ಕನ್ನಡ ಕೂಡ ಅನ್ನದ ಭಾಷೆ ಆಗಬೇಕು. ಶ್ರೀಮತಿ ಕೆಆರ್ ಉಮಾದೇವಿ ಉರಾಳ

Culture Literature

Posted on 11-03-2025 |

Share: Facebook | X | Whatsapp | Instagram


ಕನ್ನಡ ಕೂಡ ಅನ್ನದ ಭಾಷೆ ಆಗಬೇಕು.  ಶ್ರೀಮತಿ ಕೆಆರ್ ಉಮಾದೇವಿ ಉರಾಳ

ತೀರ್ಥಹಳ್ಳಿ ಮಾ.10 ತಾಲೂಕಿನ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಶ್ರೀಮತಿ ಕೆ ಆರ್ ಉಮಾದೇವಿ ಉರಾಳ ಕನ್ನಡ ಕೂಡ ಅನ್ನದ ಭಾಷೆ ಆಗಬೇಕು ಆಗ ಮಾತ್ರ ಹೆಚ್ಚು ಜನ ಕನ್ನಡವನ್ನು ಕಲಿಯಲು ಉತ್ತೇಜನ ಸಿಗುತ್ತದೆ.ಎಂದು ಇಲ್ಲಿನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಮ್ಮೇಳನದಲ್ಲಿ ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ತಿಳಿಸಿದರು. 

     ಇಂದು ಕನ್ನಡ ಭಾಷೆಗೆ ಹಲವಾರು ಸಮಸ್ಯೆಗಳ ಕರಿ ನೆರಳು ಕವಿದಿರುವುದನ್ನು ಕಾಣುತ್ತೇವೆ. ಕರ್ನಾಟಕಕ್ಕೆ ಸೇರಬೇಕಾದ ಕಾಸರಗೋಡು ಕೇರಳದ ಪಾಲಾಗಿದೆ, ಹಾಗೆ ಕಲಕೋಟೆ ಜತ್ತಿ ಸೊಲ್ಲಾಪುರ ಭಾಗಗಳು ಮಹಾರಾಷ್ಟ್ರಕ್ಕೆ ಸೇರುತ್ತವೆ ಬೆಳಗಾವಿ ರಾಯಚೂರು ಕೋಲಾರ ಬಳ್ಳಾರಿ ಕರ್ನಾಟಕದಲ್ಲಿ ಇದ್ದರೂ ಅಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿದ್ದರೂ ಅಲ್ಲಿ ಕನ್ನಡ ತಿಳಿಯದ ಮಲಯಾಳಿ ಭಾಷೆಯ ಶಿಕ್ಷಕಿಯರನ್ನ ನೇಮಿಸಿ. ಮಕ್ಕಳು ಅಭಿಮಾನಿಯಾಗಿ ಕನ್ನಡ ಕೈಬಿಡುವಂತೆ ಮಾಡಲಾಗುತ್ತಿದೆ ನಮ್ಮ ಕರ್ನಾಟಕದ ಬೆಳಗಾವಿಯಲ್ಲಿ ಕನ್ನಡ ಭಾಷೆ ಮಾತನಾಡಿದ ಬಸ್ ನಿರ್ವಾಹಕನನ್ನು ಥಳಿಸಲಾಗಿದೆ, ದೇಶದ ಯಾವುದೇ ರಾಜ್ಯವನ್ನು ಗಮನಿಸಿದರು ಅಲ್ಲಿನ ರಾಜ್ಯ ಭಾಷೆ ಜನಭಾಷೆ ಆಗಿರುತ್ತದೆ ಆದರೆ ಕನ್ನಡದ ಹಾಡಿದ್ದಾನೆ ಬೆಂಗಳೂರಿನಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಕನ್ನಡಿಗರೇ ಇಂಗ್ಲೀಷ್ ಹಿಂದಿ ಹೆಚ್ಚು ಬಳಸುತ್ತಾರೆ ಮತ್ತು ಇಲ್ಲಿನ ಶ್ರೀಮಂತರು ಕನ್ನಡ ಮಾತನಾಡಲು ಮುಜುಗರ ಪಡುತ್ತಿದ್ದಾರೆ ಇದು ಇಂದು ಜಿಲ್ಲೆಗಳಿಗೂ ಕೂಡ ಹಬ್ಬುತ್ತಿದೆ. 

     ಕರ್ನಾಟಕದಲ್ಲಿ ಉದ್ಯೋಗ ಬಯಸುವವರಿಗೆ ಕನಿಷ್ಠ ಕನ್ನಡ ಭಾಷೆ ಜ್ಞಾನ ಇರಬೇಕು ಎಂಬ ಕಾನೂನನ್ನು ರೂಪಿಸಲೇಬೇಕು ಇಂದು ಕನ್ನಡದ ಮಧ್ಯಮ ವರ್ಗ ಇಂಗ್ಲೀಷನ ಹಿಂದೆ ಬಿದ್ದಿದೆ ಕೊನೆ ಪಕ್ಷ ಪ್ರಾಥಮಿಕ ಶಿಕ್ಷಣವನ್ನಾದರೂ ಸಂಪೂರ್ಣ ಕನ್ನಡವನ್ನಾಗಿ ಮಾಡಬೇಕು 

ಕನ್ನಡವನ್ನು ಉಳಿಸಲು ಕನ್ನಡದ ಜನ ಕೆಲವೇ ಸಣ್ಣಪುಟ್ಟ ಕಾರ್ಯಕ್ರಮ ಹಾಕಿಕೊಂಡರು ಸಾಕು. ಪೋಷಕರು ಮನೆಯಲ್ಲಿ ಶುದ್ಧವಾದ ಕನ್ನಡದಲ್ಲಿ ಮಾತನಾಡಬೇಕು ಕನ್ನಡದ ಪುಸ್ತಕಗಳನ್ನು ಸಂಗ್ರಹಿಸಿ ಓದು ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಶಾಲೆಗಳಲ್ಲಿ ಕನ್ನಡ ಕವನ ಚುಟುಕು ಸಣ್ಣ ಕಥೆ ಬರೆಯಲು ಮತ್ತು ಗೋಡೆ ಪತ್ರಿಕೆಯನ್ನು ಮಾಡಿ ಕನ್ನಡದ ಬರಹಗಳನ್ನು ಹಾಕುವ ಅಭ್ಯಾಸವನ್ನು ಮಾಡಬೇಕು ಕನ್ನಡದ ಮೇರು ಸಾಹಿತಿಗಳ ಕಥೆಗಳನ್ನು ಮಕ್ಕಳಿಗೆ ತಿಳಿಸಬೇಕು ಮಕ್ಕಳದ್ದೆ ಆದ ಚಿಕ್ಕ ಗ್ರಂಥಾಲಯವನ್ನು ಸ್ಥಾಪಿಸಬೇಕು. ಕುವೆಂಪುರವರು ಕಾವ್ಯವನ್ನು ಬರೆಯುವ ಮೊದಲು ಕಾಡು ಬರಿಯ ಕಾಡಾಗಿತ್ತು ಕುವೆಂಪು ಕಾಡಿನ ಸೌಂದರ್ಯವನ್ನು ವರ್ಣಿಸಿದ ಮೇಲೆ ಅದನ್ನು ನೋಡುವ ದೃಷ್ಟಿಯೇ ಬದಲಾಯಿತು. ಕರ್ನಾಟಕದಲ್ಲಿ ಪ್ರಕೃತಿಯನ್ನು ಅದರಲ್ಲೂ ಮಲೆನಾಡಿನಲ್ಲಿ ವಾರವಿ ಜಲ ಯೋಜನೆಗಾಗಿ ತಾಲೂಕಿನ ಅರ್ಧದಷ್ಟು ಗ್ರಾಮಗಳನ್ನು ಮುಳುಗಿಸಲಾಯಿತು. ಶರಾವತಿ ಯೋಜನೆಯಿಂದ ಸಂತ್ರಸ್ತರಾದ ಅನೇಕರಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ, ರಸ್ತೆ ಅಗಲೀಕರಣಕ್ಕಾಗಿ ಮಲೆನಾಡಿನ ರಸ್ತೆ ಉದ್ದಕ್ಕೂ ಬೆಳೆದ ಸಾವಿರಾರು ಮರಗಳ ಮಾರಣ ಹೋಮವನ್ನು ಮಾಡಲಾಯಿತು. ಇಷ್ಟೆಲ್ಲ ತೊಂದರೆಗಳು ಕನ್ನಡಕ್ಕೆ ಕರ್ನಾಟಕಕ್ಕೆ ಆದರೂ ಕೂಡ ನಾವು ತುಂಬಾ ಚಿಂತಿಸಿ ಹೆಮ್ಮೆಟ್ಟಬಾರದು. ಕನ್ನಡ ಭಾಷೆ ಇಂದು ಧ್ಯಾನಸ್ಥ ಸ್ಥಿತಿಯಲ್ಲಿ ಇರುವುದು ಹೂವು ಮಿಡಿ ಚೀಪಾಯಿ ತೋರಗಾಯಿ ಹಣ್ಣಾಗಿ ಕೆಂಪಗೆ ಹೊರಹೊಮ್ಮಬೇಕು ಆಗ ಮಾತ್ರ ಕನ್ನಡ ಉಳಿಯುತ್ತದೆ ಪಾಶ್ಚ್ಯಾತರ ಜ್ಞಾನ ಸಂಪತ್ತನ್ನು ವಿಜ್ಞಾನ ತಂತ್ರಜ್ಞಾನದ ಆವಿಷ್ಕಾರಗಳನ್ನು ಕನ್ನಡದಲ್ಲಿ ಕಲಿತು ಮುಂದೆ ಸಾಗೋಣ ಜನರು ಕನ್ನಡದ ಕಡೆ ತಿರುಗಿ ಬರುತ್ತಾರೆ ಎಂಬ ಆಶಯದೊಂದಿಗೆ ಮಾತುಗಳನ್ನು ಮುಗಿಸಿದರು. 

ವೇದಿಕೆಯಲ್ಲಿ ಹಿಂದಿನ ಸಾಹಿತ್ಯ ಸಮ್ಮೇಳನದ ಸರ್ವಾ ದ್ಯಕ್ಷರಾದ ನವೀನ್ ಕುಮಾರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜೆಕೆ ರಮೇಶ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಮಂಜುನಾಥಗೌಡ ತಾಲೂಕು ಕಸಾಪ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಬೆಂಗಳೂರಿನಿಂದ ಆಗಮಿಸಿದ ಚಿತ್ರ ಸಂಗೀತದ ಕವಿರಾಜ್, ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಡಿ ಮಂಜುನಾಥ್ ಹಾಗೂ ಎಲ್ಲ ತಾಲೂಕಿನ ಅಧ್ಯಕ್ಷರುಗಳು ಕಾರ್ಯದರ್ಶಿಗಳು ಭಾಗವಹಿಸಿದ್ದರು.

Search