Posted on 22-03-2025 |
Share: Facebook | X | Whatsapp | Instagram
ಶಿವಮೊಗ್ಗ ಮಾ 22 ಮನುಷ್ಯನ ಜೀವನದಲ್ಲಿ ಮನರಂಜನೆ ಬಹಳ ಮುಖ್ಯವೆಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.ಅವರು ಗಾರಾ ಫೌಂಡೇಶನ್, ಕ್ರಿಯೇಷನ್ ಗ್ರೂಪ್ ಮತ್ತು ಭೂಮಿ ಸಂಸ್ಥೆ ವತಿಯಿಂದ ಶಿವಮೊಗ್ಗದ ಸಂಸ್ಕೃತಿ ಭವನದಲ್ಲಿ ನಡೆದ ರಂಗ ಚಿತ್ತಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು,
ಇಂದು ಮನುಷ್ಯನ ಜೀವನದಲ್ಲಿ ಒತ್ತಡ ಜಾಸ್ತಿ ಆಗಿದೆ.ನಗರದಲ್ಲಿ ಕಂಪನಿ ನಾಟಕ ತಂಡಗಳೇ ಇಲ್ಲ.ಸಿನಿಮಾಕ್ಕೂ ಕೂಡ ಪ್ರೇಕ್ಷಕರ ಕೊರತೆ ಉಂಟಾಗಿದೆ ವಿನಾಯಕ ,ಲಕ್ಷ್ಮೀ ,ಮಾಡರ್ನ್,ಹೆಚ್ .ಪಿ. ಸಿ , ಟಾಕೀಸ್ ಮುಚ್ಚಿ ಹೋಗಿದೆ.ಆದರೂ ಒತ್ತಡದ ಮನುಷ್ಯನಿಗೆ ಮನರಂಜನೆ ಅಗತ್ಯ ಹಾಗಾಗಿ ಶಿವಮೊಗ್ಗದಲ್ಲಿ ಅನೇಕ ರಂಗ ತಂಡಗಳು ಹುಟ್ಟಿಕೊಂಡು ಮನರಂಜನೆ ನೀಡುತ್ತಿವೆ,ಹಾಗೇ ನಾಟಕವಾಡಿಸುವ ಸಂಸ್ಥೆಗಳು ಇವೆ ಎಂದರು.
ಈ ಸಂದರ್ಭದಲ್ಲಿ ಕಲಾವಿದರಾದ ತಿಪ್ಪಣ್ಣ ರಾಮಣ್ಣ ಗೀತಾ ಪ್ರಸನ್ನ ಚನ್ನಯ್ಯ ಗಣೇಶ್ ಮತ್ತಿತರರಿಗೆ ಪ್ರಶಸ್ತಿ ಫಲಕದ ಮೂಲಕ ಗೌರವ ಅರ್ಪಿಸಲಾಯಿತು.
ವೇದಿಕೆಯಲ್ಲಿ ವಾಲಿಬಾಲ್ ಸಂಘದ ಶಶಿ,ಹಾಗೂ ಟೆಕ್ವಾಂಡೊ ಸಂಸ್ಥೆ ಭೂಮಿ ಸಂಸ್ಥೆ ಮತ್ತಿತರ ಸಂಸ್ಥೆಗಳ ಶ್ರೀನಾಥ ,ಕೆ.ಜಿ.ವಿನೋದ್ ಕುಮಾರ್, ಗೀತಾಮಾನೆ ,ಉಮೇಶ್ ,ದೊರೈ , ನವೀನ್ ತಲಾ ರಿ ಉಪಸ್ಥಿತರಿದ್ದರು.
ಗಾ.ರಾ .ಶ್ರೀನಿವಾಸ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮದ ನಿರ್ವಹಣೆ ಮಾಡಿದರು.