ಶಾಸಕ ಚೆನ್ನಿಯವರು ಸಹನೆ ಕಳೆದುಕೊಂಡರೇ...

Politics Local

Posted on 22-03-2025 |

Share: Facebook | X | Whatsapp | Instagram


ಶಾಸಕ ಚೆನ್ನಿಯವರು ಸಹನೆ ಕಳೆದುಕೊಂಡರೇ...

ವಿಧಾನಸಭೆಯಲ್ಲಿ ಗದ್ದಲವನ್ನು ಮಾಡಿದ 18 ಶಾಸಕರನ್ನು ಸಭಾಧ್ಯಕ್ಷರು ಆರು ತಿಂಗಳುಗಳ ಕಾಲ ಅಮಾನತ್ತು ಮಾಡಿದ್ದಾರೆ. ಇದರಲ್ಲಿ ನಮ್ಮ ಶಿವಮೊಗ್ಗದ ಶಾಸಕರಾದ ಎಸ್ಎನ್ ಚನ್ನಬಸಪ್ಪ ಕೂಡ ಒಬ್ಬರು. 

ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರ ನೆರಳಿನಲ್ಲಿ ಬೆಳೆದ ಚನ್ನಬಸಪ್ಪ ಅವರ ರಾಜಕೀಯ ಕಸರತ್ತುಗಳನ್ನು ಕೈವಶ ಮಾಡಿಕೊಂಡಿದ್ದರು. ಅದೇ ರೀತಿ ಮುನ್ನುಗ್ಗುವ ಗುಣವನ್ನು ಹೊಂದಿರುತ್ತಾರೆ.ಆದರೆ ಪ್ರಥಮ ಅವಧಿಗೆ ಶಾಸಕರಾದ ಅವರು ತಮ್ಮ ಜಿಲ್ಲೆಯ ಹಿನ್ನೆಲೆ ಮತ್ತು ಹಿಂದಿನ ಶಾಸಕರುಗಳನ್ನ ಅರ್ಥ ಮಾಡಿಕೊಂಡಿರಬೇಕಿತ್ತು. 

     ಸದನದಲ್ಲಿ ಯಾವತ್ತೂ ದಾಖಲೆಯಾಗಿ ಉಳಿದ ದೀರ್ಘ ಸಮಯ ರೈತರ ಬಗ್ಗೆ ಸುದೀರ್ಘ ಭಾಷಣ ಮಾಡಿ ತನ್ನ ಪಕ್ಷದಿಂದ ಒಬ್ಬರೇ ಆಯ್ಕೆಯಾಗಿದ್ದರು ಮುಖ್ಯಮಂತ್ರಿ ಹುದ್ದೆ ವಹಿಸಿಕೊಳ್ಳಿ ಎಂಬ ಅನ್ಯ ಪಕ್ಷದ ಶಾಸಕರ ಬೆಂಬಲ ಪಡೆದ ಶಾಂತವೇರಿ ಗೋಪಾಲಗೌಡ, ಸದನದಲ್ಲಿ ನಗುತ್ತಾ ನಗಿಸುತ್ತಾ ಚಾಟಿ ಬೀಸಿದ ಮಾತಿಗೆ ಪ್ರಸಿದ್ಧವಾದ ಜೆ ಹೆಚ್ ಪಟೇಲ್ ಕಾರ್ಮಿಕರ ಸಮಸ್ಯೆ ಬಗ್ಗೆ  ಶಾಸಕರುಗಳು ಕಣ್ಣೀರು ಹಾಕುವಂತೆ ಮಾತನಾಡಿದ ಆಯನೂರು ಮಂಜುನಾಥ್. ಸಭೆಯ ಕಲಾಪಕ್ಕೆ ಎಲ್ಲ ರೀತಿಯ ಹೋಂ ವರ್ಕ್ ಮಾಡಿಕೊಂಡು ಘನ ವಿದ್ವಾಂಸರಂತೆ ಮಾತನಾಡುತ್ತಿದ್ದ ಕಿಮ್ಮನೆ ರತ್ನಾಕರ್ ತಾವು ಗುಡುಗಿದರೆ ವಿಧಾನಸೌಧ ನಡುಗುವಂತೆ ಮಾಡಿದ ಯಡಿಯೂರಪ್ಪ 

ಇಂಥವರು ಪ್ರತಿನಿಧಿಸಿದ ಶಿವಮೊಗ್ಗ ಜಿಲ್ಲೆಯವರು ತಾವು ಎಂಬ ಅರಿವು ಇವರಿಗೆ ಇರಬೇಕಿತ್ತು.

     ಈಗ ಇವರು ಮುಂಗಾರು ಅಧಿವೇಶನದಲ್ಲಿ ಭಾಗವಹಿಸುವಂತಿಲ್ಲ ವಿಧಾನಸಭೆಯ ಸಭಾಂಗಣ ಮೊಗಸಾಲೆ ಗ್ಯಾಲರಿ ಪ್ರವೇಶಿಸುವಂತಿಲ್ಲ ವಿಧಾನ ಮಂಡಲ ವಿಧಾನಸಭೆಯ ಸ್ಥಾಯಿ ಸಮಿತಿಗಳ ಸಭೆಯಲ್ಲಿ ಪಾಲ್ಗೊಳ್ಳುವಂತಿಲ್ಲ ವಿಧಾನಸಭೆಯ ಕಲಾಪಗಳ ಪಟ್ಟಿಗೆ ಯಾವುದೇ ವಿಷಯವನ್ನು ನಮೂದಿಸುವಂತಿಲ್ಲ ಇವರ ಯಾವುದೇ ಸೂಚನೆಗಳನ್ನು ಸರ್ಕಾರ ಸ್ವೀಕರಿಸುವುದಿಲ್ಲ ಯಾವುದೇ ಸಮಿತಿಗಳ ಚುನಾವಣೆಯಾದರೂ ಇವರಿಗೆ ಮತದಾನದ ಹಕ್ಕಿಲ್ಲ ಅಮಾನತ್ತಿನ ಅವಧಿಯಲ್ಲಿ ಯಾವುದೇ ದಿನಪತ್ಯ ಪಡೆಯಲು ಅರ್ಹರಾಗಿಲ್ಲ.

     ಆರು ತಿಂಗಳ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಆದರೆ ಶಾಸಕರಾಗಿದ್ದು ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಇವರಿಗೆ ಬೇಕಿತ್ತೆ. ಬಿಜೆಪಿ ಪಕ್ಷದಿಂದ ಇವರು ಆಯ್ಕೆಯಾಗಿದ್ದಾರೆ ನಿಜ, ಬಿಜೆಪಿಯ ಅನೇಕ ಪ್ರಣಾಳಿಕೆಗಳಲ್ಲಿ ಹಿಂದುತ್ವ ಒಂದು, ಆದರೆ ಗೆದ್ದ ದಿನದಿಂದ ಇಂದಿನವರೆಗೂ ಇವರ ಸಭಾ ನಡವಳಿಕೆ ಹಿಂದುತ್ವದ ಪ್ರತಿನಿಧಿಯಂತೆ ಇತ್ತೆ ವಿನಹ ಮಾನವತೆಯ ಪ್ರತಿನಿಧಿಯಾಗಿ

ಇರಲಿಲ್ಲ. 

ಭಾರತದಲ್ಲಿ ಹಿಂದೂ ಧರ್ಮವೂ ಸೇರಿದಂತೆ ಎಂಟು ಪ್ರಮುಖ ಧರ್ಮಗಳಿವೆ. ಹಾಗೆ ನೋಡಿದರೆ ಇವರ ವೀರಶೈವ ಮತ್ತು ಲಿಂಗಾಯತ ಎಂದು ಕರೆದುಕೊಳ್ಳುವ ಧರ್ಮ ಕೂಡ ಹಿಂದೂ ಧರ್ಮದ ವಿರುದ್ಧವಾಗಿಯೇ ಹೋರಾಟ ಮಾಡಿ ಹೊಸ ಧರ್ಮವಾಗಿ ಹುಟ್ಟಿದ್ದು, ಈ ಧರ್ಮದಲ್ಲಿ ಹಿಂದೂ ಧರ್ಮದ ಅನೇಕ ಮೂಡನಂಬಿಕೆಗಳನ್ನು ಬಸವಣ್ಣ ನೇರವಾಗಿ ತಿರಸ್ಕರಿಸಿದ್ದಾರೆ,

ಮುಖ್ಯಮಂತ್ರಿ ಕೊಟ್ಟ ಉತ್ತರ ಸರಿ ಇಲ್ಲ ಎಂದು ಕೂಗಿದ ಈ 18 ಶಾಸಕರು ರಾಜಣ್ಣನ ರಕ್ಷಿಸಿ ರಾಜಣ್ಣನ ರಕ್ಷಿಸಿ ಎಂದು ಕೂಗಿದ್ದಾರೆ. ಕಾಂಗ್ರೆಸ್ ಪಕ್ಷದ ಮಂತ್ರಿ ಒಬ್ಬನನ್ನು ರಕ್ಷಣೆ ಮಾಡಬೇಕು ಎಂದು ಗಲಾಟೆ ಮಾಡಿದ್ದಲ್ಲದೆ ವಿಧಾನ ಸಭಾಧ್ಯಕ್ಷರ ಎದುರಿಗೆ ಹೋಗಿ ಕೊಟ್ಟಂತಹ ಕಾಗದಪತ್ರಗಳ ನ್ನು ಹರಿದು ಸಭಾಧ್ಯಕ್ಷರ ಮುಖದ ಮೇಲೆ ಬಿಸಾಡುವುದು ಯಾವ ನ್ಯಾಯ ಅಮಾನತ್ತು ಮಾಡಿದ್ದೇವೆ ಹೊರ ಹೋಗಿ ಎಂದು ಕೇಳಿಕೊಂಡರು ಕೂಡ ಡಾ. ಸಿಎನ್ ಅಶ್ವಥ್ ನಾರಾಯಣ ಮಾತ್ರ ಹೊರಹೋಗಿ ಉಳಿದವರು ಗದ್ದಲ ಮಾಡುತ್ತಾ ಇರಬೇಕಾದರೆ ತಮ್ಮನ್ನು ಸೇರಿದಂತೆ ಎಲ್ಲರನ್ನೂ ಮಾರ್ಷಲ್ ಗಳು ಹೊತ್ತುಕೊಂಡು ಹೊರಹಾಕಬೇಕಾಯಿತು. 

ಇನ್ನು ಸಾಕಷ್ಟು ವರ್ಷ ನಮಗೆ ಅವಕಾಶವಿದೆ ಶಿವಮೊಗ್ಗ ಬಯಸುವುದು ಶಾಂತಿಯನ್ನು ಹೊರತು ಉಗ್ರ ಹಿಂದುತ್ವವಾದವಲ್ಲ ನಮ್ಮ ಶಾಸಕರು ಶಿವಮೊಗ್ಗದ ಶಾಂತಿಯನ್ನು ಎತ್ತಿ ಹಿಡಿಯಬೇಕು. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಂತೆ ಇಲ್ಲೂ ಕೂಡ ಶಾಂತಿ ಆಗಾಗ ಕದಡಿ ಯಾವುದೇ ದೊಡ್ಡ ಉದ್ಯಮಗಳು ಶಿವಮೊಗ್ಗಕ್ಕೆ ಬರುತ್ತಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಪ್ರತಿಭಾ ಪಲಾಯನ ಆಗುತ್ತಿದೆ. ಇದನ್ನು ತಾವು ಅರ್ಥಮಾಡಿಕೊಂಡು ಜನತೆಯ ನೈಜಪ್ರತಿನಿಧಿಯಾಗಿ ಸದನದಲ್ಲಿ ಆರು ತಿಂಗಳ ನಂತರ ಭಾಗವಹಿಸಿ ಎಂದು ಜಿಲ್ಲೆಯ ಜನತೆಯ ಪರವಾಗಿ ಕೇಳಿಕೊಳ್ಳುತ್ತೇನೆ.



.

Search