪಸಂಖ್ಯಾತ ದಲಿತ ಮತ್ತು ಹಿಂದುಳಿದ ಜನರಿಗೆ ಯಾವ ರೀತಿಯಲ್ಲಿ ನ್ಯಾಯವನ್ನು ಒದಗಿಸಿದೆ ಎಂಬುದನ್ನು ತಿಳಿಸಲಾಯಿತು. 

ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಮಾತನಾಡಿ ಕಾಂಗ್ರೆಸ್ ಪಕ್ಷವು ಎಂದಿಗೂ ಕೂಡ ರೈತರ ಪರವಾಗಿ ಕೆಲಸವನ್ನು ಮಾಡಿಕೊಂಡು ಬಂದಿದೆ. ಭದ್ರಾವತಿಯಲ್ಲಿ ರೈತರನ್ನು ಒಕ್ಕಲಿಬ್ಬಿಸಲಾಗುವುದು ಎಂದು ಸುದ್ದಿಯನ್ನು ಬಿತ್ತರಿಸಲಾಗಿದೆ ಆದರೆ ಪ್ರಸ್ತುತ ಭಗತ್ ಹುಕುಂ ಸಾಗುವಳಿದಾರರಿಗೆ ಯಾವುದೇ ಸಮಸ್ಯೆಯನ್ನು ಬಾರದಂತೆ ನೋಡಿಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಮಧು ಬಂಗಾರಪ್ಪ ಹೇಳಿದರು. 

ಬಗರ್ ಹುಕ್ಕಂ ಸಾಗುವಳಿದಾರರಿಗೆ ನೀಡಿರುವ ನೋಟಿಸ್ ನಿಂದ ಯಾರು ಭಯಪಡುವ ಅಗತ್ಯವಿಲ್ಲ ಅದರಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು 

ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸುವ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿದೆ ಇದಕ್ಕೆ ಕೇಂದ್ರ ಸರ್ಕಾರದ ಅನುಕೂಲ ಮತ್ತು ಅಗತ್ಯತೆ ಕಂಡುಬಂದರೆ ಅವರೊಂದಿಗೂ ಕೂಡ ಚರ್ಚಿಸಲು ನಮ್ಮ ಪಕ್ಷ ಸಿದ್ಧವಿದೆ. ಹಾಗಾಗಿ ಎಂಪಿಎಂ ನೌಕರರು ಸಂಪೂರ್ಣ ವಿಶ್ವಾಸವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ ಎಂದರು. 

ಎಂಪಿಎಂ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಕೆಲವು ವ್ಯಕ್ತಿಗಳಿಂದ ಆಗಿರುವ ಅನ್ಯಾಯದ ಬಗ್ಗೆ ಎಂಪಿಎಂ ನ ೊಂದ ನಿವೃತ್ತ ಕಾರ್ಮಿಕರು ತಮಗೆ ಮನವಿಯನ್ನು ನೀಡಿದ್ದು ಈ ಬಗ್ಗೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ವಿಧಾನಸೌಧದಲ್ಲಿ ಸಂಬಂಧಪಟ್ಟವರೊಂದಿಗೆ ಸಭೆಯನ್ನು ನಡೆಸಿ ಕಾರ್ಮಿಕರ ಹಿತವನ್ನು ರಕ್ಷಣೆ ಮಾಡಲಾಗುವುದು ಎಂದರು. 

ವೇದಿಕೆಯಲ್ಲಿ ಶಾಸಕರಾದ ಬಿ.ಕೆ .ಸಂಗಮೇಶ್, ಶಾಸಕರ ಸಹೋದರರು ಕಾಂಗ್ರೆಸ್ ಮುಖಂಡರು ಆದ ಬಿಕೆ ಮೋಹನ್ ಬಿಕೆ ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಭದ್ರಾವತಿ ನಗರಸಭೆಯ ನೂತನ ಅಧ್ಯಕ್ಷರಾದ ಗೀತಾ ರಾಜಕುಮಾರ ಆಶ್ರಯ ಸಮಿತಿ ಅಧ್ಯಕ್ಷರಾದ ಶ್ರೀ ಗೋಪಾಲ್ ಹೋಬಳಿಧರ್ ಭದ್ರಾವತಿ ಶಿವಮೊಗ್ಗ ಸೂಡ ಸದಸ್ಯರಾದ ರೇಣುಕಮ್ಮ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಕ್ರಾಂತಿಕಿಡಿ ಪತ್ರಿಕೆಯ ಭದ್ರಾವತಿ ವರದಿಗಾರರಾದ ನಾಗಭೂಷಣ್ ರವರು ಸಚಿವರಿಗೆ ಶಾಸಕರಿಗೆ ಪತ್ರಿಕೆಯ ಪ್ರತಿಯನ್ನು ಹಂಚಿದರು. ಸಚಿವರು ಪತ್ರಿಕೆಯ ಸುದ್ದಿಯನ್ನು ಶ್ಲಾಘಿಸಿದರು.

Search