Posted on 12-03-2025 |
Share: Facebook | X | Whatsapp | Instagram
ತೀರ್ಥಹಳ್ಳಿ ಮಾ 12 ಮಹಾತ್ಮ ಗಾಂಧೀಜಿಯವರು ಯಂತ್ರದ ವಿರೋಧಿಯಲ್ಲ ಎಂದು ನಿವೃತ್ತ ಉಪನ್ಯಾಸಕ ಮತ್ತು ಶಿವಮೊಗ್ಗದ ಬಹುಮುಖಿ ಸಂಘಟನೆಯ ಪ್ರಮುಖರಾದ ಡಾ. ನಾಗಭೂಷಣ್ ಹೇಳಿದರು. ಗಾಂಧಿ ತತ್ವ ಸ್ಮಾರಕ ನಿಧಿ ಬೆಂಗಳೂರು ಮತ್ತು ತುಂಗಾ ಕಾಲೇಜು ತೀರ್ಥಹಳ್ಳಿ ಕಡಿದಾಳು ಸ್ಮಾರಕ ಪ್ರತಿಷ್ಠಾನ ಸಮಿತಿ ಆಶ್ರಯದಲ್ಲಿ ತಾಲೂಕಿನ ಹಾರೋಗೊಳಿಗೆಯಲ್ಲಿ ನಡೆದ ರಾಜ್ಯಮಟ್ಟದ ಗಾಂಧಿ ತತ್ವ ಪ್ರಣಿತ ರಾಜ್ಯಮಟ್ಟದ ಯುವಜನ ಅಂತರ ಕಾಲೇಜು ಎನ್ಎಸ್ಎಸ್ ಶಿಬಿರದಲ್ಲಿ ಗಾಂಧಿ ಮತ್ತು ಯುವಜನತೆ ಎಂಬ ವಿಷಯ ಕುರಿತು ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು
ಗಾಂಧೀಜಿಯವರು ಯಂತ್ರಗಳು ಮನುಷ್ಯನ ಸ್ಥಾನವನ್ನು ಆಕ್ರಮಿಸಬಾರದು ಆದರೆ ಅದು ಈಗಿರುವ ಮನುಷ್ಯನ ಜೀವನವನ್ನು ಇನ್ನಷ್ಟು ಸುಧಾರಿಸಿದರೆ ಅದನ್ನು ಒಪ್ಪುತ್ತೇನೆ ಎಂದಿದ್ದಾರೆ, ಕೈಯಿಂದ ನಡೆಯಬೇಕಾದ ಅಥವಾ ಮಾಡಬಹುದಾದ ಕೆಲಸಗಳಿಗೂ ಯಂತ್ರವನ್ನು ಉಪಯೋಗಿಸುವುದನ್ನು ವಿರೋಧಿಸಿ ಚರಕ ಮತ್ತು ಮಗ್ಗದ ಉದ್ದಿಮೆಯಲ್ಲಿ ವಿದ್ಯುಚ್ಛಕ್ತಿಯನ್ನು ಉಪಯೋಗಿಸಬಾರದು ಉಪಯೋಗಿಸಿ ಕೆಲಸ ಮಾಡಿದರೆ ನೂರಾರು ಜನ ಕೆಲಸಗಾರರು ಮುಂದೆ ಕೆಲಸವನ್ನು ಕಳೆದುಕೊಳ್ಳಬಹುದು.
ಯಂತ್ರಗಳು ಯಂತ್ರಗಳೇ ಹೊರತು ಭಾವನೆ ಸಹಿತವಾದ ಮನುಷ್ಯರಲ್ಲ ಮನುಷ್ಯನ ಶ್ರಮಕ್ಕೆ ಯಂತ್ರಗಳು ಸಹಾಯಕವಾಗಿಯೇ ಇರಬೇಕು ಹೊರತು ಅದು ಕೆಲವೇ ಜನ ಶ್ರೀಮಂತರ ಕೈಗೆ ಸಿಕ್ಕು ಅವರ ಸಂಪತ್ತನ್ನು ಹೆಚ್ಚಿಸುವಂತಹ ಕೆಲಸ ಮಾಡಬಾರದು. ಮತ್ತು ಮನುಷ್ಯನ ಮೇಲೆ ಯಂತ್ರಗಳು ಸವಾರಿ ಮಾಡಬಾರದು ,
ಗಾಂಧೀಜಿಯವರು ಚಾರ್ಲಿ ಚಾಪ್ಲಿನ್ ಜೊತೆ ಯಂತ್ರದ ಬಗ್ಗೆ ಅದರಿಂದ ಸ್ವಾತಂತ್ರ ಮತ್ತು ಮನುಷ್ಯ ಹಾಳಾಗುವುದರ ಬಗ್ಗೆ ಮಾತನಾಡಿದ್ದರು ಮುಂದೆ ಚಾರ್ಲಿ ಚಾಪ್ಲಿನ್ ಮಾಡರ್ನ್ ವರ್ಲ್ಡ್ ಎಂಬ ಚಿತ್ರವನ್ನು ತೆಗೆದು ಅದರಲ್ಲಿ ಯಂತ್ರಗಳು ಮನುಷ್ಯನ ಭಾವನೆಯನ್ನು ಹೇಗೆ ನಾಶ ಮಾಡುತ್ತವೆ ಎಂಬುದನ್ನು ತಿಳಿಸಿದ್ದಾರೆ ಎಂದರು.
ಚಿತ್ರದುರ್ಗದ ನಿವೃತ್ತ ಉಪನ್ಯಾಸಕ ಸ್ವಾಮಿಯವರು ಕೈಯಿಂದ ಮಾಡಬಹುದಾದ ಚಿಕ್ಕಪುಟ್ಟ ಆಟದ ಸಾಮಾನುಗಳಿಂದ ಹಿಡಿದು ಮನುಷ್ಯನಿಗೆ ದಿನನಿತ್ಯ ಉಪಯೋಗವಾಗುವ ಅನೇಕ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ ಚಿಕ್ಕಚರಕ ಒಂದನ್ನು ತಂದು ಅದರಿಂದ ನೂಲನ್ನು ಹೇಗೆ ತೆಗೆಯುವುದು ಎಂಬುದನ್ನು ತೋರಿಸಿ ಒಂದು ಕೆಲಸವನ್ನು ಮಾಡುತ್ತಲೇ ಇದನ್ನು ಮಾಡುತ್ತಾ ಹೋಗಬಹುದು ನೀವು ಟಿವಿಯನ್ನು ನೋಡುತ್ತಿದ್ದರೆ ಅದರ ಜೊತೆಗೆ ನಿಮ್ಮ ಕೈ ರಾಟೆಯನ್ನು ಸುತ್ತುತ್ತಿದ್ದರೆ ದಾರಾ ತನ್ನಷ್ಟಕ್ಕೆ ತಾನೆ ಆಗುತ್ತೆ ಎಂದು ಹೇಳಿ ಪ್ರಾತ್ಯಕ್ಷಿಕೆಯನ್ನು ತೋರಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನರ್ಮದಾ ಎಂ.ವಿ.ಅವರು ಮಾತನಾಡಿ ಜಿ ಬಿ. ಶಿವರಾಜ್ ಹಾಗೂ ವಿದ್ಯಾರ್ಥಿಗಳ ಶಿಸ್ತು ಸಮಯ ಪಾಲನೆ ಕೆಲಸಗಳನ್ನು ಶ್ಲಾಘಿಸಿದರು.
ಕ್ರಾಂತಿ ಕಿಡಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಕೆ.ಜಿ. ವೆಂಕಟೇಶ್ ಅವರು ಅಧ್ಯಕ್ಷತೆ ವಹಿಸಿದ್ದು ಎನ್ಎಸ್ಎಸ್ ಮತ್ತು ಶಿವರಾಜ್ ಸರ್ ಹಾಗೂ ಎನ್ಎಸ್ಎಸ್ ನೊಂದಿಗಿನ ತಮ್ಮ ವಿಶೇಷ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಹಂಚಿಕೊಂಡು ಹಿಮಾಲಯ ಚರಣದಲ್ಲಿ ತಾವು ಅನುಭವಿಸಿದ ಸಂತೋಷವನ್ನು ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ನಿಂದ ಆಗುವ ಸಂತೋಷ ವಿವರಿಸಿ ಅದರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅನುಭವ ಮಂಟಪ ತಂಡದ ವಿದ್ಯಾರ್ಥಿಗಳು ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆ ಮಾಡಿದರು. ಈ ಏನ್ ಎಸ್ ಎಸ್ ಕ್ಯಾಂಪಿನ ವಿದ್ಯಾರ್ಥಿಗಳು ಕಡಿದಾಳು ಮಂಜಪ್ಪ ಸ್ಮಾರಕವನ್ನು ನಿರ್ಮಿಸಿ ಹಾರೋಗೊಳಿಗೆಯ ಪ್ರಮುಖ ವಿಶೇಷ ಸ್ಥಳವನ್ನಾಗಿ ಇದನ್ನು ಸಜ್ಜುಗೊಳಿಸಿದ್ದಾರೆ.