ನಮಸ್ಕಾರ ಎನ್ನುವುದು ಒಂದು ಸಂಸ್ಕಾರ ನಾರಾಯಣ ರಾವ್

Social Program Education

Posted on 21-03-2025 |

Share: Facebook | X | Whatsapp | Instagram


ನಮಸ್ಕಾರ ಎನ್ನುವುದು ಒಂದು ಸಂಸ್ಕಾರ ನಾರಾಯಣ ರಾವ್

ಶಿವಮೊಗ್ಗ ಮಾ.21 ನಮಸ್ಕಾರ ಎನ್ನುವುದು ಒಂದು ಸಂಸ್ಕಾರ ಎಂದು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾರಾಯಣ ರಾವ್ ಹೇಳಿದರು.ಅವರು ಇಂದು ಜವಾಹರಲಾಲ್ ನೆಹರು ನ್ಯೂ ಕಾಲೇಜ್ ಆಫ್ ಇಂಜಿನಿಯರಿಂಗ್ ಶಿವಮೊಗ್ಗದ ಮ್ಯಾನೇಜ್ಮೆಂಟ್ ವಿಭಾಗದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವಾದ

ಉತ್ಥಾನ 2K25 ನವತರಂಗ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

     ಈ ಕಾಲೇಜಿನಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಸುಂದರವಾದ ಹಿರಿಯರ ಸಭಾಂಗಣ ನಿರ್ಮಿಸುತ್ತೇವೆ.ಈಗಾಗಲೇ ಗುದ್ದಲಿಪೂಜೆ ಕೂಡ ನೆರವೇರಿದೆ.ಇಂದು ನಡೆಯುವ ಉತ್ಥಾನ ನಿಮ್ಮ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತದೆ.ಶಿವಮೊಗ್ಗ ಒಂದರಲ್ಲಿಯೇ ನಮ್ಮ 24ಸಂಸ್ಥೆಗಳಿದೆ.ಎಂಬಿಬಿಎಸ್ ಹೊರತು ಪಡಿಸಿ ಉಳಿದ ಎಲ್ಲಾ ಶಿಕ್ಷಣವನ್ನು ನಾವು ನೀಡುತ್ತಿದ್ದೇವೆ.

ವಿದ್ಯಾರ್ಥಿಗಳ ಸಂಪತ್ತು ಬುದ್ದಿವಂತಿಕೆ ತಾಳ್ಮೆ ನಗು ಅದನ್ನು ಬಳಸಿಕೊಂಡು ನಮ್ಮ ವ್ಯಕ್ತಿತ್ವ ವೃದ್ದಿಮಾಡಿಕೊಳ್ಳಬೇಕು.ನಮ್ಮ ಜೀವನದ ಭಾರವಾದ ವಸ್ತು ಎಂದರೆ ಅಹಂಕಾರ ಅದನ್ನು ಕೆಳಗಿಳಿಸಿ.ದೇವರ ಹೆಸರಿನಲ್ಲಿ ಒಂದು ದಿನ ಉಪವಾಸ ಇರುವುದು ಸಾಧನೆ ಅಲ್ಲ ತಂದೆ ತಾಯಿ ಉಪವಾಸ ಇರದಂತೆ ನೋಡಿಕೊಳ್ಳುವುದೇ ಸಾಧನೆ ಎಂದರು.ಹಸಿವು ಅವಮಾನ ಬಡತನ ಕಲಿಸುವಷ್ಟು ಪಾಠವನ್ನು ಜಗತ್ತಿನ ಯಾವ ವಿಶ್ವವಿದ್ಯಾಲಯಗಳು ಕಲಿಸುವುದಿಲ್ಲ.ವಾದದ ಮಾತಿಗಿಂತ ನಗುವಿನ ಮೌನ ಲೇಸು, ದಾರಿಯಲ್ಲಿ ಎಡವಿ ಬಿದ್ದರೆ ಯಾರು ನೋಡದಂತೆ ಎದ್ದೇಳಿ ಜೀವನದಲ್ಲಿ ಎಡವಿ ಬಿದ್ದರೆ ಎಲ್ಲರೂ ನೋಡುವಂತೆ ಎದ್ದೇಳಿ ನಮ್ಮ ಜಾತಕದಲ್ಲಿ ಶನಿ ಇದ್ದರು ಪರವಾಗಿಲ್ಲ ಆದರೆ ಸ್ನೇಹಿತರಲ್ಲಿ ಶಕುನಿ ಇರಬಾರದು ಎಂದರು.

ಎನ್.ಇ.ಎಸ್.ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿ ವಿದ್ಯಾರ್ಥಿಗಳು ಮುಚ್ಚಿದ ಅಗ್ನಿಕುಂಡ ಅವರು ತಮ್ಮ ಸಾಮಾರ್ಥ್ಯವನ್ನು ಹೊರ ತೆಗೆದರೆ ಅನೇಕ ಸಾಧನೆಗಳನ್ನು ಮಾಡಬಹುದು, ನಮ್ಮ ಕಾಲದಲ್ಲಿ ನಮಗೆ ಬೇಕಾದ ಆಯ್ಕೆಯ ಉದ್ಯೋಗ ಸಿಕ್ಕಿತು ಆದರೆ ಇಂದು ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ಪ್ರಯತ್ನ ಮುಖ್ಯ ಮನುಷ್ಯ ಹಕ್ಕಿಯಂತೆ ಹಾರಬಲ್ಲ ಮೀನಿನಂತೆ ಈಜಬಲ್ಲ ಆದರೆ ಒಳ್ಳೆಯ ಮನುಷ್ಯ ನಾಗಲುಕಲಿತಿಲ್ಲ ಎಂದರು.

ಸಭೆಯ ಅಧ್ಯಕ್ಷತೆಯನ್ನು ಪ್ರಾಂಶುಪಾಲ ವಿಜಯಕುಮಾರ್ ವಹಿಸಿದ್ದರು  ಡಾ.ಸಂತೋಷ್ ಎಲ್ಲರನ್ನೂ ಸ್ವಾಗತಿಸಿದರು 

ವಂದನಾರ್ಪಣೆಯನ್ನು ವಿಕ್ರಂ ನಿರ್ವಹಿಸಿದರು  ರಾಮಚಂದ್ರ ಆರ್ಥಿಕ ಸಲಹೆಗಾರರು ರಾಷ್ಟ್ರೀಯ ಶಿಕ್ಷಣ‌ಸಮಿತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Search