Posted on 15-03-2025 |
Share: Facebook | X | Whatsapp | Instagram
ಶಿವಮೊಗ್ಗ ಭಾರತದಲ್ಲಿ ಸ್ತ್ರೀ ವಾದ ಮೊದಲಿನಿಂದಲೂ ಇತ್ತು ಮತ್ತು ಸ್ತ್ರೀಯರು ಸಾಕಷ್ಟು ಹೋರಾಟದಲ್ಲಿ ಭಾಗಿಯಾಗಿದ್ದರು ಎಂದು ಸಮುದಾಯ ಶಿವಮೊಗ್ಗದ ಕಾರ್ಯದರ್ಶಿ ಕೆ.ಜಿ ವೆಂಕಟೇಶ್ ಹೇಳಿದರು.
ಅವರು ಇಂದು ಸಿಐಟಿಯು ಮಹಿಳಾ ಕಾರ್ಮಿಕರು ಡಿಸಿ ಕಚೇರಿಯ ಮುಂದುಗಡೆ ಮಹಿಳಾ ದಿನಾಚರಣೆ ಮತ್ತು ಹೋರಾಟದ ದಿನದ ಅಂಗವಾಗಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕರ್ನಾಟಕದಲ್ಲಿ 12 ಶತಮಾನದಲ್ಲಿಯೇ ಅಕ್ಕಮಹಾದೇವಿ ಲಿಂಗ ತಾರತಮ್ಯ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಿ ತನ್ನ ಗಂಡನನ್ನು ತ್ಯಜಿಸಿ ಅನುಭವ ಮಂಟಪವನ್ನು ಸೇರಿಕೊಂಡು ಅಲ್ಲಮ ಪ್ರಭುಗಳ ಬಳಿ ಇದ್ದು ಜ್ಞಾನ ಸಂಪಾದಿಸಿದಳು. ಅಲ್ಲಮ ಪ್ರಭು ಬಸವಣ್ಣ ಇನ್ನಿತರ ಶರಣರ ಸಾಲಿಗೆ ಅಕ್ಕಮಹಾದೇವಿ ಸೇರಿದ್ದಳು. ಆಕೆಯ ವಚನಗಳು ಸ್ತ್ರೀ ಸಮಾನತೆಯ ದೃಷ್ಟಿಕೋನದಿಂದ ಕೂಡಿದೆ
ಕೆಳದಿಯ ರಾಣಿ ಚೆನ್ನಮ್ಮ ಸತಿ ಸಹಗಮನ ಪದ್ದತಿಯ ವಿರುದ್ಧ ದಂಗೆ ಎದ್ದು ತಾನು ವಿಧವೆ ಯಾಗಿದ್ದರು ರಾಣಿಯಾಗಿ 25 ವರ್ಷ ಕೆಳದಿ ರಾಜ್ಯವನ್ನು ಆಳಿದಳು. ಅಷ್ಟೇ ಅಲ್ಲದೆ ಸತಿ ಸಹಗಮನ ಪದ್ಧತಿಯನ್ನುನಿಲ್ಲಿಸಿದಳು. ಆಕೆಯ ಮಾವ ಶಿಸ್ತಿನ ಶಿವಪ್ಪ ನಾಯಕ ತೀರಿಕೊಂಡಾಗ ಆತನೊಂದಿಗೆ ಅವನ ನಾಲ್ಕು ಹೆಂಡತಿಯರು ಸಹಗಮನ ಮಾಡಿದ್ದರು.
ಸಾವಿತ್ರಿಬಾಯಿ ಪುಲೆ ತಾನು ವಿದ್ಯೆಯನ್ನು ಕಲಿತದ್ದು ಮಾತ್ರವಲ್ಲದೆ ಇತರೆ ಅನಕ್ಷರಸ್ಥ ಮಹಿಳೆಯರಿಗೂ ಕೂಡ ವಿದ್ಯೆಯನ್ನು ಹೇಳಿಕೊಟ್ಟು ಮೊದಲ ಶಿಕ್ಷಕಿ ಎಂದು ಹೆಸರಾದಳು
ಭಾರತದಲ್ಲಿ ಸ್ತ್ರೀವಾದ ಎಂಬ ಸಂಘಟನೆ ಮುಖಾಂತರ ಹೋರಾಟ ನಡೆಯದಿದ್ದರೂ ಕೂಡ ಹೆಣ್ಣು ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ಆರ್ಯರ ಕಾಲದಿಂದಲೂ ಪುರುಷ ಪ್ರಧಾನ ಸಮಾಜದ ವಿರುದ್ಧ ಹೋರಾಟವನ್ನು ಮಾಡಿದ್ದರು ಯಜ್ಞವಲ್ಕ ಮಹರ್ಷಿಯೊಂದಿಗೆ ವಾದ ಮಾಡಿದ ಗಾರ್ಗಿ ಆ ಕಾಲದಲ್ಲಿ ಸರಿ ಸಮಾನವಾದ ವಾದವನ್ನು ಮಂಡಿಸಿದಳು
ಇಂದು ಸ್ತ್ರೀಯರ ಹೋರಾಟದ ಫಲವಾಗಿ ವರದಕ್ಷಿಣೆ ಪದ್ಧತಿ ಸತಿ ಸಹಗಮನ ಪದ್ಧತಿ ಸಂಪೂರ್ಣವಾಗಿ ನಿಂತುಹೋಗಿದೆ, ಆದರೂ ಕೂಡ ಅಲ್ಲೊಂದು ಇಲ್ಲೊಂದು ಮರ್ಯಾದೆ ಹತ್ಯೆ ಪ್ರಕರಣ ನಡೆಯುತ್ತಲೇ ಇದೆ. ಹಾಗಾಗಿ ತಮ್ಮ ರಕ್ಷಣೆಗಾಗಿ ಹೆಣ್ಣು ಮಕ್ಕಳು ಹೋರಾಟ ಮಾಡುವ ಅಗತ್ಯ ಹೆಚ್ಚಾಗಿದೆ.
ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸಿದ್ದಾಂತ ಜಾರಿಯಲ್ಲಿದ್ದು ಕೇವಲ ತಿಂಗಳಿಗೆ 3500 ಗಾಗಿ ಕೆಲಸ ಮಾಡುವ ನೀವುಗಳು ಸಂಘಟನೆಯನ್ನು ದುರ್ಬಲಗೊಳಿಸಿಕೊಂಡರೆ ಶಕ್ತಿ ಸಾಕಾಗುವುದಿಲ್ಲ ಕಲಿಯುಗದಲ್ಲಿ ಸಂಘವೇ ಶಕ್ತಿ . ಇಂಗ್ಲೆಂಡ್ ಅಂತ ದೇಶ ಸ್ವತಂತ್ರಗೊಂಡು ಹಲವಾರು ವರ್ಷಗಳೇ ಆದರೂ ಅಲ್ಲಿಯ ಸ್ತ್ರೀಯರಿಗೆ ಮತದಾನದ ಹಕ್ಕು ಇರಲಿಲ್ಲ ಆದರೆ ಭಾರತ ದೇಶದಲ್ಲಿ ಸ್ವಾತಂತ್ರ ಬಂದು ಸಂವಿಧಾನ ರಚನೆಯಾದ ವರ್ಷವೇ ದೇಶಕ್ಕೆ ಗಣರಾಜ್ಯ ಬಂದು ಮೊದಲ ಮತದಾನದಲ್ಲಿಯೇ ಸ್ತ್ರೀಯರಿಗೆ ಮತದಾನದ ಹಕ್ಕು ಸಿಕ್ಕಿತು. ನಮ್ಮ ವಚನಗಾರ್ತಿಯಲ್ಲಿ ಪುರುಷರಿಗೆ ಸರಿ ಸಮಾನವಾಗಿ ಸ್ತ್ರೀಯರು ಇದ್ದಾರೆ. ಹಾಗಾಗಿ ಹೆಳವನ ಕಟ್ಟೆ ಗಿರಿಯಮ್ಮನಂತವರು ಪೆಣ್ಣು ಪೆಣ್ಣಂದೇತಕೇ ಬೀಳುಗಳೆವಿರಿ
ಕಣ್ಣು ಕಾಣದ ಗಾವಿಲರ ಕುವರ ನಾದೊಡೆ ಬಂದ ಗುಣವೇನದರಿಂದ ಕುವರಿಯಾದೊಡನೆ ಕುಂದೇನು ಎಂಬ ಕವಿತೆಯನ್ನು ಬರೆದಿದ್ದಾಳೆ ನೂರಾರು ಜಾನಪದ ಗೀತೆಗಳು ಸ್ತ್ರೀಯರ ಹೋರಾಟದ ಹಾಡುಗಳು ಆಗಿದೆ ಎಂದರು.
ನಂತರ ಲಂಬಾಣಿ ನೃತ್ಯ ಹೋರಾಟದ ಹಾಡುಗಳು ಜಾನಪದ ನೃತ್ಯ ನಡೆದವು.
ಈ ಸಂದರ್ಭದಲ್ಲಿ ಸಮುದಾಯದ ಪ್ರಭಾಕರನ್ ಮಹಿಳಾ ಸಂಘದ ಅಧ್ಯಕ್ಷೆ ಹನುಮಮ್ಮ ನಾರಾಯಣ್ ಷಣ್ಮುಖಪ್ಪ ಹರಪನಹಳ್ಳಿ ಸಮುದಾಯ ಮುಖಂಡರು ಹಾಜರಿದ್ದರು.