Posted on 23-03-2025 |
Share: Facebook | X | Whatsapp | Instagram
ಸಂಭ್ರಮದಿಂದ ಪ್ರಾರಂಭ
ಸಾಹಿತ್ಯ ಕೃತಿಗಳಿಂದ ಸಾಂಸ್ಕೃತಿಕ ಜ್ಞಾನ ಹೆಚ್ಚಳ
ಕಿಮ್ಮನೆ ರತ್ನಾಕರ್
ಹೊಸನಗರ ಮಾ 22 ಇಲ್ಲಿನ ಗಾಯತ್ರಿ ಮಂದಿರದಲ್ಲಿ ತಾಲ್ಲೂಕಿನ 10ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮ ದಿಂದ ಪ್ರಾರಂಭವಾಯಿತು.
ಹಳೇ ತಾಲ್ಲೂಕು ಕಛೇರಿ ಆವರಣದಿಂದ ಗಾಯತ್ರಿ ಮಂದಿರದವರೆಗೆ ತೆರೆದ ವಾಹನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಿ.ಎಸ್ ಶ್ರೀಧರ್ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಪ್ರಾಸ್ತಾವಿಕ ಮಾತುಗಳನ್ನು ಆಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಸಾಹಿತ್ಯ ಪ್ರೇಮಿಗಳು ಪುಸ್ತಕವನ್ನು ಓದಬೇಕು ಸಾಹಿತ್ಯ ಕೃತಿಗಳನ್ನು ಕೊಂಡು ಕೊಳ್ಳಬೇಕು.ಕನ್ನಡದಲ್ಲಿ ಎಲ್ಲಾ ಸಂಸ್ಕೃತ ಗ್ರಂಥಗಳ ಅನುವಾದ ದೊರಕುತ್ತದೆ.ಅದನ್ನು ಓದಬೇಕು.ಹಾಗೆಂದು ಓದಿದವರು ಎಲ್ಲರೂ ಒಳ್ಳೆಯವರಾಗಿಲ್ಲ,ಆದರೆ ನಾವು ಬುದ್ದ ಬಸವಣ್ಣ ಅಂಬೇಡ್ಕರ್ ಗಾಂಧಿ ಆಗಬೇಕೆಂದರೆ ಅವರು ಬಗ್ಗೆ ತಿಳಿಯಬೇಕೆಂದು ಪುಸ್ತಕ ಓದಬೇಕು.ಜಗತ್ತಿನ ಮೊದಲ ಸಂಸತ್ತು ಸ್ಥಾಪಿಸಿದವರು ಬಸವಣ್ಣನವರು.
ಜ್ಞಾನ ಪೀಠ ಪ್ರಶಸ್ತಿ ವಿಜೇತ ಅನಂತಮೂರ್ತಿ ಗ್ರಂಥಗಳು ಸಮಕಾಲೀನ ಪರಿಸ್ಥಿತಿ ಅರ್ಥ ಮಾಡಿಸುತ್ತದೆ.ದೇವನೂರು ಮಹಾದೇವರ ಕೃತಿಗಳು ಮನುಷ್ಯತ್ವವನ್ನು ಕಲಿಸುತ್ತದೆ.ಇಂದು ನಾವು ತಿನ್ನುವುದು ಹಿಂದಿನವರು ಮಾಡಿದ ಕಾರ್ಯಗಳಿಂದ ಸಿಕ್ಕ ಫಲ ಆಗಿದೆ,ಹಾಗೇ ನಾವು ಮುಂದಿನವರಿಗೆ ಒಳ್ಳೆಯದನ್ನು ಮಾಡಬೇಕು.ಬುದ್ದನ ನಂತರದ ಮಹಾನ್ ವ್ಯಕ್ತಿ ಎಂದರೆ ಮಹಾತ್ಮ ಗಾಂಧಿ ಅವರು ಜನರಿಗೆ ಹೇಗೆ ಬದುಕಬೇಕು ಎಂದು ಬೇರೆಯವರಿಗೆ ಹೇಳುತ್ತಿದ್ದರೋ ಹಾಗೇ ತಾವು ಬದುಕಿದ್ದರು.
ತೇಜಸ್ವಿ ಯವರ ಕೃಷ್ಣೇಗೌಡನ ಆನೆ ಕೃತಿಯಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ದೇವರುಗಳ ತಂದೆ ಯಾರು ಎಂದರೆ ಅವರ ನಂಬಿಕೆಗಳು ಎಂದಿದ್ದಾರೆ.ಒಟ್ಟಿನಲ್ಲಿ ಅಧ್ಯಯನ ಮಾಡದೇ ಇದ್ದರೆ ನಮಗೆ ನಿಜವಾದ ಜ್ಞಾನ ಸಿಗುವುದಿಲ್ಲ.ಹಾಗಾಗಿ ಕೃತಿಗಳನ್ನು ಓದಿ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಡಿ.ಎಸ್.ಶ್ರೀಧರ್ ಧರೆಮನೆಯವರು ಕನ್ನಡವನ್ನು ಉಳಿಸಿಕೊಳ್ಳುವ ಕಾರ್ಯ ವನ್ನು ಸಾಹಿತ್ಯ ಪರಿಷತ್ ಮಾಡಬೇಕೆಂದು ಕರೆನೀಡಿದರು.
ಸಮ್ಮೇಳನದಲ್ಲಿ ಅಧ್ಯಕ್ಷರ ಭಾಷಣ ಮುದ್ರಿತವಾದ ಕ್ರಾಂತಿ ಕಿಡಿ ಪತ್ರಿಕೆಯನ್ನು ಹಂಚಲಾಯಿತು.